Breaking News

ತಮಿಳುನಾಡು ಕುರುವೈ ಬೆಳೆಗೆ ಮೆಟ್ಟೂರು ಡ್ಯಾಂನಿಂದ ನೀರು ಬಿಡುಗಡೆ

ಚೆನ್ನೈ: ರಾಜ್ಯದಲ್ಲಿ ಮಳೆಯ ಅನಿಶ್ಚಿತತೆಯ ಮಧ್ಯೆಯೇ ತಮಿಳುನಾಡಿಗೆ  ಕರ್ನಾಟಕ 28 ಟಿಎಂಸಿ ನೀರು ಹರಿದಿದೆ. ನಮಗೆ ನೀರಿಲ್ಲ…ನೀರಿಲ್ಲ ಎನ್ನುತ್ತಿದ್ದ ತಮಿಳುನಾಡು ಈಗ ಕುರುವೈ ಬೆಳೆಗೆ ನೀರು ಬಿಡುಗಡೆ ಮಾಡಿದೆ. ಭತ್ತದ ಬೆಳೆಗೆ ನೆರವಾಗಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್  ಅವರು ಮಂಗಳವಾರ ಮೆಟ್ಟೂರು ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿದ್ದಾರೆ. 120 ಅಡಿ ಸಾಮರ್ಥ್ಯದ ಮೆಟ್ಟೂರಿನಲ್ಲಿ ಸದ್ಯ 91 ಅಡಿ ನೀರಿದ್ದು, 45 ದಿನಗಳ ಬಳಿಕ ನೀರು ಬಿಡುಗಡೆ ಮಾಡಿದೆ. …

Read More »

ದುನಿಯಾ ವಿಜಯ್ ಪುತ್ರನಿಂದ ಕಾಲೇಜ್‌ ವಿದ್ಯಾರ್ಥಿ ಕಿಡ್ನ್ಯಾಪ್, ಹಲ್ಲೆ – ದೂರು ದಾಖಲು

ಬೆಂಗಳೂರು: ಸ್ಯಾಂಡಲ್‌ವುಡ್ ಖ್ಯಾತ ನಟ ದುನಿಯಾ ವಿಜಯ್  ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಕಾರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್ ವಿಜಯ್ ಸೋಮವಾರ ಸ್ನೇಹಿತರೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಅದೇ ಕಾಲೇಜಿನ ವಿದ್ಯಾರ್ಥಿ ಮನೀಶ್ ಗೌಡ ಹಾಗೂ ಆತನ ಸ್ನೇಹಿತರು ಮತ್ತೊಂದು ಕಾರಿನಲ್ಲಿ ಸಾಮ್ರಾಟ್ ಕಾರನ್ನು ಓವರ್‌ಟೇಕ್ ಮಾಡಿ ರೇಗಿಸಿದ್ದಾರೆ. ಈ …

Read More »

ನೇಪಾಳ ದುರಂತ| ಶೃಂಗೇರಿ ಶ್ರೀಗಳಿಂದ ತೀವ್ರ ಕಳವಳ – ಸಂತ್ರಸ್ತರ ನೆರವಿಗೆ ಧಾವಿಸಿದ ಶಾರದಾ ಪೀಠ

ಚಿಕ್ಕಮಗಳೂರು: ಭೀಕರ ಮಳೆ ಮತ್ತು ಪ್ರವಾಹದಿಂದಾಗಿ ನೂರಾರು ಮಂದಿ ಮೃತಪಟ್ಟು, ಸಾವಿರಾರು ಜನರು ನಾಪತ್ತೆಯಾಗಿ ಕಂಗಾಲಾಗಿರುವ ನೇಪಾಳದ ದುರಂತ  ಸ್ಥಿತಿಗೆ ಶೃಂಗೇರಿ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಕಷ್ಟದಲ್ಲಿರುವ ನೇಪಾಳದ ಸಂತ್ರಸ್ತ ಜನತೆಗೆ ಶೃಂಗೇರಿ ಮಠವುಸಂಪೂರ್ಣ ನೆರವು ನೀಡಲು ಸನ್ನದ್ಧವಾಗಿದೆ. ಪ್ರಕೃತಿಯ ಮುನಿಸಿಗೆ ತುತ್ತಾಗಿರುವ ನೇಪಾಳದ ಜನತೆಗೆ ಅಗತ್ಯ ಆಹಾರ, ದಿನಬಳಕೆ ವಸ್ತುಗಳು ಹಾಗೂ ಅಗತ್ಯ ನೆರವು-ಪರಿಹಾರ ಕಾರ್ಯಗಳನ್ನು …

Read More »

ಸಸಿ ನೆಡುವ ಶಿಕ್ಷೆ ನೀಡಿದ ಚಿಕ್ಕೋಡಿ ನ್ಯಾಯಾಲಯ

ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಅವಾಚ್ಚ ಶಬ್ದಗಳಿಂದ ಸಾರ್ವಜನಿಕರನ್ನು ನಿಂದಿಸಿದ ಅನಿಲ ಪೂಜಾರಿ ಚಿಕ್ಕೋಡಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಸಸಿ ನೆಡುವ ವಿನೂತನ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿ, ತಾನು ಸಾರ್ವಜನಿಕ ಸ್ಥಳದಲ್ಲಿ ಏರು ಧ್ವನಿಯಲ್ಲಿ ಮಾತನಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಒಪ್ಪಿಕೊಂಡಿದ್ದ ಅನಿಲ ಪೂಜಾರಿಗೆ 1 ಸಾವಿರ ರೂ. ದಂಡದ …

Read More »

ಮಹಾರಾಷ್ಟ್ರದಲ್ಲಿ ಕನ್ನಡ ಶಿಕ್ಷಕರ ನೇಮಕ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿನ ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷಿಕ ಶಿಕ್ಷಕರನ್ನೇ ನೇಮಿಸಬೇಕು ಅಲ್ಲಿನ ಕನ್ನಡಿಗರ ಬಹು ದಿನದ ಬೇಡಿಕೆಗೆ ಮಹಾ ಸರ್ಕಾರ ಸ್ಪಂದಿಸಿದ್ದು, ಇದೇ ಮೊದಲ ಬಾರಿ ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷಿಕ ಶಿಕ್ಷಕರನ್ನೇ ನೇಮಕ ಮಾಡಿರುವುದು ಗಡಿ ಕನ್ನಡಿಗರಲ್ಲಿ ಸಂತಸ ಮೂಡಿಸಿದೆ. ಕನ್ನಡ ಶಾಲೆಗಳು ಬಹುದಿನಗಳಿಂದ ಶಿಕ್ಷಕರ ಕೊರತೆ ಹಾಗೂ ಮಾಧ್ಯಮ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಮಹಾರಾಷ್ಟ್ರ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಖಾಲಿ ಉಳಿದಿದ್ದ 30 ಸಾವಿರ ಶಿಕ್ಷಕರ …

Read More »

ಚಿಕ್ಕೋಡಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕೋಡಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಾಲತವಾಡಿಯಲ್ಲಿ ಸಭೆ ನಡೆಸಿದ್ದ ಸ್ಥಳದಲ್ಲಿ ಬಿಜೆಪಿ ನಾಯಕರು ಹೋಮ-ಹವನ ನಡೆಸಿ, ಸ್ಥಳವನ್ನು ಶುದ್ಧೀಕರಣ ಮಾಡಿರುವ ಕೃತ್ಯವನ್ನು ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಸಂಸದರ ಕಚೇರಿ ಬಳಿಯಿಂದ ಇಂದಿರಾನಗರ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಿಪ್ಪಾಣಿ ಮುಧೋಳ ರಸ್ತೆ ತಡೆದು, ಮಾನವ ಸರಪಳಿ ನಿರ್ಮಿಸುವ ಮೂಲಕ ಕೇಂದ್ರದ ಬಿಜೆಪಿ …

Read More »

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದ ಮಾಜಿ ಸೈನಿಕರು

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಮಾಜಿ ಸೈನಿಕರು ಪ್ರತಿಭಟಿಸಿ ಆಕ್ರೋಶ ಹೊರ ಹಾಕಿದ್ದಾರೆ. ಇಂದು ಬೆಳಗಾವಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಮಾಜಿ ಸೈನಿಕರ ಸಂಘಟನೆಗಳ ಮಹಾ ಸಂಘದ ಜಿಲ್ಲಾಧ್ಯಕ್ಷ ಜಗದೀಶ ಪೂಜಾರಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಮಾಜಿ ಸೈನಿಕರು, ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರಿ ನೌಕರಿಯಲ್ಲಿ 10ರಷ್ಟು ಮೀಸಲಾತಿ ಕೊಡಬೇಕು, ಬೆಳಗಾವಿಯಲ್ಲಿ ಸೈನಿಕರ ಭವನ …

Read More »

ಬೆಳಗಾವಿ ಪೊಲೀಸ್ ಕಮೀಷನರ್ ವರ್ಗಾವಣೆ ಸರ್ಕಾರದ ನಿರ್ಧಾರ: ಸತೀಶ್ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಕುರಿತು ನಡೆಯುತ್ತಿರುವ ಚರ್ಚೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಂದು ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರ ಪೊಲೀಸ್ ಆಯುಕ್ತರು ಅಧಿಕಾರ ವಹಿಸಿಕೊಂಡು ಕೇವಲ 12-13 ತಿಂಗಳು ಮಾತ್ರ ಕಳೆದಿದೆ. ಹೀಗಾಗಿ ಕನಿಷ್ಠ ವಿಧಾನಮಂಡಲ ಅಧಿವೇಶನ ನಡೆಯುವವರೆಗೆ ಆಯುಕ್ತರನ್ನು ಮುಂದುವರಿಸಬೇಕು ಎಂಬ …

Read More »

ಹಬ್ಬಗಳ ಮಧ್ಯೆ ʻಸ್ವೀಟ್‌ ಬಾಂಬ್‌ʼ ಸ್ಫೋಟ – ಬಿಕಾನೇರ್ ಸ್ವೀಟ್ಸ್ ತಯಾರಿಕಾ ಘಟಕ ಜಪ್ತಿ

ಬೆಂಗಳೂರು: ನಗರದ ಬಿಕಾನೇರ್ ಸ್ವೀಟ್ಸ್‌ಗೆ  ಸಿಹಿತಿಂಡಿಗಳನ್ನ ತಯಾರಿಸಿ ಸರಬರಾಜು ಮಾಡುತ್ತಿದ್ದ ತಯಾರಿಕಾ ಘಟಕವನ್ನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (FDA) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಘಟಕದಲ್ಲಿ ಅನೈರ್ಮಲ್ಯಕರ ಪರಿಸ್ಥಿತಿ ಹಾಗೂ ಸಿಹಿ ಖಾದ್ಯಗಳ ಲೇಬಲಿಂಗ್‌ಗೆ ಸಂಬಂಧಿಸಿದ ಗಂಭೀರ ಲೋಪಗಳು ಪತ್ತೆಯಾದ ಹಿನ್ನೆಲೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಈ ತಯಾರಿಕಾ ಘಟಕದಲ್ಲಿ ಸುಮಾರು 60 ಮಾದರಿಯ ಸಿಹಿತಿಂಡಿ ಖಾದ್ಯಗಳನ್ನ ತಯಾರಿಸಲಾಗುತ್ತಿತ್ತು ಎನ್ನಲಾಗಿದೆ. ಬೆಂಗಳೂರಿನಲ್ಲಿರುವ  ಬಿಕಾನೇರ್ ಸ್ವೀಟ್ಸ್‌ ಬೇಕರಿ ಹಾಗೂ …

Read More »

ಸೆ.6ಕ್ಕೆ ಬೆಂಗಳೂರಲ್ಲಿ ಅಹಿಂದ ಸಮಾವೇಶ; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬಳಿಕ ನಡೆಯುತ್ತಿರೋ ಸಮಾವೇಶ

ಬೆಂಗಳೂರು: ಸೆಪ್ಟೆಂಬರ್ 6ರಂದು ಬೆಂಗಳೂರಲ್ಲಿ ಅಹಿಂದ ಸಮಾವೇಶ ನಡೆಯಲಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ  ಭಾಗಿಯಾಗಲಿದ್ದಾರೆ. ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಈ ಸಮಾವೇಶ ಆಯೋಜಿಸಲಾಗಿದೆ. ಸಿದ್ದರಾಮಯ್ಯ ಅವರು ರಾಜೀನಾಮೆ ಕೊಟ್ಟ ಬಳಿಕ ನಡೆಯುತ್ತಿರುವ ಸಮಾವೇಶ ಇದಾಗಿದ್ದು, ಕಾಂಗ್ರೆಸ್‌ನ ಅಹಿಂದ ನಾಯಕರಿಗೂ ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ. ಈ ಮಧ್ಯೆ ಕೆಲ ನಾಯಕರಿಗೆ ಸಮಾವೇಶಕ್ಕೆ ಹೋಗ್ಬೇಕಾ..? ಬೇಡ್ವಾ..? ಎಂಬ ಗೊಂದಲ ಕೂಡ ಎದುರಾಗಿದೆ. ಇನ್ನು ಸಮಾವೇಶದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾತಿಗಣತಿ, ಒಳಮೀಸಲಾತಿ ವಿಚಾರಗಳ …

Read More »