Breaking News

5 ರೂ. ನೋಟು ಸ್ವೀಕರಿಸಲು ನಿರಕರಿಸಿದ ಕಂಡಕ್ಟರ್ ಗೆ ಒಂದು ಸಾವಿರ ರೂ. ದಂಡ

Spread the love

ಅರಸಿಕೆರೆ – ಪ್ರಯಾಣಿಕರೊಬ್ಬರಿಂದ 5 ರೂ. ನೋಟು ಸ್ವೀಕರಿಸಲು ನಿರಕರಿಸಿದ ಕಂಡಕ್ಟರ್ ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಒಂದು ಸಾವಿರ ರೂ. ದಂಡ ವಿಧಿಸಿದೆ.

ಸೋಮಶೇಖರ ಎನ್ನುವವರು ಅರಸಿಕೆರೆಯಿಂದ ತಿಪಟೂರಿಗೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು. 35 rs. ಟಿಕೆಟ್ ಗೆ 10 ರೂ.ಗಳ 3 ನೋಟು ಮತ್ತು 5 ರೂ.ಗಳಒಂದು ನೋಟನ್ನು ಅವರು ನೀಡಿದರು.

ಆದರೆ 5 ರೂ. ನೋಟನ್ನು ನಿರಾಕರಿಸಿದ ಕಂಡಕ್ಟರ್ ಗಲಾಟೆ ಮಾಡಿ ಪ್ರಯಾಣಿಕನನ್ನು ಬಸ್ ನಿಂದ ಕೆಳಗಿಳಿಸಲು ಮುಂದಾಗಿದ್ದ. ತಕ್ಷಣ ಸೋಮಶೇಖರ್ ತಿಪಟೂರು ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದರು. ಪೊಲೀಸರು 5 ರೂ ನೋಟು ಸ್ವೀಕರಿಸುವಂತೆ ಕಂಡಕ್ಟರ್ ಗೆ ತಾಖೀತು ಮಾಡಿ ಕಳಿಸಿದ್ದರು.

ಇದರಿಂದ ಅವಮಾನಗೊಂಡ ಸೋಮಶೇಖರ್ ರಸ್ತೆ ಸಾರಿಗೆ ಸಂಸ್ಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಅವರು ವಿಚಾರಣೆ ನಡೆಸಿ ಕಂಡಕ್ಟರ್ ಗೆ ಒಂದು ಸಾವಿರ ರೂ. ದಂಡ ವಿಧಿಸಿದ್ದಾರೆ.


Spread the love

About Laxminews 24x7

Check Also

ಜೂನ್ 20-21ಕ್ಕೆ ಮತ್ತೆ 6 ಜಿಲ್ಲೆಗಳಿಗೆ ಮುಂಗಾರು ಚುರುಕು – ಯೆಲ್ಲೋ ಅಲರ್ಟ್

Spread the loveಜೂನ್ 20 ಹಾಗೂ 21 ರಂದು ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿಗೆ ಭಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ