Breaking News

ಕೊರೋನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರಿಗೆ ಪುಡ್ ಕಿಟ್, ಸ್ಯಾನಿಟೇಜರ್, ಕೊಡೆ (ಛತ್ರಿ) ವಿತರಣೆ ಮಾಡಿದರು.

Spread the love

ಮಂಡ್ಯ.ಜೆ ಡಿ ಎಸ್ ಪಕ್ಷದ ಯುವ ನಾಯಕರಾದ ಬಿ.ಎಂ ಕಿರಣ್ ರವರು ಚೌಡೇನಹಳ್ಳಿ ಗ್ರಾಮಕ್ಕೆ ಬೇಟಿ ನೀಡಿ‌ ಕೊರೋನಾ ವಾರಿಯರ್ಸ್ಗಳಾದ ಆಶಾ ಕಾರ್ಯಕರ್ತೆಯರಿಗೆ ಪುಡ್ ಕಿಟ್, ಸ್ಯಾನಿಟೇಜರ್, ಕೊಡೆ (ಛತ್ರಿ) ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎನ್ ಪುಟ್ಟಸ್ವಾಮಿ ಗೌಡ್ರು ಮಾತನಾಡಿ ಸಮಾಜ ಸೇವಕ ಬಿ.ಎಂ ಕಿರಣ್ ರವರು ತಮ್ಮ ಸ್ವಂತ ಹಣದಲ್ಲಿ ಸಾವಿರಾರು ಜನರಿಗೆ ಆಸರೆಯಾಗಿದ್ದಾರೆ ಕಳೆದ ಎರಡು ತಿಂಗಳಿದ ಆರೋಗ್ಯ ಮೇಳ ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪುಡ್ ಕಿಟ್ ಗಳನ್ನು ನೀಡಿದ್ದು ಆಶಾ ಕಾರ್ಯಕರ್ತೆಯರಿಗೆ ನೆರೆವಾಗುತ್ತಿದ್ದು ಇಂತಹ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿದ್ದು ಇನ್ನೂ ಹೆಚ್ಚಿನ ಸಮಾಜ ಸೇವೇ ಮಾಡುವು ಶಕ್ತಿಯನ್ನು ಬಿ.ಎಂ ಕಿರಣ್ ಕುಟುಂಬಕ್ಕೆ ನೀಡಲಿ ಎಂದರು.. ಮಹಾಮಾರಿಯ ಬಗ್ಗೆ ಜನಸಾಮಾನ್ಯರು ಆತಂಕ ಪಡಬೇಕಾಗಿಲ್ಲ..

ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೇಜರ್ ಬಳಕೆ ಮಾಡುವುದರ ಜೊತೆಗೆ ವಯಕ್ತಿಕ ಸ್ವಚ್ಛತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ಎದುರಿಸಬೇಕು ಎಂದರು.

ಬಿ.ಎಂ ಕಿರಣ್ ಮಾತನಾಡಿ ಕೊರೋನಾ ವೈರಸ್ ತಡೆಗಟ್ಟಲು ಅಗಲಿರುಳು ಹಳ್ಳಿ ಹಳ್ಳಿಗಳಲ್ಲಿ ಪರಿಶ್ರಮ ಪಡುತ್ತಿರುವ ಆಶಾ ಕಾರ್ಯಕರ್ತೆಯರ ಪಾತ್ರ ಮೊದಲ ಸ್ಥಾನದಲ್ಲಿ ಇದೆ ಎಲ್ಲಾ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವಂತೆ ತಿಳಿಸಿದರು ಕೊರೋನಾ ಯುದ್ಧದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ಆರೋಗ್ಯವಂತ ಸಮಾಜವನ್ನು ನಿರ್ಮಾಣಕ್ಕೆ ಎಲ್ಲರೂ ಧೃಡ ಆತ್ಮವಿಶ್ವಾಸ ಬೆಳೆಸಿಕೊಳ್ಳಿಕೊಳ್ಳೊಣ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬಿ.ಎಸ್ ಮಂಜುನಾಥ್,ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಶಂಭು, ನಂಜೇಶಿ, ಕಾರ್ ಮಂಜು ಕಾಳೇಗೌಡ್ರು ಸೇರಿಂದತೆ ಬಿ.ಎಂ ಕಿರಣ್ ಅಭಿಮಾನಿ ಬಳಗದ ನೂರಾರು ಜನರು ಇದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ