Breaking News

ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ

ಬೆಳಗಾವಿ: ‘ಜಿಲ್ಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಬೇಕು’ ಎಂದು ರಾಷ್ಟೀಯ ಹಸಿರು ನ್ಯಾಯಮಂಡಳಿಯ ರಾಜ್ಯಮಟ್ಟದ ಸಮಿತಿಯ ಅಧ್ಯಕ್ಷ ಸುಭಾಷ ಬಿ.ಅಡಿ ಸೂಚಿಸಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ‘ಮಾಲಿನ್ಯ ನಿಯಂತ್ರಣ ಜಿಲ್ಲಾ ಮಟ್ಟದ ಕಾರ್ಯಪಡೆ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   ‘ಅಂಗಡಿ, ಮಳಿಗೆಗಳು ಹಾಗೂ ಮಾಲ್‌ಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಸೂಚಿಸಬೇಕು. ಮಾರುವುದು ಕಂಡುಬಂದಲ್ಲಿ, ವ್ಯಾಪಾರಸ್ಥರಿಗೆ ದಂಡ ವಿಧಿಸಬೇಕು’ …

Read More »

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಪಕ್ಷ ಶೀಘ್ರವೇ ಕ್ರಮ ಜರುಗಿಸಲಿದೆ: ವಿಜಯೇಂದ್ರ

ಶಿವಮೊಗ್ಗ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ವಿರುದ್ಧ ಪಕ್ಷ ಶೀಘ್ರವೇ ಕ್ರಮ ಜರುಗಿಸಲಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.   ‘ಮುಖ್ಯಮಂತ್ರಿ ಸ್ಥಾನಕ್ಕೆ ₹ 2,500 ಕೋಟಿ ನೀಡುವಂತೆ ಕೇಂದ್ರದ ನಾಯಕರೇ ಕೇಳಿದ್ದರು ಎಂದು ಯತ್ನಾಳ್‌ ಹೇಳಿದ್ದಾರೆ. ಅವರಿಗೆ ಈ ರೀತಿ ಒತ್ತಡ ಹಾಕಿದವರು ಯಾರು ಎಂಬುದನ್ನು ಬಹಿರಂಗಪಡಿಸಲಿ. ಅವರ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ …

Read More »

ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 50 ರೂ. ಹೆಚ್ಚಳ, ಹೊಸ ದರ ಇಂದಿನಿಂದ ಜಾರಿ

ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (Domestic LPG cylinder) ಬೆಲೆ ಮತ್ತೆ ಹೆಚ್ಚಳವಾಗಿದೆ. 14.2 ಕೆಜಿ ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು ನೂತನ ದರ ಇಂದು ಶನಿವಾರ ಮೇ 7ರಿಂದಲೇ ಜಾರಿಗೆ ಬರಲಿದೆ. ಇನ್ನು ಮುಂದೆ ಅಡುಗೆ ಅನಿಲ ಬೆಲೆ 999 ರೂಪಾಯಿ 50 ಪೈಸೆಯಾಗಲಿದೆ.   ಕಳೆದ ವಾರ, 19-ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 102 ರೂಪಾಯಿ 50 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಇದು …

Read More »

2,500 ಕೋಟಿ ಲಂಚ ಆರೋಪ: ಶಾಸಕರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ; ಬಸನಗೌಡ ಪಾಟೀಲ್ ಯತ್ನಾಳ್ ಯೂಟರ್ನ್!

ಬೆಂಗಳೂರು: ಮುಖ್ಯಮಂತ್ರಿಯಾಗಲು 2,500 ಕೋಟಿ ರೂ. ಸಿದ್ಧವಿಟ್ಟುಕೊಳ್ಳಬೇಕು ಎಂಬುದಾಗಿ ದೆಹಲಿಯಿಂದ ಬಂದ ಕೆಲವರು ಹೇಳಿದ್ದರು’ ಎಂಬ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಸರಕಾರ ಹಾಗೂ ಬಿಜೆಪಿಗೆ ತೀವ್ರ ಮುಜುಗರಕ್ಕೀಡು ಮಾಡಿದ್ದು, ಜೆಪಿಯಲ್ಲಿ ರಾಜಕೀಯ ಗದ್ದಲ ಆರಂಭಿಸಿದೆ, ತಮ್ಮ ಹೇಳಿಕೆಗೆ ಶಿಸ್ತು ಸಮಿತಿ ಮುಂದೆ ಉತ್ತರಿಸುವುದಾಗಿ ಯತ್ನಾಳ್ ಹೇಳಿದ್ದಾರೆ.   ಈ ಹಿನ್ನಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ರಾಜ್ಯ …

Read More »

ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಮನೆ ಮೇಲೆ ಇಡಿ ದಾಳಿ; ಬರೋಬ್ಬರಿ 19.31 ಕೋಟಿ ರೂ. ನಗದು ಪತ್ತೆ

ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಜಾರ್ಖಂಡ್ ನ ಹಿರಿಯ ಐಎಎಸ್ ಅಧಿಕಾರಿ ಮತ್ತು ಜಾರ್ಖಂಡ್ ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್, ಅವರ ಪತಿ ಮತ್ತು ಇತರ ನಿಕಟ ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿ ಸುಮಾರು 19.31 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದೆ. ಜಾರ್ಖಂಡ್, ಬಿಹಾರ, ದೆಹಲಿ ಹಾಗೂ ಇತರ ನಗರಗಳ 18 ಸ್ಥಳಗಳಲ್ಲಿ ದಾಳಿ ನಡೆಸಿದ ಇಡಿ, ಒಟ್ಟು 19.31 ಕೋಟಿ …

Read More »

ರಾಜ್ಯ ರಾಜಕೀಯದಲ್ಲಿ ಸ್ಪೋಟಕ ವಿದ್ಯಮಾನ: ಘಟಾನುಘಟಿ ನಾಯಕರು ‘ಬಿಜೆಪಿ ಸೇರ್ಪಡೆ’,

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ( Karnataka Assembly Election ) ವರ್ಷ ಬಾಕಿಯಿರುವಾಗಲೇ, ಬಿಜೆಪಿ ಪಕ್ಷಕ್ಕೆ ( BJP Party ) ಸಂಘಟನೆ ಚುರುಕುಗೊಳಿಸಿದೆ. ಈ ಬೆನ್ನಲ್ಲೇ ಬೇರೆ ಪಕ್ಷಗಳಿಂದ ರಾಜಕೀಯ ನಾಯಕರನ್ನು ಸೆಳೆಯುವ ಕಾರ್ಯವನ್ನು ಮುಂದುವರೆಸಿದೆ. ಮಂಡ್ಯ ಹಾಗೂ ಕೋಲಾರ ಜಿಲ್ಲೆಯಲ್ಲಿ ಪಕ್ಷ ಬಲ ಪಡಿಸೋ ನಿಟ್ಟಿನಲ್ಲಿ ಮಹತ್ವದ ತಂತ್ರ ಹೆಣೆದಿದೆ. ಈ ನಿಟ್ಟಿನಲ್ಲಿಯೇ ಇಂದು ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, …

Read More »

ಡಿಕೆಶಿ ಏನೇ ಮಾಡಿದ್ರು ಅಂಜುವ ಮಗ ನಾನಲ್ಲ: ಯತ್ನಾಳ್

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏನೇ ಮಾಡಿದರೂ ಅಂಜುವ ಮಗ ನಾನಲ್ಲ. ನಾನು ಅಂಜಿ ರಾಜಕಾರಣ ಮಾಡಲ್ಲ. ಡಿಕೆಶಿಗೆ ನನ್ನ ಭಯ ಹುಟ್ಟಿದೆ. ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತದೆ ಎನ್ನುವ ಭಯ ಶುರುವಾಗಿದೆ ಎಂದು ಡಿಕೆಶಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ನೀಡಿದರು. ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಸಿಎಂ ಆಗಲು ಹೈಕಮಾಂಡ್ ಹಣ ನೀಡಬೇಕಾಗುತ್ತದೆ ಎಂದು ನಾನು ಹೇಳಿಲ್ಲ. ನಾನು ಹೇಳಿದ ಅರ್ಥ ಬೇರೆ ಇದೆ. ಸಿಎಂ ಮಾಡುತ್ತೇವೆ ಎಂದು …

Read More »

ಜಾಗ ಮಾರಾಟ ಹಿನ್ನೆಲೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಇಬ್ಬರ ಬಂಧನ

ಮಂಗಳೂರು : ವೃದ್ಧರೋರ್ವರ ಜಾಗ ಮಾರಾಟಕ್ಕೆ ಸಂಬಂಧಿಸಿ ನಕಲಿ ದಾಖಲೆ ಸೃಷ್ಟಿಸಿ 60 ಲ.ರೂ.ಗೂ ಅಧಿಕ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಉಡುಪಿಯ ಅಶೋಕ ಕುಮಾರ್‌(47) ಮತ್ತು ರೇಷ್ಮಾ ವಾಸುದೇವ್‌ ನಾಯಕ್‌ (36) ಎಂಬವರನ್ನು ಬಂಧಿಸಿದ್ದಾರೆ.   ಬೆಂಗಳೂರು ಮೂಲದ, ಪ್ರಸ್ತುತ ಬಜಪೆ ಬಳಿ ವಾಸವಿರುವ ಕ್ರಿಸ್ಟಿನ್‌ ಎಡ್ವಿನ್‌ ಜೋಸೆಫ್ ಗೋನ್ಸಾಲ್ವಿಸ್‌(84) ವಂಚನೆಗೊಳಗಾದವರು. ಅವರು ಉಡುಪಿ ಜಿಲ್ಲೆಯ ಮೂಡುತೋನ್ಸೆ ಗ್ರಾಮದಲ್ಲಿ 77 ಸೆಂಟ್ಸ್‌ ಜಾಗ ಹೊಂದಿದ್ದು ಅದನ್ನು ಮಾರಾಟ …

Read More »

ಪಿಎಸ್‌ಐ ಅಕ್ರಮ ನೇಮಕ: ಡಿವೈಎಸ್ಪಿ ಸಾಲಿ ಸೇರಿ 12 ಪೊಲೀಸ್ ಸಿಬ್ಬಂದಿ ಅಮಾನತು

ಕಲಬುರಗಿ: ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಿಐಡಿ ಬಂಧನಕ್ಕೆ ಒಳಗಾಗಿರುವ ರಾಯಚೂರು ಜಿಲ್ಲೆ ಲಿಂಗಸುಗೂರು ಉಪವಿಭಾಗದ ಡಿವೈಎಸ್ಪಿ ಮಲ್ಲಿಕಾರ್ಜುನ ‌ಸಾಲಿ ಹಾಗೂ ಕಲಬುರಗಿಯ ಬೆರಳಚ್ಚು ವಿಭಾಗದ ಆನಂದ ಮೇತ್ರಿ ಸೇರಿ 12 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.   ಗೃಹ ಇಲಾಖೆಯು ಹೊರಡಿಸಿದ ಅಮಾನತು ಆದೇಶವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಕಳಿಸಲಾಗಿತ್ತು. ಆದೇಶ ಪತ್ರಗಳನ್ನು ಸಿಬ್ಬಂದಿಯ ಮೂಲಕ ಇಲ್ಲಿನ ಐವಾನ್ ಇ ಶಾಹಿ ವಿಚಾರಣೆ ಎದುರಿಸುತ್ತಿರುವ …

Read More »

ನಾನು ಯಾರಿಗೂ ಐದು ಪೈಸೆಯನ್ನೂ ಕೊಡದೆ, ಚಹಾ ಕೂಡ ಕುಡಿಸದೆ ಮುಖ್ಯಮಂತ್ರಿಯಾಗಿದ್ದೆ’

ಬೆಳಗಾವಿ: ‘ನಾನು ಯಾರಿಗೂ ಐದು ಪೈಸೆಯನ್ನೂ ಕೊಡದೆ, ಚಹಾ ಕೂಡ ಕುಡಿಸದೆ ಮುಖ್ಯಮಂತ್ರಿಯಾಗಿದ್ದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿ, ‌ಶಾಸಕರು ಆಯ್ಕೆ ಮಾಡಿದ್ದರು. ಹೈಕಮಾಂಡ್ ಒಪ್ಪಿತ್ತು. ಐದು ವರ್ಷ ಯಾರಿಗೂ ಹಣ ಕೊಡದೆ ಮುಖ್ಯಮಂತ್ರಿ ಸ್ಥಾನವನ್ನು ನಿರ್ವಹಿಸಿದೆ’ ಎಂದು ಪ್ರತಿಕ್ರಿಯಿಸಿದರು. ಮಂತ್ರಿ ‌ಸ್ಥಾನದ ಆಕಾಂಕ್ಷಿಯಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ‘ದೆಹಲಿಯಿಂದ ನನ್ನ ಬಳಿಗೆ ಬಂದಿದ್ದ ಕೆಲವರು, …

Read More »