ಬೆಳಗಾವಿ: ಆಟವಾಡುತ್ತಿದ್ದ ಬಾಲಕ ದೇವಸ್ಥಾನದ ಕಲ್ಯಾಣಿಯಲ್ಲಿ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯ ಕಪಿಲೇಶ್ವರ ಮಂದಿರದ ಬಳಿ ನಡೆದಿದೆ. ಮೃತ ಬಾಲಕನನ್ನು 7 ವರ್ಷದ ಸ್ವರಾಜ್ ಎಂದು ಗುರುತಿಸಲಾಗಿದೆ. ಶನಿವಾರ ಸ್ನೇಹಿತರ ಜೊತೆ ಕಪಿಲೇಶ್ವರ ಮಂದಿರಕ್ಕೆ ತೆರಳಿದ್ದ ಬಾಲಕ ಮರಳಿ ಮನೆಗೆ ವಾಪಸ್ ಆಗಿಲ್ಲ. ಇದರಿಂದ ಗಾಬರಿಯಾದ ಪೋಷಕರು ಖಡೇಬಜಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಪಿಲೇಶ್ವರ ಮಂದಿರದ ಬಳಿ ಬಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಆದರೂ ಬಾಲಕನ ಸುಳಿವಿಲ್ಲ. …
Read More »ವಿಜಯಪುರದ ‘BSNL’ ಕಚೇರಿ ಮೇಲೆ ‘CBI’ ಅಧಿಕಾರಿಗಳ ದಾಳಿ ; ಮಹತ್ವದ ದಾಖಲೆಗಳು ವಶಕ್ಕೆ
ವಿಜಯಪುರ : ನಗರದ ಬಿಎಸ್‌ಎನ್‌ಎಲ್ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಬಸವೇಶ್ವರ ವೃತ್ತದ ಬಳಿಯಿರುವ ಬಿ ಎಸ್ ಎನ್ ಎಲ್ ಕಚೇರಿ ಮೇಲೆ ದಾಳಿ ನಡೆಸಿದೆ. ಫೈಬರ್ ಕೇಬಲ್ ಅಳವಡಿಕೆ ವಿಚಾರದಲ್ಲಿ ಅಕ್ರಮ ಎಸಗಿರುವ ಆರೋಪದ ಮೇರೆಗೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕೇಂದ್ರದ ಡಿಜಿಟಲ್ ಇಂಡಿಯಾ ಯೋಜನೆಯಡಿ ಫೈಬರ್ ಕೇಬಲ್ ಗಳನ್ನು ಅಳವಡಿಕೆ ಮಾಡಲಾಗಿತ್ತು, ಗ್ರಾ.ಪಂ ಗೆ ಫೈಬರ್ …
Read More »ಬಿಎಸ್‌ಎನ್‌ಎಲ್ ಕಂಬವನ್ನೂ ಸೇರಿಸಿ ಕಟ್ಟಡ ನಿರ್ಮಾಣ!
ಬೆಂಗಳೂರು: ರಸ್ತೆ ಬದಿ ಇದ್ದ ಬಿಎಸ್‌ಎನ್‌ಎಲ್ ಕಂಬವನ್ನೇ ಸೇರಿಸಿಕೊಂಡು ಕಟ್ಟಡವೊಂದನ್ನು ಕೆ.ಜಿ.ಹಳ್ಳಿಯಲ್ಲಿ ಕಟ್ಟಲಾಗಿದೆ. ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ಈ ಚಿತ್ರ ಕಳುಹಿಸಿದ್ದಾರೆ. ಅದರ ಪ್ರಕಾರ, ಗಾಂಧಿ ರಸ್ತೆಯಲ್ಲಿ ಬಿಎಸ್‌ಎನ್‌ಎಲ್ ಕೇಬಲ್‌ಗಳ ಅಳವಡಿಸಿರುವ ಕಂಬ ಇದೆ. ಹೊಸದಾಗಿ ಕಟ್ಟಡ ನಿರ್ಮಿಸಿದವರು ಕಂಬವನ್ನೇ ಕಟ್ಟಡದೊಳಕ್ಕೆ ಸೇರಿಕೊಂಡಿದ್ದಾರೆ. ‘ರಸ್ತೆ ಒತ್ತುವರಿ ಮಾಡಿರುವುದಲ್ಲದೇ ಸರ್ಕಾರ ಹಾಕಿರುವ ಕಂಬವನ್ನೇ ಮನೆಯೊಳಕ್ಕೆ ಸೇರಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಶುಕ್ರವಾರ ಈ ಚಿತ್ರ ತೆಗೆಯಲಾಗಿತ್ತು. ಶನಿವಾರ ಬೆಳಿಗ್ಗೆ …
Read More »ಇಂಥವರನ್ನ ನಂಬಿದ್ರೆ ಲೈಫ್ ಬರ್ಬಾದ್: ಬಂಧಿತ ಮೂವರು ಸಹೋದರರ ಕರಾಳ ಮುಖವಿದು..!
ಬೆಂಗಳೂರು: ನೂರಾರು ಅಮಾಯಕ ಜನರಿಗೆ ಚೀಟಿ ಹೆಸರಲ್ಲಿ ಯಾಮಾರಿಸಿ ಲಕ್ಷ ಲಕ್ಷ ಹಣ ದೋಚಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಶದಲ್ಲಿರುವ ವೆಂಕಟೇಶ ಬಾಬು, ಲೋಕೇಶ್ ಬಾಬು ಮತ್ತು ನಟರಾಜ ಬಾಬು ಎಂಬ ಐನಾತಿ ಸಹೋದರರು ಅಗರಬತ್ತಿ ಕಂಪನಿ, ನಟರಾಜ ಟ್ರೇಡರ್ಸ್, ಬಾಬು ಚಿಟ್ ಫಂಡ್ ಅಂತ ಬೋರ್ಡ್ ಹಾಕಿಕೊಂಡು ಸಾಕಷ್ಟು ವರ್ಷಗಳಿಂದ ಅಮಾಯಕ ಜನರನ್ನು ನಂಬಿಸಿ …
Read More »CD’ ಪ್ರಕರಣ : ಯುವತಿಯ ಪತ್ತೆಗಾಗಿ `SIT’ ತಂಡದಿಂದ ಬೆಳಗಾವಿಯಲ್ಲಿ ತೀವ್ರ ಶೋಧ
ಬೆಳಗಾವಿ : ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐಟಿ ತಂಡ ವಿಡಿಯೋದಲ್ಲಿರುವ ಯುವತಿಗಾಗಿ ತೀವ್ರ ಶೋಧ ನಡೆಸುತ್ತಿದೆ. ಯುವತಿ ಅಪಹರಣ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಶನಿವಾರ ಬೆಳಗಾವಿಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಯುವತಿ ಕುಟುಂಬದವರು ವಾಸವಿದ್ದ ಬಾಡಿಗೆ ಮನೆಗೆ ಆಗಮಿಸಿದ್ದ ಎಸ್ ಐಟಿ ಅಧಿಕಾರಿಗಳ ತಂಡ ಮನೆ ಮಾಲೀಕರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಸಿಡಿಯಲ್ಲಿ …
Read More »ಕಲಬುರಗಿ ಜಿಲ್ಲೆಯಲ್ಲಿ ನನ್ನ ಸಿನಿಮಾ ಶೂಟಿಂಗ್ ಮಾಡುತ್ತೇನೆ: ಪುನೀತ್ ರಾಜಕುಮಾರ್
ಕಲಬುರಗಿ: ಹೈದರಾಬಾದ್-ಕರ್ನಾಟಕವನ್ನು ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡಿದ ನಂತರ ಹಾಗೂ ಕೊರೊನಾ ಸೋಂಕಿನ ಬಳಿಕ ಮೊದಲ ಬಾರಿಗೆ ಕಲಬುರಗಿಗೆ ಆಗಮಿಸಿದ್ದು, ಜಿಲ್ಲೆಯಲ್ಲಿ ನನ್ನ ಸಿನಿಮಾವೊಂದರ ಶೂಟಿಂಗ್ ಮಾಡಲಾಗುವುದು ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಘೋಷಿಸಿದರು. ‘ಯುವರತ್ನ’ ಚಿತ್ರದ ಪ್ರಚಾರಕ್ಕಾಗಿ ರವಿವಾರ ನಗರಕ್ಕೆ ಆಗಮಿಸಿದ್ದ ಅವರು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ, ಯಾವ ಸಿನಿಮಾದ ಶೂಟಿಂಗ್ ಎಂಬುದನ್ನು ಸದ್ಯದಲ್ಲೇ ಬಹಿರಂಗ ಪಡಿಸಲಿದ್ದೇವೆ ಎಂದು ಹೇಳಿದರು. ಕಲಬುರಗಿ ನನಗೆ ಹೊಸದಲ್ಲ. ಚಿಕ್ಕಂದಿನಿಂದಲೇ …
Read More »ಅಹೋರಾತ್ರ ಮನೆಗೆ ನುಗ್ಗಿ ಸುದೀಪ್ ಅಭಿಮಾನಿಗಳ ದಾಂಧಲೆ ಆರೋಪ; ಕಿಚ್ಚನನ್ನು ಅರೆಸ್ಟ್ ಮಾಡಲು ಆಗ್ರಹ
ಕಿಚ್ಚ ಸುದೀಪ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಬರಹಗಾರ ಹಾಗೂ ಚಿಂತಕ ಅಹೋರಾತ್ರ ಅವರ ಮನೆಗೆ ಕೆಲವರು ನುಗ್ಗಿ ದಾಂಧಲೆ ಮಾಡಿದ್ದಾರೆ. ಈ ರೀತಿ ದಾಂಧಲೆ ಮಾಡಿದವರನ್ನು ಕಿಚ್ಚ ಸುದೀಪ್ ಅಭಿಮಾನಿಗಳು ಎಂದು ಅಹೋರಾತ್ರ ದೂರಿದ್ದಾರೆ. ಅಷ್ಟೇ ಅಲ್ಲ, ಈ ಬಗ್ಗೆ ಲೈವ್ ವಿಡಿಯೋ ಮಾಡಿ ಬೇಸರ ಹೊರಹಾಕಿದ್ದಾರೆ. ಇಂದು ಫೇಸ್ಬುಕ್ನಲ್ಲಿ ಅಹೋರಾತ್ರ ಲೈವ್ ಬಂದಿದ್ದಾರೆ. ಈ ವೇಳೆ ಅವರ ಮನೆಗೆ ಒಂದಷ್ಟು ಜನರು ನುಗ್ಗಲು ಪ್ರಯತ್ನಿಸಿದ್ದಾರೆ. ಇದೆಲ್ಲ ಕಿಚ್ಚ …
Read More »ಕೊರೋನಾ ಎರಡನೇ ಅಲೆ: ಬೆಂಗಳೂರಿನ ಈ 10 ಏರಿಯಾಗಳ ಕಡೆ ಹೋಗಲೇ ಬೇಡಿ!
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಎರಡನೇ ಬಾರಿಗೆ ಕೊರೋನಾ ಸುಳಿಯಲ್ಲಿದೆ. ಇಂದು ನಗರದ ಒಂದೇ ಅಪಾರ್ಟ್ಮೆಂಟ್ ನಲ್ಲಿ ಏಳು ಪ್ರಕರಣಗಳು ಬೆಳಕಿಗೆ ಬಂದಿದೆ. ಜೊತೆಯಲ್ಲಿ ಬೆಂಗಳೂರಿನ ಈ 10 ಏರಿಯಾಗಳು ಕೊರೋನ ಹಾಟ್ ಸ್ಪಾಟ್ ಅಂತ ಬಿಬಿಎಂಪಿ ವರದಿ ಹೇಳುತ್ತಿದೆ. ಸತತ ಐದನೇ ದಿನವೂ ನಗರದಲ್ಲಿ ಸಾವಿರದ ಗಡಿ ದಾಟಿದ ಕೊರೋನಾ ರಣಕೇಕೆ ಹಾಕಿದೆ. ಇದರ ಬೆನ್ನಲ್ಲೇ ನಗರದ ನಾಗಸಂಧ್ರದ ಶೋಭಾ ಅಪಾರ್ಟ್ಮೆಂಟ್ ವೊಂದರಲ್ಲೇ ಏಳು ಪ್ರಕರಣಗಳು ಪತ್ತೆಯಾಗಿದೆ. ಒಂದೇ …
Read More »ಬಿಗ್ ಬಾಸ್’ ಮನೆಯಿಂದ ಕಿರುತೆರೆ ನಟಿ ‘ಗೀತಾ ಭಟ್’ ಔಟ್
ಸಿನಿಮಾ ಡೆಸ್ಕ್ : ಕಿರುತೆರೆ ಪ್ರೇಕ್ಷಕರ ನೆಚ್ಚಿನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಆರಂಭವಾಗಿ ಮೂರನೇ ವಾರ ಕಳೆಯುತ್ತಿದೆ. ಮೂರನೇ ವಾರದ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ಕಿರುತೆರೆ ನಟಿ ಗೀತಾ ಭಟ್ ಹೊರಬಿದ್ದಿದ್ದಾರೆ. ಮೊದಲ ವಾರ ಬಿಗ್ ಬಾಸ್ ಮನೆಯಿಂದ ಧನಶ್ರೀ ಔಟ್ ಆಗಿದ್ದರು. ಕಳೆದ ವಾರ ಅಂದರೆ ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹೊರಬಿದ್ದಿದ್ದರು. ಇದೀಗ ಮೂರನೇ ವಾರಾಂತ್ಯದಲ್ಲಿ ಬಿಗ್ ಬಾಸ್ ಮನೆಯಿಂದ ನಟಿ ಗೀತಾ …
Read More »ಕಿತ್ತೂರು ಮತ್ತು ಖಾನಾಪುರ ತಾಲೂಕೂಗಳ ಗಡಿಯಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಬೆಳಗಾವಿ: ಕಿತ್ತೂರು ಮತ್ತು ಖಾನಾಪುರ ತಾಲೂಕೂಗಳ ಗಡಿಯಲ್ಲಿ ಕಾಡುಕೋಣ ಪ್ರತ್ಯಕ್ಷವಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಖಾನಾಪುರ ತಾಲೂಕಿನ ಗಾಡಿಕೊಪ್ಪ, ಹಿರೇಹಟ್ಟಿಹೊಳಿ, ಬೆಳಗಾವಿ ತಾಲೂಕಿನ ಕುಕಡೊಳ್ಳಿ, ಕಿತ್ತೂರು ತಾಲೂಕಿನ ಅಮರಾಪುರ, ವೀರಾಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ಎರಡು ಕಾಡು ೋಣಗಳು ಪ್ರತ್ಯಕ್ಷವಾಗಿ ಆತಂಕ ಮೂಡಿಸಿವೆ. ಅರಣ್ಯಪ್ರದೇಶ ದಿಂದ ದೂರವಿರುವ ಮತ್ತು ಬಹುಪಾಲು ಕಬ್ಬು ಮತ್ತು ತರಕಾರಿ ಬೆಳೆಗಳನ್ನು ಹೊಂದಿರುವ ಈ ಭಾಗದಲ್ಲಿ ಕಾಣಿಸಿಕೊಂಡ ಕಾಡುಕೋಣಗಳನ್ನು ಮರಳಿ ಅರಣ್ಯ ಪ್ರದೇಶಕ್ಕೆ ಓಡಿಸುವಂತೆ …
Read More »
Laxmi News 24×7