Breaking News

Belagavi: ಲಕ್ಷಕ್ಕೂ ಹೆಚ್ಚು ತೆರಿಗೆ ಬಾಕಿದಾರರಿಗೆ ನೋಟೀಸ್

Spread the love

ಬೆಳಗಾವಿ :ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವರ್ಷಗಳಿಂದ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿರುವ  ಆಸ್ತಿಗಳ ಮಾಲೀಕರಿಗೆ ಕೂಡಲೇ ನೋಟೀಸ್ ಜಾರಿ ಮಾಡಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಪಾಲಿಕೆ ಆಯುಕ್ತ ಕಾರ್ತಿಕ್‌ಎಂ. ಸೂಚಿಸಿದರು.
ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯ ಶಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಾಲಿಕೆ ತೆರಿಗೆ ಕಟ್ಟದೆ ಸೌಲಭ್ಯ ಪಡೆದುಕೊಳ್ಳುತ್ತಿರುವ ಲಕ್ಷಕ್ಕೂ ಹೆಚ್ಚು ಕರ ಬಾಕಿದಾರರಿಗೆ ನೋಟೀಸ್ ನೀಡುವುದರ ಜತೆಗೆ ವಾರದ ಗಡುವು ನೀಡಬೇಕು. ಆದರೂ, ತೆರಿಗೆ ಕಟ್ಟದಿದ್ದರೆ ಸೌಲಭ್ಯ ಕಡಿತಗೊಳಿಸಬೇಕು ಎಂದರು.
ಪಾಲಿಕೆಯ ಸ್ವಂತ ಆದಾಯ ಹೆಚ್ಚಿದಷ್ಟೂ ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲು ಸಾಧ್ಯವಾಗಲಿದೆ. ಹೀಗಾಗಿ ಮೊದಲ ಹಂತದಲ್ಲಿ -1 ಲಕ್ಷಕ್ಕಿಂತ ಹೆಚ್ಚು ಬಾಕಿ ಇರುವವರ ವಿರುದ್ಧ ನೋಟಿಸ ಜಾರಿ ಮಾಡುವುದರೊಂದಿಗೆ, ಎರಡನೇ ಹಂತದಲ್ಲಿ 50 ಸಾವಿರ ರೂ.ಕ್ಕಿಂತ ಹೆಚ್ಚು ಕರ ಬಾಕಿ ಹೊಂದಿರುವವರಿಗೂ ನೋಟೀಸ್ ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ಮಾಡುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ವಹಿಸಲಾಗುವುದು ಎಂದರು.
ಪಾಲಿಕೆಯ 58 ವಾರ್ಡ್‌ವಾರು ಕರ ವಸೂಲಿ ತಂಡಗಳನ್ನು ರಚಿಕೊಂಡರು ಬೆಳಗ್ಗೆ ಮತ್ತು ಸಂಜೆ ಎರಡು ವೇಳೆಯಲ್ಲಿ ಮನೆ ಮನೆಗೆ ತೆರಳಿ ಕರ ವಸೂಲಿ ಮಾಡಬೇಕು. ನೋಟೀಸ್ ಸ್ವೀಕರಿಸಿದ್ದರೆ ಮನೆಗ ಬಾಗಿಲಿಗೆ ನೋಟೀಸ್ ಅಂಟಿಸಿ ಛಾಯಾಚಿತ್ರ ತೆಗೆಯಬೇಕು. ಅವಶ್ಯಬಿದ್ದರೆ ತೆರಿಗೆ ಬಾಕಿದಾರರ ಬಿಸಿ ಮುಟ್ಟಿಸುವ ಕೆಲಸವನ್ನು  ಕರ ವಸೂಲಿಗಾರರು ಹಾಗೂ ಕಂದಾಯ ನಿರೀಕ್ಷಕರು ಮಾಡಬೇಕು. ಕಚೇರಿಯಲ್ಲೇ ಸೀಮಿತವಾಗದೆ ವಾರ್ಡ್‌ಗಳಿಗೆ ತೆರಳಿ ಬಾಕಿ ಕರ ವಸೂಲಿಗೆ ಆದ್ಯತೆ ನೀಡಬೇಕು.
ನಗರದಲ್ಲಿನ ಕೈಗಾರಿಕೆ ಹಾಗೂ ವಾಣಿಜ್ಯ ಕಟ್ಟಡಗಳ ಮರುಮಾಪನ ಕಾರ್ಯ ಈಗಾಗಲೇ ಆರಂಭವಾಗಿದ್ದು, ಅದನ್ನು ಶೀಘ್ರ ಪೂರ್ಣಗೊಳಿಸಿ ಮರು ಕರ ನಿಗದಿ ಮಾಡುವಂತೆ ಸೂಚಿಸಿದರು. ಇದರಿಂದ ಪಾಲಿಕೆಯ ಆದಾಯ ಹೆಚ್ಚಿಸಲು ಸಾಧ್ಯವಾಗಲಿದೆ.ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ದಿನನಿತ್ಯದ ಕಾರ್ಯಗಳ ವಿವರವನ್ನು ದಿನಚರಿಯಲ್ಲಿ ದಾಖಲಿಸಬೇಕು. ಕೈಗೊಂಡಿರುವ ಕೆಲಸ ಹಾಗೂ ಅದರ ಪ್ರಗತಿಯ ಕುರಿತು ಮೇಲಧಿಕಾರಿಗಳಿಗೆ ನಿಯಮಿತವಾಗಿ ಮಾಹಿತಿ ನೀಡಬೇಕು ಎಂದುಸೂಚಿಸಿದರು. ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ.ಬಿ. ಇತರರಿದ್ದರು.

Spread the love

About Laxminews 24x7

Check Also

ಮೈಸೂರಿನಲ್ಲಿ ಮತ್ತೊಂದು ʻಗೋಲ್ಡ್ ಸ್ಕ್ಯಾಮ್ʼ – 80ಕ್ಕೂ ಹೆಚ್ಚು ಜನರಿಗೆ ಉಂಡೆನಾಮ!

Spread the loveಮೈಸೂರು: ನಗರದಲ್ಲಿ ಚಿನ್ನತಂಬಿ ಚಿನ್ನ ವಂಚನೆ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಗೋಲ್ಡ್ ಸ್ಕ್ಯಾಮ್ ನಡೆದಿದೆ. ಚಿನ್ನದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ