Breaking News
Home / ಕೊರೊನಾವೈರಸ್ / ಕೋವಿಡ್ ವಾರ್ಡ್ ನಿಂದಲೇ ನಾನು ಆರೋಗ್ಯವಾಗಿದ್ದು, ಯಾರೂ ಗಾಬರಿಯಾಗೋದು ಬೇಡ’ ಎಂದು ಕೈ ಮುಗಿಯುತ್ತ ಕಾಮೇಗೌಡರು

ಕೋವಿಡ್ ವಾರ್ಡ್ ನಿಂದಲೇ ನಾನು ಆರೋಗ್ಯವಾಗಿದ್ದು, ಯಾರೂ ಗಾಬರಿಯಾಗೋದು ಬೇಡ’ ಎಂದು ಕೈ ಮುಗಿಯುತ್ತ ಕಾಮೇಗೌಡರು

Spread the love

ಮಂಡ್ಯ: ಕರೊನಾ ಸೋಂಕಿನಿಂದ ಬಳಲುತ್ತಿರುವ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಕಾಮೇಗೌಡ ತಮ್ಮ ಆರೋಗ್ಯ ಪರಿಸ್ಥಿತಿ ಕುರಿತು ಅವರೇ ಮಾತನಾಡಿದ್ದಾರೆ.

‘ಆಸ್ಪತ್ರೆಯಲ್ಲಿ ನನ್ನನ್ನು ಚೆನ್ನಾಗಿ ನೋಡ್ಕೋತ್ತಿದ್ದಾರೆ. ಟೈಂ ಟೈಂಗೆ ವೈದ್ಯರು ಬಂದು ತಪಾಸಣೆ ನಡೆಸ್ತಿದ್ದಾರೆ. ಊಟ ತಿಂಡಿಯ ವ್ಯವಸ್ಥೆಯೂ ಚೆನ್ನಾಗಿದೆ. ನಾನು ಶೌಚಗೃಹಕ್ಕೆ ಹೋಗಿ ಬರಲು ಒಬ್ಬರನ್ನ ನಿಯೋಜಿಸ್ತೀನಿ ಎಂದು ಹೇಳಿದ್ದಾರೆ. ನನಗೆ ಸ್ವಲ್ಪ ಕಾಲು ನೋವು ಇರೋದು ಬಿಟ್ರೆ ಬೇರೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ನಾನು ಆರೋಗ್ಯವಾಗಿದ್ದು, ಯಾರೂ ಗಾಬರಿಯಾಗೋದು ಬೇಡ’ ಎಂದು ಕೈ ಮುಗಿಯುತ್ತ ಕಾಮೇಗೌಡರು ತಿಳಿಸಿದ್ದಾರೆ

ಎರಡು ವಾರಗಳ ಹಿಂದೆ ಕಾಲು ಗಾಯಯೊಂಡು ಅನಾರೋಗ್ಯಕ್ಕೀಡಾಗಿದ್ದ ಕಾಮೇಗೌಡರಿಗೆ ತುರ್ತು ಚಿಕಿತ್ಸಾ ವಾಹನದಲ್ಲಿ ನಿತ್ಯ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿ, ಮತ್ತೆ ಮನೆಗೆ ಬಿಡಲಾಗುತ್ತಿತ್ತುನಾಲ್ಕು ದಿನಗಳ ಹಿಂದಷ್ಟೇ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಮಂಡ್ಯದ ಕೋವಿಡ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮನೆಯಲ್ಲಿ ಶೌಚಗೃಹ ಸೇರಿ ಎಲ್ಲದಕ್ಕೂ ಮಕ್ಕಳನ್ನೇ ಅವಲಂಬಿಸಿದ್ದ ಕಾಮೇಗೌಡರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿದ್ದು, ಇತರ ಕೆಲಸಗಳ ಆರೈಕೆ ಇಲ್ಲದೆ ಸೊರಗಿದ್ದಾರೆ. ಅನ್ನ ಆಹಾರ ಸೇವಿಸಿದರೆ ಶೌಚಗೃಹಕ್ಕೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಆಹಾರ ತ್ಯಜಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು. ಅವರ ಇಬ್ಬರು ಮಕ್ಕಳು ಹೋಂ ಕ್ವಾರಂಟೈನ್ ನಲ್ಲಿದ್ದಾರೆ. ಕಾಮೇಗೌಡರನ್ನು ಶೌಚಗೃಹಕ್ಕೆ ಕರೆದೊಯ್ಯಲು ಒಬ್ಬರನ್ನು ನೇಮಕ ಮಾಡುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದ್ದರು.

ಅಲ್ಲದೆ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್​, ‘ಕಾಮೇಗೌಡರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿರುವುದು ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ವೈದ್ಯಕೀಯ ಕಾಲೇಜಿನ ನಿರ್ದೇಶಕರಿಗೆ ಕರೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಚಿಕಿತ್ಸೆ ಒದಗಿಸಬೇಕೆಂದು ಸೂಚನೆ ನೀಡಿದ್ದೇನೆ. ಕಾಮೇಗೌಡರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ನಿನ್ನೆ(ಶನಿವಾರ)ಟ್ವೀಟ್ ಮಾಡಿದ್ದರು.

ಇದಾದ ಬೆನ್ನಲ್ಲೇ ಇಂದು(ಭಾನುವಾರ) ಆಸ್ಪತ್ರೆಯಿಂದಲೇ ಮಾತನಾಡಿರುವ ಕಾಮೇಗೌಡರು, ‘ನಾನು ಆರೋಗ್ಯವಾಗಿದ್ದು, ಯಾರೂ ಗಾಬರಿಯಾಗೋದು ಬೇಡ’ ಎಂದಿದ್ದಾರೆ.


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ