Breaking News

ವಕೀಲರ ಸಂಘದ ಅಭಿವೃದ್ಧಿಗೆ ಶ್ರಮಿಸೋಣ

Spread the love

ಹುಕ್ಕೇರಿ: ವಕೀಲರ ನಡುವೆ ಸೌಹಾರ್ದ ಮತ್ತು ಸಹಕಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ಹುಕ್ಕೇರಿ ಮತ್ತು ಸಂಕೇಶ್ವರ ನ್ಯಾಯಾಲಯಗಳ ವಕೀಲರು ಒಟ್ಟಾಗಿ ವಕೀಲರ ಸಂಘದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹುಕ್ಕೇರಿ ವಕೀಲರ ಸಂಘದ ಅಧ್ಯಕ್ಷ ಡಿ.ಕೆ.ಅವರಗೋಳ ಹೇಳಿದರು.
ಸಂಕೇಶ್ವರ ನ್ಯಾಯಾಲಯದ ವಕೀಲರ ಸಂಘದ ಚುನಾವಣೆಯಲ್ಲಿ ಈಚೆಗೆ ಆಯ್ಕೆಯಾದ ನೂತನ ಪದಾಧಿಕಾರಿಗಳನ್ನು ವಕೀಲರ ಸಂಘದ ಸಭಾಭವನದಲ್ಲಿ ಮಂಗಳವಾರ ಸನ್ಮಾನಿಸಿ ಮಾತನಾಡಿದರು. ವಕೀಲರ ಹಕ್ಕುಗಳ ರಕ್ಷಣೆ ಜತೆಗೆ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಗ್ರಾಮೀಣ ಭಾಗದ ಜನರಿಗೆ ಉಚಿತ ಕಾನೂನು ನೆರವು ನೀಡುವ ಮೂಲಕ ನ್ಯಾಯಾಲಯ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಹಿರಿಯ ವಕೀಲ ಭೀಮಸೇನ ಬಾಗಿ ಮಾತನಾಡಿದರು. ಸಂಕೇಶ್ವರ ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಪಿ.ಶಿರಗೆ, ಉಪಾಧ್ಯಕ್ಷ
ಎಂ.ಬಿ.ನಂದಿಹಳ್ಳಿ, ಕಾರ್ಯದರ್ಶಿ ಡಿ.ಎಸ್.ನಿಂಗನೂರಿ, ಜಂಟಿ ಕಾರ್ಯದರ್ಶಿ ಆರ್.ಬಿ.ದಡ್ಡಿ, ಮಹಿಳಾ ಪ್ರತಿನಿಧಿ ಎಲ್.ಬಿ.ಬಿಸಕೊಪ್ಪ ಮತ್ತು ಖಜಾಂಚಿ ವೀಣಾ ಕಲಪತ್ರಿ ಅವರನ್ನು ಸನ್ಮಾನಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಶಿವಾನಂದ ಮರಿನಾಯಿಕ, ಕಾರ್ಯದರ್ಶಿ ಎಸ್.ಎಸ್.ಮಗುದುಮ್ಮ, ಸಹಕಾರ್ಯದರ್ಶಿ ಎಸ್.ಎ.ಮಲ್ಲಾಪುರೆ, ಖಜಾಂಚಿ ಶಾಂತಾ ಶೀಲಯ್ಯನವರಮಠ, ಶೋಭಾ ಮಗದುಮ್ಮ, ವಕೀಲರಾದ ಕೆ.ಪಿ.ಶಿರಗಾಂವಕರ, ಮಂಜುನಾಥ ಗಸ್ತಿ ಇತರರಿದ್ದರು.

Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ