ಮುಸ್ಲೀಮರ ಪವಿತ್ರ ಹಬ್ಬವಾದ ಈದುಲ್ ಫಿತ್ರ್ (ರಂಝಾನ್) ವಿಶೇಷ ಪ್ರಾರ್ಥನೆಯನ್ನು ಲಾಕ್ ಡೌನ್ ಹಿನ್ನಲೇ ಮನೆಗಳಲ್ಲಿ ನಡೆಸಲಾಯಿತು.
ಮನೆಯಲ್ಲೇ ಈದುಲ್ ಫಿತ್ರ್ ನಮಾಝ್ ಆಚರಣೆ.
ಮುಸ್ಲಿಮರ ಪವಿತ್ರ ಹಬ್ಬವಾದ ಈದುಲ್ ಫಿತ್ರ್ ( ರಂಝಾನ್ ) ಹಬ್ಬದ ವಿಶೇಷ ಪ್ರಾರ್ಥನೆ ಯನ್ನು ಲಾಕ್ ಡೌನ್ ಹಿನ್ನಲೆ ಮನೆಗಳಲ್ಲೇ ಆಚರಿಸಲಾಯಿತು.
ಈದ್ ನಮಾಜ್ ವಿಶೇಷವಾಗಿ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಆಚರಿಸುವ ಸಂಪ್ರದಾಯವಿದ್ದು, ಲಾಕ್ ಡೌನ್ ಕಾರಣ ಇದಕ್ಕೆ ಅವಕಾಶವಿರಲಿಲ್ಲ. ಈ ಕಾರಣದಿಂದ ಮುಸಲ್ಮಾನರು ತಮ್ಮ ತಮ್ಮ ಮನೆಗಳಲ್ಲಿ ಈದ್ ನಮಾಜ್ ಆಚರಿಸಿದರು.
ಗೆಳೆಯರು, ಬಂಧು ಬಾಂಧವರ ಜತೆ ಈದ್ಗಾ ಮೈದಾನದಲ್ಲಿ ಸಂಭ್ರಮದಿಂದ ನಮಾಜ್ ಆಚರಿಸುವ ಮುಸಲ್ಮಾನರಿಗೆ ಈ ಬಾರಿ ಇಂತಹ ಅವಕಾಶ ದೊರೆಯಲಿಲ್ಲ. ಇದರಿಂದ ಸಂಭ್ರಮದ ಕೊರತೆ ಎದ್ದು ಕಾಣುತ್ತಿತ್ತು.
ಆದಾಗ್ಯೂ ಮನೆಗಳಲ್ಲಿ ನಮಾಜ್ ಆಚರಿಸಿ ಕುಟುಂಬದ ವರ ಜತೆ ಸಂತಸ ಹಂಚಿಕೊಂಡರು.
ನಮಾಜ್ ವೇಳೆ ದೈಹಿಕ ಅಂತರ ಕಾಪಾಡಿಕೊಳ್ಳಲಾಗಿತ್ತು.
ಬಿಕೋ ಎನ್ನುತ್ತಿದ್ದ ಈದ್ಗಾ ಮೈದಾನ
ಈದ್ ದಿನಗಳಲ್ಲಿ ಜನರಿಂದ ತುಂಬಿ ತುಳುಕುತ್ತಿದ್ದ ಈದ್ಗಾ ಮೈದಾನ ಇದೇ ಮೊದಲ ಬಾರಿಗೆ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.
ಈದ್ಗಾದಲ್ಲಿ ನಮಾಜ್ ಆಚರಿದ ಕಾರಣ ಎಲ್ಲರ ಮನದಲ್ಲೂ ಬೇಸರದ ಭಾವನೆ ಮೂಡಿತ್ತು.
ಮನೆಗಳಲ್ಲಿ ತಮ್ಮ ಮಕ್ಕಳೊಂದಿಗೆ ಹಿರಿಯರು ಪ್ರಾರ್ಥನೆಯ ಮುಂದಾಳತ್ವ ವಹಿಸಿದ್ದರು. ಈ ವೇಳೆ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿರುವ ಮಹಾ ಮಾರಿ ಕರೊನಾ ಮಹಾಮಾರಿಯಿಂದ ಭಾರತ ಮತ್ತು ಇಡೀ ಜಗತ್ತು ಮುಕ್ತವಾಗಲಿ ಎಂದು ಪ್ರಾರ್ಥಿಸಲಾಯಿತು.