Breaking News
Home / new delhi / ಜುಲೈವೊಂದರಲ್ಲೇ 50 ಲಕ್ಷನೌಕರರ ಉದ್ಯೋಗ ನಷ್ಟ!

ಜುಲೈವೊಂದರಲ್ಲೇ 50 ಲಕ್ಷನೌಕರರ ಉದ್ಯೋಗ ನಷ್ಟ!

Spread the love

ಮುಂಬೈ : ಕೊರೋನಾ ವೈರಸ್‌ ಉಪಟಳದಿಂದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿರುವ ಹಿನ್ನೆಲೆಯಲ್ಲಿ ಜುಲೈವೊಂದರಲ್ಲೇ ಬರೋಬ್ಬರಿ 50 ಲಕ್ಷ ಮಂದಿ ಸಂಬಳದಾರ ನೌಕರರು ಕೆಲಸ ಕಳೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದರೊಂದಿಗೆ ಕೊರೋನಾ ಆರಂಭವಾದ ಬಳಿಕ ಉದ್ಯೋಗ ನಷ್ಟಅನುಭವಿಸಿದ ವೇತನ ವರ್ಗದವರ ಸಂಖ್ಯೆ 1.89 ಕೋಟಿಗೆ ಹೆಚ್ಚಳವಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ಕಳೆದ ಏಪ್ರಿಲ್‌ನಲ್ಲಿ ವೇತನ ಆದಾಯ ಹೊಂದಿರುವ 1.77 ಕೋಟಿ ನೌಕರರ ಉದ್ಯೋಗ ಹೋಗಿತ್ತು. ಮೇ ತಿಂಗಳಿನಲ್ಲಿ 1 ಲಕ್ಷ ಮಂದಿ ನೌಕರಿ ಕಳೆದುಕೊಂಡಿದ್ದರು. ಆದರೆ ಜೂನ್‌ನಲ್ಲಿ 39 ಲಕ್ಷ ಮಂದಿಗೆ ಕೆಲಸ ಸಿಕ್ಕಿತ್ತು. ಇದೀಗ ಜುಲೈನಲ್ಲಿ 50 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಭಾರತೀಯ ಆರ್ಥಿಕತೆ ನಿಗಾ ಕೇಂದ್ರ ಮಾಹಿತಿ ನೀಡಿದೆ.

ದೇಶದ ಒಟ್ಟಾರೆ ಉದ್ಯೋಗಗಳಲ್ಲಿ ಮಾಸಿಕ ವೇತನ ಪಡೆಯುವವರ ಪ್ರಮಾಣ ಶೇ.21ರಷ್ಟಿದೆ.

ಆರ್ಥಿಕತೆಗೆ ಹೊಡೆತ ಬಿದ್ದಾಗ ಬೇಗನೆ ಚೇತರಿಸಿಕೊಳ್ಳುವುದು ಇದೇ ವರ್ಗದ ಉದ್ಯೋಗಿಗಳು. ಏಪ್ರಿಲ್‌ನಲ್ಲಿ ಶೇ.15ರಷ್ಟುಸಂಬಳದಾರ ನೌಕರರು ಕೆಲಸ ಕಳೆದುಕೊಂಡಿದ್ದರು. ವಿಶೇಷ ಎಂದರೆ, ವೇತನದಾರ ನೌಕರರ ಕೆಲಸ ಸುಲಭವಾಗಿ ಹೋಗುವುದಿಲ್ಲ. ಒಮ್ಮೆ ಹೋದರೆ, ಅದನ್ನು ಮರಳಿ ಗಳಿಸುವುದು ಕಷ್ಟ. ಹೀಗಾಗಿ ವೇತನ ವರ್ಗದಲ್ಲಿ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಸಂಸ್ಥೆ ತಿಳಿಸಿದೆ.


Spread the love

About Laxminews 24x7

Check Also

ಅರ್ಥಿಂಗ್ ಸಮಸ್ಯೆ – ಶೌಚಾಲಯಕ್ಕೆ ಬೀಗ, ಬಹಿರ್ದೆಸೆಗೆ ಮಹಿಳೆಯರ ಅಲೆದಾಟ

Spread the loveಸಿಂಧನೂರು: ನಗರದ ವಾರ್ಡ್ ನಂ.19ರ ವ್ಯಾಪ್ತಿಗೊಳಪಡುವ ಶರಣಬಸವೇಶ್ವರ ಕಾಲೊನಿಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯಕ್ಕೆ ಬೀಗ ಹಾಕಿರುವ ಘಟನೆ ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ