Breaking News

ಬೆಳಗಾವಿ: ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ: ಆರೋಗ್ಯ ಸಚಿವ ಶ್ರೀರಾಮಲು

Spread the love

ಬೆಳಗಾವಿ: ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ: ಆರೋಗ್ಯ ಸಚಿವ ಶ್ರೀರಾಮಲು

 :ಶೀಘ್ರದಲ್ಲಿಯೇ ಬೆಳಗಾವಿಯಲ್ಲಿ ಕೊರೋನಾ ಪ್ರಯೋಗಾಲಯ/ಬೆಳಗಾವಿಯಲ್ಲಿ ಆರೋಗ್ಯ ಸಚಿವ ಶ್ರೀರಾಮಲು ಹೇಳಿಕೆ/ ಡಿಸಿ ಕಚೇರಿ ಆವರಣದಲ್ಲಿ ಸಚಿವರಿಗೆ ಸ್ಕ್ರೀನಿಂಗ್ ಟೆಸ್ಟ್

ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ಬೆಳಗಾವಿಯಲ್ಲಿ ಕೊರೋನಾ ಸೊಂಕಿಗೆ ಸಂಬಂಧಪಟ್ಟ ಪ್ರಯೋಗಾಲಯವನ್ನು ಶೀಘ್ರದಲ್ಲಿಯೇ ಆರಂಭಿಸುತ್ತೇವೆ ಎಂದು,ಆರೋಗ್ಯ ಸಚಿವ ಶ್ರೀರಾಮಲು ಅವರು ಬೆಳಗಾವಿಯಲ್ಲಿಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಕರ್ನಾಟಕದಲ್ಲಿ ಇವತ್ತಿನವರೆಗೆ 16 ಪ್ರಕರಣಗಳು ಪತ್ತೆಯಾಗಿದ್ದವು,ಅದರಲ್ಲಿ ಐವರು ಗುಣಮುಖರಾಗಿದ್ದಾರೆ,ಮೂವರು ಡಿಶ್ಚಾರ್ಜ ಆಗಿದ್ದಾರೆ,ರಾಜ್ಯದಲ್ಲಿ ಆತಂಕ ಪಡುವ ಪರಿಸ್ಥಿತಿ ಇಲ್ಲ. ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಈಗಾಗಲೆ ಒಂದುವರೆ ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಿದ್ದೇವೆ. ಹಾಗೂ ಕೊರೋನಾ ಸೊಂಕು ಶಂಕಿತರಿಗೆ ಮನೆಯಲ್ಲಿಯೇ ಉಪಚಾರ ನೀಡಲಾಗುತ್ತಿದೆ.ಅಲ್ಲದೆ ಇವರ ಮೇಲೆ ನಿಗಾ ಇಡಲು ಹೋಮ್ ಗಾರ್ಡ್ ಗಳನ್ನು ನಿಯೋಜನೆ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಸಚಿವ ಶ್ರೀರಾಮಲು ಹೇಳಿದರು.


Spread the love

About Laxminews 24x7

Check Also

ಕೆಜಿಎಫ್​ ನಟ ಹರೀಶ್​ ರಾಯ್ ಅಂತ್ಯಸಂಸ್ಕಾರ

Spread the loveಉಡುಪಿ: ‘ಕೆಜಿಎಫ್​​​ ಚಾಚಾ’ ಖ್ಯಾತಿಯ ಹರೀಶ್​ ರಾಯ್ (Harish Rai) ಅವರ ಅಂತ್ಯಕ್ರಿಯೆ ಇಂದು ಉಡುಪಿಯ ಅಂಬಲಪಾಡಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ