Home / ಹುಬ್ಬಳ್ಳಿ / ಕಳೆದುಕೊಂಡ ಮೊಬೈಲ್​ಗಳನ್ನ ಹಿಂದಿರುಗಿಸಿದ ಪೊಲೀಸರು

ಕಳೆದುಕೊಂಡ ಮೊಬೈಲ್​ಗಳನ್ನ ಹಿಂದಿರುಗಿಸಿದ ಪೊಲೀಸರು

Spread the love

ಹುಬ್ಬಳ್ಳಿ:ಇತ್ತೀಚೆಗೆ ಮೊಬೈಲ್ ಕಳೆದು ಹೋಯಿತು ಎಂದರೆ ಅದನ್ನು ಮರೆತು ಬಿಡುವುದೇ ವಾಸಿ ಎನ್ನುವಂತಾಗಿದೆ. ಆದರೆ ಅವಳಿ ನಗರದ ಖಾಕಿ ಪಡೆ ಅದಕ್ಕೆ ಅಪವಾದ ಎಂಬಂತೆ ಕೆಲಸ ಮಾಡಿದೆ. ಸಾರ್ವಜನಿಕರಿಗೆ ಉತ್ತಮ ರಕ್ಷಣೆ ನೀಡಿ ಪೊಲೀಸ್ ಸೇವೆ ನೀಡುವ ಮೂಲಕ ಸಾಕಷ್ಟು ಜನಮನ್ನಣೆಗಳಿಸಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪೊಲೀಸ್ ಕಮೀಷನರೇಟ್ ಈಗ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದೆ.

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಾರ್ವಜನಿಕರು ಕಳೆದುಕೂಂಡ ಮೊಬೈಲ್​ಗಳನ್ನು ಪತ್ತೆ ಮಾಡಲು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ.ಬಸರಗಿ ಮಾರ್ಗದರ್ಶನದಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್​ಪೆಕ್ಟರ್​ ಸಂಗಮೇಶ ಐ ದಿಡಿಗಿನಾಳ ಮತ್ತು ಪೊಲೀಸ್ ಆಯುಕ್ತರ ಕಾರ್ಯಾಲಯದ ತಾಂತ್ರಿಕ ವಿಭಾಗದ ಸಿಬ್ಬಂದಿಗಳು ಸಾರ್ವಜನಿಕರು ಕಳೆದುಕೊಂಡಿದ್ದ ಸುಮಾರು 78 ಮೊಬೈಲ್​ಗಳನ್ನು ಪತ್ತೆ ಮಾಡಿ ಮೊಬೈಲ್ ಕಳೆದುಕೊಂಡ ಮಾಲೀಕರಿಗೆ ಒಪ್ಪಿಸಿದ್ದಾರೆ. ಈ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಕಳೆದುಕೊಂಡ ಮೊಬೈಲ್​ಗಳನ್ನ ಪೊಲೀಸರು ಹಿಂದಿರುಗಿಸಿದರು

78 ಮೊಬೈಲ್​ಗಳನ್ನ ಸಾರ್ವಜನಿಕರಿಗೆ ಪೊಲೀಸರು ಮರಳಿಸಿದರು

ಅವಳಿ ನಗರದಲ್ಲಿ ಹೆಚ್ಚಾಗಿ ಮೊಬೈಲ್ ಕಳ್ಳತನ ಕೇಸ್​ಗಳನ್ನ ಪರೀಶಿಲನೆ ಮಾಡಿದ ಪೊಲೀಸ್ ಆಯುಕ್ತರು ಅವುಗಳನ್ನ ಪತ್ತೆ ಹಚ್ಚುವುದಕ್ಕೆ ಟೀಮ್ ರಚನೆ ಮಾಡಿದ್ದರು. ಈ ಪರಿಣಾಮ ಸದ್ಯ ಡಿಸಿಪಿ ನೈತೃತ್ವದ ತಂಡ ಅವಳಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಸುಮಾರು 100 ಕ್ಕೂ ಹೆಚ್ಚು ಮೊಬೈಲ್ ಕಳವುಗಳನ್ನ ಭೇದಿಸಿದೆ. ಆ ಮೂಲಕ ಸುಮಾರು 78 ಮೊಬೈಲ್ ಮಾಲೀಕರನ್ನು ಗುರುತಿಸಿ ಅವರಿಗೆ ತಮ್ಮ ತಮ್ಮ ಮೊಬೈಲ್​ಗಳನ್ನ ಹಸ್ತಾಂತರ ಮಾಡಿದ್ದಾರೆ. ಕಡಿಮೆ ಬೆಲೆ ಮೊಬೈಲ್ ಅಂತ ಹೇಳಿ ನಿರ್ಲಕ್ಷ್ಯ ಮಾಡುವ ಪೊಲೀಸರ ನಡುವೆ ಅವಳಿ ನಗರದ ಖಾಕಿ ಪಡೆ ಸಾರ್ವಜನಿಕರ ಮೊಬೈಲ್​ಗಳನ್ನು ಹುಡುಕಿ ಅವರಿಗೆ ಹಿಂತುರಿಗಿಸಿದ್ದಕೆ ಸದ್ಯ ಜನರು ಕೂಡಾ ಖಾಕಿ ಪಡೆ ಕೆಲಸಕ್ಕೆ ಬೇಷ್ ಎನ್ನುತ್ತಿದ್ದಾರೆ.


Spread the love

About Laxminews 24x7

Check Also

ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

Spread the loveಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ