ಬೆಂಗಳೂರು: ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿದ್ದ ಸಿನಿಮಾ ಚಿತ್ರೀಕರಣಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ ಚಿತ್ರದ ಕಲಾವಿದರು, ತಂತ್ರಜ್ಞರು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದರಿಂದ ಸಿನಿಮಾ ಕೆಲಸಗಳು ಕುಂಟುತ್ತಾ ಸಾಗುತ್ತಿವೆ. ಚಂದನವನದ ಬಹು ನಿರೀಕ್ಷಿತ ಯುವರತ್ನ ಚಿತ್ರ ತಂಡದಿಂದ ಸುದ್ದಿಯೊಂದು ಹೊರ ಬಂದಿದ್ದು, ಪವರ್ ಸ್ಟಾರ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಯುವರತ್ನ ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದು, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈನಲ್ಲಿ ಕೆಲಸಗಳು ನೆಡೆಯುತ್ತಿಲ್ಲ. ಚೆನ್ನೈ ಮತ್ತು ಮುಂಬೈ ಲಾಕ್‍ಡೌನ್ ನಲ್ಲಿವೆ.ಪರಿಸ್ಥಿತಿ ಹದವಾಗುವವರೆಗೂ ಯುವರತ್ನ ಹಾಡುಗಳು ಬರುವುದು ಕಷ್ಟ. ಸಂಗೀತ ನಿರ್ದೇಶಕ ಥಾಮನ್ ಅವರು ಚೆನ್ನೈನ ಲಾಕ್‍ಡೌನ್ ನಲ್ಲಿ ಸಿಲುಕಿದ್ದಾರೆ. ಹಾಗಾಗಿ ಅಭಿಮಾನಿಗಳು ದಯವಿಟ್ಟು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಯುವರತ್ನ ಸಿನಿಮಾ ಸೆಟ್ಟೇರಿದಾಗಿನಿಂದಲೂ ಗಾಂಧಿನಗರದಲ್ಲಿ ಸದ್ದು ಮಾಡುತ್ತಾ ಬಂದಿರುವ ಸಿನಿಮಾ. ಕೊರೊನಾ ಆತಂಕದಿಂದ ಸಿನಿಮಾದ ಚಿತ್ರೀಕರಣಕ್ಕೂ ಚಿತ್ರತಂಡ ಬ್ರೇಕ್ ಹಾಕಿದೆ. ಇದೀಗ ಕರ್ನಾಟಕ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ರೂ ಕಲಾವಿದರು ನೆರೆಯ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದಾರೆ. ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ.
ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಟಿಸುತ್ತಿರುವ ‘ಯುವರತ್ನ’ ಸಿನಿಮಾ ಬಾರೀ ನಿರೀಕ್ಷೆ ಹುಟ್ಟುಹಾಕಿದೆ. ಯುವರತ್ನ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು.
ಯುವರತ್ನ ಚಿತ್ರತಂಡ ಹಾಡೊಂದರ ಚಿತ್ರೀಕರಣಕ್ಕಾಗಿ ಚಿತ್ರತಂಡ ಯುರೋಪ್‍ಗೆ ತೆರಳಲು ಪ್ಲಾನ್ ಮಾಡಿಕೊಂಡಿತ್ತು. ಯುರೋಪ್‍ನ ಸ್ಲೋವೇನಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಚಿತ್ರತಂಡ ಮುಂದಾಗಿತ್ತು. 3-4 ದಿನಗಳ ಕಾಲ ಯುರೋಪಿನಲ್ಲೇ ಚಿತ್ರತಂಡ ತಂಗಲು ಪ್ಲಾನ್ ಮಾಡಿದ್ದ ಹಿನ್ನೆಲೆ ಟಿಕೆಟ್, ಹೋಟೆಲ್ ಎಲ್ಲವೂ ಬುಕ್ ಮಾಡಲಾಗಿತ್ತು. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ ‘ಯುವರತ್ನ’ನ ಯುರೋಪ್ ಪ್ರವಾಸ ರದ್ದು ಮಾಡಿದೆ. ಹಣ ಹೋದರೆ ಹೋಗಲಿ ಕೊರೊನಾ ಸಹವಾಸ ಬೇಡಪ್ಪ ಎಂದು ಚಿತ್ರತಂಡ ಸುಮ್ಮನಾಗಿದೆ.