ಬೆಳಗಾವಿ: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಜತೆ ಮಾತುಕತೆ ವಿಳಂಬವಾಗಿದೆ. ಶೀಘ್ರ ಈ ವಿಚಾರವಾಗಿ ಚರ್ಚಿಸಿ ನೀರು ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷ್ಣಾ ನದಿ ತೀರದಲ್ಲಿ ಸದ್ಯ ನೀರನ ಸಮಸ್ಯೆ ಇಲ್ಲ. ಮುಂದಿನ ಬೇಸಿಗೆ ಅವಧಿ ವೇಳೆಗೆ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡಲಾಗುವುದು ಎಂದರು.
ಇನ್ನು ಮಹದಾಯಿ ನದಿ ನೀರು ವಿಚಾರವಾಗಿ ಡಿಪಿಆರ್ ಸಿದ್ದಪಡಿಸಲಾಗಿದೆ. 800 ಕೋಟಿ ರೂಪಾಯಿ ಯೋಜನೆ ರೂಪರೇಷ ಸಿದ್ದವಾಗಿದೆ. ಮುಂದಿನ ವಾರ ದೆಹಲಿಗೆ ತೆರಳಿ ಕೇಂದ್ರ ಸಚಿವರೊಂದಿಗೆ ಚರ್ಚಿಸುತ್ತೇನೆ. ಲಾಕ್ ಡೌನ್ ನಿಂದಾಗಿ ನೀರಾವರಿ ಯೋಜನೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದಾಗಿ ಅನುದಾನ ಕಡಿತಗೊಂಡಿಲ್ಲ ಎಂದು ಹೇಳಿದ್ರು.