ನವದೆಹಲಿ: ರೋಗ ನಿರೋಧಕ ಶಕ್ತಿ ಹೆಚ್ಚಳವಾಗುವ ನಿಟ್ಟಿನಲ್ಲಿ ಮೊದಲು ಯಾವ ಕೋವಿಡ್ (ಕೋವಿಶೀಲ್ಡ್/ಕೋವ್ಯಾಕ್ಸಿನ್) ಲಸಿಕೆಯನ್ನು ಪಡೆದುಕೊಂಡಿರುತ್ತೀರೋ ಎರಡನೇ ಬಾರಿಯೂ ಅದೇ ಲಸಿಕೆಯನ್ನು ತೆಗೆದುಕೊಳ್ಳುವ ಬಗ್ಗೆ ಹೆಚ್ಚಿನ ಗಮನಕೊಡಿ. ಒಂದು ವೇಳೆ ಜನರು ಎರಡು ಬಗೆಯ ಕೋವಿಡ್ ಲಸಿಕೆ ತೆಗೆದುಕೊಂಡರೂ ಸಹ ಅದರ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಭಾರತದ ಉನ್ನತ ಕೋವಿಡ್ 19 ಸಲಹೆಗಾರ ಡಾ.ವಿ.ಕೆ.ಪೌಲ್ ಗುರುವಾರ(ಮೇ 27) ತಿಳಿಸಿದ್ದಾರೆ. ಉತ್ತರಪ್ರದೇಶದ ಸಿದ್ದಾರ್ಥನಗರದ ಗ್ರಾಮವೊಂದರಲ್ಲಿ 20 ಮಂದಿ ಮೊದಲು …
Read More »ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ B.S.Y.
ಬೆಂಗಳೂರು: ನಾಯಕತ್ವದ ಬದಲಾವಣೆಯ ವಿಷಯದಲ್ಲಿ ಮೌನ ಕಾಪಾಡಿಕೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಈಗ ಮೌನ ಮುರಿದು ಕೊನೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಗುರುವಾರ ವಿಧಾನ ಸೌಧದಲ್ಲಿ ಮಾತನಾಡಿದ ಅವರು, “ಪ್ರಸ್ತುತ, ನನ್ನ ಆದ್ಯತೆಗಳು COVID-19 ಸೋಂಕುಗಳ ನಿಯಂತ್ರಣದಲ್ಲಿದೆ. ಜನರ ಕಲ್ಯಾಣಕ್ಕೆ ಒತ್ತು ನೀಡುವುದು ನನ್ನ ಆದ್ಯತೆ. ಬೇರೆ ಯಾವುದೇ ಸಮಸ್ಯೆಗಳು ನನ್ನ ಮುಂದೆ ಇಲ್ಲ “ಎಂದು ಅವರು ಪ್ರತಿಕ್ರಿಯಿಸಿದರು. “ಯಾರು ದೆಹಲಿಗೆ ಹೋಗಿ ಹಿಂದಿರುಗಿದರೂ ಅವರು ತಮ್ಮ ಉತ್ತರಗಳನ್ನು ಪಡೆದಿದ್ದಾರೆ. COVID …
Read More »ದೇಶದ ಸ್ಥಳೀಯ ಕಾನೂನಿಗೆ ಗೂಗಲ್ ಬದ್ಧವಾಗಿರುತ್ತದೆ: ಸುಂದರ್ ಪಿಚೈ
ನವದೆಹಲಿ : ಪ್ರತಿಯೊಂದು ದೇಶದಲ್ಲೂ ಅದರದ್ದೇ ಆದಂತಹ ಕಾನೂನು ಇರುತ್ತದೆ. ಆದೇಶದ ಸ್ಥಳೀಯ ಕಾನೂನು ಪಾಲನೆ ಮಾಡಲು ನಾವು ಬದ್ಧರಾಗಿರುತ್ತೇವೆ ಎಂದು ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಹೇಳಿದ್ದಾರೆ. ಏಷ್ಯಾ ಪೆಸಿಫಿಕ್‌ನ ಆಯ್ದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರಗಳ ಜತೆ ರಚನಾತ್ಮಕವಾಗಿ ಕಾರ್ಯನಿರ್ವಹಿಸುತ್ತೇವೆ. ಉಚಿತ ಮತ್ತು ಮುಕ್ತ ಇಂಟರ್‌ನೆಟ್ ಮೌಲ್ಯವನ್ನು ನಾವು ತಿಳಿದಿದ್ದೇವೆ . ಇದರ ಪ್ರಯೋಜನಗಳ ಅರಿವೂ ನಮಗಿದೆ ಎಂದು ತಿಳಿಸಿದರು. ಸರ್ಕಾರಗಳು ಪರಿಶೀಲನೆ ವ್ಯವಸ್ಥೆ ಮತ್ತು …
Read More »ಡಾ.ಪದ್ಮಜೀತ ಪಾಟೀಲ್ ಅಂಬ್ಯುಲೆನ್ಸ್ ಸೇವೆ: ಮನೆಯಿಂದ ಕೋವಿಡ್ ಕೇರ್ ಸೆಂಟರ್
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯಾವದೇ ಆಸ್ಪತ್ರೆಗೆ ತೆರಳಲು ಉಚಿತ ಅಂಬ್ಯುಲೆನ್ಸ್ ಹಾಗು ಕೊರೊನಾದಿಂದ ಮೃತಪಟ್ಟ ಶವ ಸಾಗಿಸಲೂ ಪ್ರತ್ಯೇಕ ವಾಹನದ ಜೊತೆಗೆ ಆಕ್ಸಿಜನ್ ಸಹಿತ ವಾಹನವನ್ನೂ ಉಚಿತ ಸೇವೆ ಮಾಡಲು ಡಾ. ಪದ್ಮಜೀತ್ ನಾಡಗೌಡ ಪಾಟೀಲ ಫೌಂಡೇಶನ್ ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ. ಪದ್ಮಜೀತ್ ನಾಡಗೌಡ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೇರದಾಳ ವಿಧಾನಸಭಾ ಕ್ಷೇತ್ರದ ಸರ್ವ ಜನತೆಗೆ ಉಚಿತವಾಗಿ …
Read More »ಸ್ನೇಹಿತರ ಸಹಾಯ; ಧಾರವಾಡಕ್ಕೆ ಬಂತು ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್
ಧಾರವಾಡ, ಮೇ 27; ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ ತಮ್ಮ ಸ್ನೇಹಿತರು ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮುನ್ನಡೆಸುತ್ತಿರುವ ‘ಮೆಡಿಕಲ್ ಆಕ್ಸಿಜನ್ ಫಾರ್ ಆಲ್’ ತಂಡದಿಂದ ಪಡೆದ ಆಕ್ಸಿಜನ್ ಕಾನ್ಸನ್‍ಟ್ರೇಟರ್‌ಗಳನ್ನು ಜಿಲ್ಲಾ ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿದರು. ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಿವಿಧ ಕಡೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ, ಅಲ್ಲಿ ದಾಖಲಿರುವ ಸೋಂಕಿತರಿಗೆ ಉಸಿರಾಟ ತೊಂದರೆ ಉಂಟಾದರೆ ತಕ್ಷಣ ಅವರ ಸಹಾಯಕ್ಕೆ ನೆರವಾಗಲು ಆಕ್ಸಿಜನ್ ಕಾನ್ಸನ್‍ಟ್ರೇಟರ್ …
Read More »ಅನಾರೋಗ್ಯಕ್ಕೀಡಾದ ಆರೋಗ್ಯ ಸಚಿವ ಡಾ. ಸುಧಾಕರ್
ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗದೇ ಗೈರಾಗಿದ್ದಾರೆ. ಇತ್ತೀಚೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ವಿವಿಧ ಜಿಲ್ಲೆಗಳ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ, ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ, ಆಕ್ಸಿಜನ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು, ಸದಾಶಿವ ನಗರದ ನಿವಾಸದಲ್ಲಿ …
Read More »ಜಿಂದಾಲ್ ಗೆ ನೀಡಿದ್ದ ಭೂಮಿ ವಾಪಸ್; ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ
ಬೆಂಗಳೂರು: ಜಿಂದಾಲ್ ಗೆ ಭೂಮಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಜಿಂದಾಲ್ ಗೆ ನೀಡಿದ್ದ ಭೂಮಿ ವಾಪಸ್ ಪಡೆಯಲು ನಿರ್ಧರಿಸಲಾಗಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಜಿಂದಾಲ್ ಗೆ ಭೂಮಿ ನೀಡುವ ಕ್ರಮಕ್ಕೆ ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ ಎಂದರು. ಜಿಂದಾಲ್ ಗೆ 3,667 ಎಕರೆ ಭೂಮಿ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಈ ಬಗ್ಗೆ …
Read More »ಅಗ್ನಿಶಾಮಕ ದಳದ ಸಿಬ್ಬಂದಿಗೆಪಿಪಿಇ ಕಿಟ್ ಗಳನ್ನು ವಿತರಿಸಿದರಾಹುಲ್ ಜಾರಕಿಹೊಳಿ
ಗೋಕಾಕ: ಇಲ್ಲಿನ ನಗರಸಭೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಇಂದು ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಸ್ಯಾನಿಟೈಸರ್, ಮಾಸ್ಕ್ ಹಾಗೂ ಪಿಪಿಇ ಕಿಟ್ ಗಳನ್ನು ವಿತರಿಸಿದರು. ನಂತರ ಮಾತನಾಡಿದ ಅವರು, “ಕೋವಿಡ್ ನಿಯಂತ್ರಣದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಕೊರೊನಾ ವಾರಿಯರ್ಸ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಹೋಗಲಾಡಿಸಲು ಇವರ ಪಾತ್ರ ಮಹತ್ವದ್ದಾಗಿದೆ. ವಾರಿಯರ್ಸ್ ಗಳಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಾವು ಚಿಕ್ಕ ಸಹಾಯ …
Read More »BSY ಬಿಟ್ಟು ಬಿಜೆಪಿಯಲ್ಲಿ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಿ: ಎಂ.ಪಿ. ಕುಮಾರಸ್ವಾಮಿ
ಚಿಕ್ಕಮಗಳೂರು: ಬಿ.ಎಸ್. ಯಡಿಯೂರಪ್ಪ ಬಿಟ್ಟು ಬಿಜೆಪಿಯಲ್ಲಿ ಯಾರು ಸ್ಟಾರ್ ಲೀಡರ್ ಇದ್ದಾರೆ ತೋರಿಸಲಿ. ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಎಸ್ ವೈ ಪರ ಬ್ಯಾಟ್ ಬೀಸಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ನಾಯಕತ್ವ ಬದಲಾವಣೆ, ಚರ್ಚೆ ಈಗ ಅಪ್ರಸ್ತುತ. ಈ ಕುರಿತು ಕೇಂದ್ರದ ನಾಯಕರ ಬಳಿ ಶಾಸಕರ ನಿಯೋಗ ಹೋಗಲು ತಯಾರಿದ್ದೇವೆ. ನಾಯಕತ್ವ ಬದಲಾವಣೆ ಮಾಡದಂತೆ …
Read More »ಕೋವಿಡ್ ಲಸಿಕೆ ಹಾಕಿಸಿಕೊಂಡವರು ಈ ತಪ್ಪನ್ನು ಮಾಡಲೇಬೇಡಿ!
ನವದೆಹಲಿ, ಮೇ 27: ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚಾದ ನಂತರ ಲಸಿಕೆ ಕಾರ್ಯಕ್ರಮಗಳು ಕೂಡ ಚುರುಕು ಪಡೆದುಕೊಂಡಿತು. ಈ ಮಧ್ಯೆ ಕೊರೊನಾ ವೈರಸ್‌ನ ಲಸಿಕೆ ಹಾಕಿಸಿಕೊಂಡವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಇದರಿಂದಾಗಿ ಮತ್ತಷ್ಟು ಜನರು ಲಸಿಕೆ ಹಾಕಿಸಿಕೊಳ್ಳಲು ಪ್ರೇರಣೆಯೂ ಆಗಬಹುದು. ಆದರೆ ಈ ಉತ್ಸಾಹದಲ್ಲಿ ಒಂದು ತಪ್ಪನ್ನು ನೀವು ಮಾಡಿದರೆ ಮುಂದೆ ಸಂಕಷ್ಟಗಳು ಉಂಟಾಗಬಹುದು. ಹೌದು, ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡವರಲ್ಲಿ ಹಲವರು ತಮ್ಮ ಕೊರೊನಾ …
Read More »
Laxmi News 24×7