ಗೋಕಾಕ: ಕೊರೋನಾ ಶಂಕೆ ಹಿನ್ನೆಲೆ ಇಲ್ಲಿನ ಲೋಕೊಪಯೋಗಿ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಸುಮಾರು 14 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಈಗಾಗಲೇ ಲೋಕೊಪಯೋಗಿ ಕಚೇರಿಯನ್ನು ಸಿಲ್ ಡೌನ್ ಮಾಡಲಾಗಿದ್ದು ಕೊರೋನಾ ಶಂಕೆವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ತೀವ್ರ ನಿಗಾಃ ಇರಿಸಲಾಗಿದೆ.
ಲೊಕೋಪಯೋಗಿ ಇಲಾಖೆಯ ಎಸ್‌ಡಿಎ ಕಲ್ಲೊಳ್ಳಿ ಗ್ರಾಮದ ಸೋಂಕಿತನ ಸಂಪರ್ಕಕ್ಕೆ ಬಂದಿದ್ದಾನೆ. ಮುಂಬೈನಿಂದ ಬಂದ ಕಲ್ಲೊಳ್ಳಿ ಗ್ರಾಮದ ವ್ಯಕ್ತಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿತ್ತು. ಥ್ರೋಟ್ ಸ್ವ್ಯಾಬ್ ವರದಿ ಬರುವ ಮುನ್ನವೇ ಬಿಡುಗಡೆ ಮಾಡಲಾಗಿತ್ತು. ಜೂನ್ 2ರಂದು ಕಲ್ಲೊಳ್ಳಿಯ ವ್ಯಕ್ತಿಯಲ್ಲಿ ಕೊರೊನಾ ದೃಢವಾಗಿತ್ತು. ಕ್ವಾರಂಟೈನ್‌ನಿಂದ ಮನೆಗೆ ಬಂದ ವ್ಯಕ್ತಿಯನ್ನು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಭೇಟಿಯಾಗಿದ್ದಾನೆ.
ಮುಂಜಾಗ್ರತಾ ಕ್ರಮವಾಗಿ ಕಚೇರಿಯ ಸಿಬ್ಬಂದಿಗೂ ಸೀಲ್ ಹಾಕಿ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದವನಿಂದ ಸರ್ಕಾರಿ ಕಚೇರಿಯೇ ಸೀಲ್ ಡೌನ್ ಮಾಡಲಾಗಿದೆ.