ದೆಹಲಿ: ‘ಯಡಿಯೂರಪ್ಪ ಅವರನ್ನು ಪದಚ್ಯುತಿ ಮಾಡುವುದಾದರೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ತಮಗೆ ಕೊಡಬೇಕು’ ಎಂದು ಹಾಲಿ ಉಪಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಬೇಡಿಕೆ ಇಟ್ಟಿದ್ದಾರೆಯೇ? ಇಂತಹದೊಂದು ಚರ್ಚೆ ದೆಹಲಿ ಮಟ್ಟದ ನಾಯಕರ ವಲಯದಲ್ಲಿ ಹರಿದಾಡುತ್ತಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿಯಾದ ವಿಜಯೇಂದ್ರ, ಈ ಬೇಡಿಕೆಯ ಜತೆಗೆ ಯತ್ನಾಳ ಹಾಗೂ ಯೋಗೇಶ್ವರ್ ಅವರನ್ನು ಉಚ್ಛಾಟಿಸಬೇಕು ಎಂಬ ಅಹವಾಲನ್ನೂ ಸಲ್ಲಿಸಿದ್ದಾರೆ. ‘ಭಿನ್ನಮತೀಯರಿಗೆ ತಕ್ಕ ಶಾಸ್ತಿ ಕಲಿಸುವ ಬಗ್ಗೆ …
Read More »ಮಹಿಳೆಯರಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ: ಮುಂಬೈ ರೈಲು ಆರಂಭದಾದರೂ ಸ್ತ್ರೀಯರಿಗೆ ಪ್ರವೇಶವಿಲ್ಲ
ಮುಂಬೈ: ಬಹುತೇಕ ರಾಜ್ಯಗಳು ಲಾಕ್‌ಡೌನ್ ಹೇರಿವೆ. ಕರೊನಾ ವೈರಸ್ ಸಂಖ್ಯೆ ಕುಸಿತ ಕಂಡುಬರುತ್ತಿರುವ ರಾಜ್ಯಗಳಲ್ಲಿ ನಿಧಾನವಾಗಿ ಲಾಕ್‌ಡೌನ್ ತೆರವುಗೊಳಿಸಿ ಒಂದೊಂದೇ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿಯೂ ಲಾಕ್‌ಡೌನ್ ಅನ್ನು ತೆರವುಗೊಳಿಸುವ ಕಾರ್ಯ ಆರಂಭವಾಗಿದೆ. ಇಲ್ಲಿಯವರೆಗೆ ಲೋಕಲ್ ಟ್ರೇನ್‌ಗಳ ಓಡಾಟಕ್ಕೆ ಅನುಮತಿ ಇರಲಿಲ್ಲ. ಈಗ ಅನ್‌ಲಾಕ್ ಮಾಡುತ್ತಿರುವ ಕಾರಣ, ಇವುಗಳ ಓಡಾಟಕ್ಕೆ ಅನುಮತಿ ಕಲ್ಪಿಸಲಾಗುತ್ತಿದೆ. ಆದರೆ ಅಚ್ಚರಿಯ ವಿಷಯ ಎಂದರೆ ಮಹಿಳೆಯರು ಟ್ರೇನ್‌ಗಳಲ್ಲಿ ಪ್ರವೇಶಿಸುವುದಕ್ಕೆ ಕಡಿವಾಣ ಹಾಕಲಾಗಿದೆ. ಮಹಾರಾಷ್ಟ್ರ ಸರ್ಕಾರ …
Read More »ಅನ್ಲಾಕ್ ಬಸ್ ಸಂಚಾರಕ್ಕೆ ಸಿದ್ಧತೆ : ಸಾರಿಗೆ ನೌಕರರಿಗೆ ಕರ್ತವ್ಯದ ಕರೆ
ಬೆಂಗಳೂರು : ಒಂದೊಮ್ಮೆ ಜೂನ್ 14 ರ ನಂತರ ಅನ್ಲಾಕ್ ಆದರೆ ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಆರಂಭಿಸುವುದಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಜೂನ್ 7 ರೊಳಗೆ ಕರ್ತವ್ಯಕ್ಕೆ ಹಾಜರಾಗಲು ಬುಲಾವ್ ನೀಡಲಾಗಿದೆ. ಕರೊನಾ ಮೊದಲ ಅಲೆ ವೇಳೆ ಅನ್ಲಾಕ್ ಮಾಡಿದಾಗ ಯಾವ ನಿಯಮಾವಳಿ ಇತ್ತೋ ಅದೇ ನಿಯಮಾವಳಿಗಳನ್ನು ಈಗ ಲಾಕ್‌ಡೌನ್ ತೆರವಾದ ಸಂದರ್ಭದಲ್ಲೂ ಫಾಲೋ ಮಾಡಲು ನಿರ್ಧರಿಸಲಾಗಿದೆ. ಬಸ್ ಕಾರ್ಯಾಚರಣೆಗೆ …
Read More »12 ಬಾರಿ ಕೊಚ್ಚಿ ಕೊಂದವನ ಸುಳಿವು ನೀಡಿದ ಚಪ್ಪಲಿ!
ಪಾರ್ಕ್ ನಲ್ಲಿ ಮಲಗುವ ವಿಷಯದಲ್ಲಿ ಉಂಟಾದ ಮನಸ್ತಾಪದಿಂದ ಚಿಂದಿ ಆಯುವ ವ್ಯಕ್ತಿಯನ್ನು 12 ಬಾರಿ ಮಚ್ಚಿನಿಂದ ಕೊಚ್ಚಿ ಕೊಲೆಗೈದ ವ್ಯಕ್ತಿಯನ್ನು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಬಾಬುಸಪಾಳ್ಯ ಬಿಡಿಎ ಪಾರ್ಕ್ ನಲ್ಲಿ ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ (43) ಹತ್ಯೆಯಾಗಿದ್ದು, ಮಾಲೂರು ಮೂಲದ ಸತೀಶ್ (30) ಬಂಧಿತ ಆರೋಪಿ. ಅಶೋಕ್ ಮತ್ತು ಸತೀಶ್ ಇಬ್ಬರೂ ಚಿಂದಿ ಆಯುವವರಾಗಿದ್ದು, ಗುಲ್ಬರ್ಗಾ ಮೂಲದ ವ್ಯಕ್ತಿ ಅಶೋಕ್ ಮೊದಲಿನಿಂದಲೂ ಬಾಬುಸಪಾಳ್ಯದ ಪಾರ್ಕ್ ನಲ್ಲಿ ಮಲಗುತ್ತಿದ್ದ. …
Read More »ಬೆಳಗಾವಿ ಜಿಲ್ಲೆಯ ಯುವಕನಿಂದಾಗಿ ಮೋಸ ಹೋದ ದಾವಣಗೆರೆ ಯುವತಿ ಆತ್ಮ ಹತ್ಯೆ…..ಆತನಿಗೆ ಗಲ್ಲು ಶಿಕ್ಷೆ ಕೊಡಿಸಿ.. ನೊಂದ ಪ್ರಿಯತಮೆಯ ಕೊನೇ ಮನವಿ.!
ದಾವಣಗೆರೆ: ಪ್ರಿಯಕರನ ವಂಚನೆಯಿಂದ ಬೇಸತ್ತ ಪ್ರೇಮಿ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಭಾನುವಾರ ದಾವಣಗೆರೆಯ ಭಾರತ್ ಕಾಲೋನಿಯಲ್ಲಿ ನಡೆದಿದೆ. ಭಾರತ್ ಕಾಲೋನಿಯ ಆಶಾ(22) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಶಾ ಕೆ.ಬಿ. ಈರಣ್ಣ ಎಂಬಾತತನ್ನು ಪ್ರೀತಿಸುತ್ತಿದ್ದರು. ಈಚೆಗೆ ಆತನಿಂದ ವಂಚನೆಗೊಳಗಾಗಿದ್ದರು ಎನ್ನಲಾಗುತ್ತಿದೆ. ಕೆ.ಬಿ. ಈರಣ್ಣ ಮೂಲತಃ ಬೆಳಗಾವಿ ಜಿಲ್ಲೆಯವ. ದಾವಣಗೆರೆಯಲ್ಲಿ ಬೆಸ್ಕಾಂನಲ್ಲಿ ಬಿಲ್ ಕಲೆಕ್ಟರ್ ಆಗಿ ಮಾಡುತ್ತಿದ್ದು, ಬಂಬೂಬಜಾರ್‌ನಲ್ಲಿ ವಾಸವಾಗಿದ್ದನು. ಬಿಲ್ ಕಲೆಕ್ಟಿಂಗ್‌ಗೆಂದು ಹೋಗುತ್ತಿದ್ದ ಸಂದರ್ಭದಲ್ಲಿ ಆಶಾ ಮತ್ತು ಆತನ ನಡುವೆ …
Read More »ನಾಸಾ ಚಂದ್ರಯಾನಕ್ಕೆ ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್ ಬಲ
ಮೆಲ್ಬರ್ನ್: ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವ ನಾಸಾದ ಮಹತ್ವಾಕಾಂಕ್ಷಿ ಯೋಜನೆಯ ಬೆನ್ನೆಲುಬಾಗಿ ನಿಂತಿರುವವರು ಬೇರ್ಯಾರೂ ಅಲ್ಲ, ಭಾರತೀಯ ಮೂಲದ ಎಂಜಿನಿಯರ್ ಸುಭಾಷಿಣಿ ಅಯ್ಯರ್. ಒರಿಯನ್ ಬಾಹ್ಯಾಕಾಶ ನೌಕೆಯನ್ನು ಚಂದ್ರನಲ್ಲಿಗೆ ಹೊತ್ತೂಯ್ಯಲಿರುವ ಆರ್ಟೆಮಿಸ್ 1 ಯೋಜನೆಯ ಬಿಡಿ ಭಾಗಗಳ ನಿರ್ಮಾಣ ಹಾಗೂ ಆರಂಭಿಕ ಹಂತದ ನಿರ್ವಹಣೆಯನ್ನು ನೋಡಿಕೊಳ್ಳುವ ತಂಡದಲ್ಲಿ ಸುಭಾಷಿಣಿ ಕೂಡ ಒಬ್ಬರು. ರಾಕೆಟ್‌ನ ಕೋರ್ ಸ್ಟೇಜ್ ನಿರ್ಮಾಣ ಪೂರ್ಣಗೊಂಡು, ಅದನ್ನು ಹಸ್ತಾಂತರಿಸುವವರೆಗೆ ನಾಸಾಗೆ ಎಲ್ಲ ರೀತಿಯ ಸಹಾಯ ಮಾಡುವ ಜವಾಬ್ದಾರಿಯೂ …
Read More »ಬೆಂಗಳೂರು ನಗರಕ್ಕೆ ಲಾಕ್ ಡೌನ್ ವಿನಾಯ್ತಿ?
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಈ ವಾರದ ಲಾಕ್ ಡೌನ್ ನಿಂದ ವಿನಾಯ್ತಿ ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಸಂಪೂರ್ಣ ಲಾಕ್ ಡೌನ್ ಬದಲಾಗಿ ಕೆಲವೊಂದಕ್ಕೆ ವಿನಾಯ್ತಿ ಅಥವಾ ಓಡಾಡುವ ಅವಧಿ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ನಗರದಲ್ಲಿ ಸದ್ಯಕ್ಕೆ ಶೇ.6 ಕ್ಕಿಂತ ಕಡಿಮೆ ಪಾಸಿಟಿವಿಟಿ ದರವಿದೆ. ಪಾಸಿಟಿವಿಟಿ ದರ ಶೇ.5 ಕ್ಕೆ ಇಳಿದರೆ ಅನ್ ಲಾಕ್ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಅದರಂತೆ ಬಿಎಂಟಿಸಿ, ಓಲಾ, ಉಬರ್ …
Read More »ರಾಜ್ಯಾದ್ಯಂತ ಡಿಸ್ಟ್ರಿಕ್ಟ್ ರಜಿಸ್ಟ್ರಾರ್ ಹಾಗೂ ಸಬ್ ರಜಿಸ್ಟ್ರಾರ್ ಕಚೇರಿ ಆರಂಭ
ಬೆಂಗಳೂರು – ಕೊರೋನಾ ಪ್ರಮಾಣ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಸಡಿಲ ಮಾಡಲಾಗುತ್ತಿದೆ. ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡಿಸ್ಟ್ರಿಕ್ಟ್ ರಜಿಸ್ಟ್ರಾರ್ ಹಾಗೂ ಸಬ್ ರಜಿಸ್ಟ್ರಾರ್ ಕಚೇರಿ ಆರಂಭಿಸಲು ಸರಕಾರ ಅನುಮತಿ ನೀಡಿದೆ. ಕೋವಿಡ್ ಮಾರ್ಗದರ್ಶಿ ನಿಯಮಗಳನ್ನು ಪಾಲಿಸಿ ನೋಂದಣಾಧಿಕಾರಿ ಕಚೇರಿ ಕಾರ್ಯಾರಂಭ ಮಾಡಬೇಕು ಎಂದು ಕಂದಾಯ ಇಲಾಖೆ ಪ್ರಧಾನ …
Read More »27 ಲಕ್ಷ ಮಂದಿ ರೈಲ್ವೆ ಟಿಕೆಟ್ ಇಲ್ಲದೆ ಪ್ರಯಾಣ : 143.87 ಕೋಟಿ ರೂ. ದಂಡ ಸಂಗ್ರಹ
ನವದೆಹಲಿ: ಸೋಂಕಿನ ಹಿನ್ನೆಲೆಯಲ್ಲಿ ಹಲವು ನಿಯಮಗಳು ಜಾರಿ ಇದ್ದರೂ ರೈಲುಗಳಲ್ಲಿ ಟಿಕೆಟ್ ಇಲ್ಲದೆ 27 ಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿದ ಸಚಿವಾಲಯ 2020 ಏಪ್ರಿಲ್‌ನಿಂದ ಪ್ರಸಕ್ತ ವರ್ಷ ಮಾರ್ಚ್ ವರೆಗೆ 27.57 ಲಕ್ಷ ಮಂದಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 25ಕ್ಕೂ ಕಡಿಮೆ ಪ್ರಕರಣಗಳು ಎಂದಿದೆ. ಅಷ್ಟೂ ಮಂದಿಯಿಂದ 143.87 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ. …
Read More »ಲಸಿಕೆಗೆ ಕೊರತೆ ಇರುವಾಗ ಟ್ವಿಟರ್ ಬ್ಲೂ ಟಿಕ್ ಬಗ್ಗೆ ಚರ್ಚೆ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಟೀಕೆ
ದೆಹಲಿ: ಕೊರೊನಾ ಸೋಂಕು ವಿರುದ್ಧದ ಲಸಿಕೆಗೆ ಕೊರತೆ ಇರುವಾಗ, ಟ್ವಿಟರ್ನಲ್ಲಿ ಬ್ಲೂ ಟಿಕ್ ವಿಚಾರವಾಗಿ ಚರ್ಚೆಯಲ್ಲಿ ತೊಡಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊವಿಡ್-19 ಲಸಿಕೆ ಹಾಗೂ ಟ್ವಿಟರ್ ಬ್ಲೂ ಟಿಕ್ ಬಗ್ಗೆ ವ್ಯಂಗ್ಯವಾಗಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಯಾರಿಗಾದರೂ ಕೊವಿಡ್ ಲಸಿಕೆ ಬೇಕಾದರೆ ಅವರು ಆತ್ಮನಿರ್ಭರರಾಗಿ ಇರಬೇಕಷ್ಟೆ. ಸ್ವಾವಲಂಬಿಯಾಗಿರಬೇಕು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಟ್ವಿಟರ್ನಲ್ಲಿ ಬ್ಲೂ ಟಿಕ್ಗಾಗಿ …
Read More »
Laxmi News 24×7