Breaking News
Home / ಜಿಲ್ಲೆ / ಕಾಂಗ್ರೆಸ್ ನಿಂದ ಹೊರಬರಲು ಕಾರಣ ಡಿ.ಕೆ. ಶಿವಕುಮಾರ್ ಎಂದು ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ

ಕಾಂಗ್ರೆಸ್ ನಿಂದ ಹೊರಬರಲು ಕಾರಣ ಡಿ.ಕೆ. ಶಿವಕುಮಾರ್ ಎಂದು ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ

Spread the love

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತಿಗೆ ಕಾಂಗ್ರೆಸ್ ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅವರ ಮಾತನ್ನು ಸಿದ್ದರಾಮಯ್ಯನವರೇ ಕೇಳಲ್ಲ. ನಾವೆಲ್ಲ ಕಾಂಗ್ರೆಸ್ ನಿಂದ ಹೊರಬರಲು ಕಾರಣ ಡಿ.ಕೆ. ಶಿವಕುಮಾರ್ ಎಂದು ಸಚಿವ ಎಸ್.ಟಿ. ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಆರ್.ಆರ್. ನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಸೋಮಶೇಖರ್, ಮುನಿರತ್ನ, ನಾನು ಹಾಗೂ ಭೈರತಿ ಕಾಂಗ್ರೆಸ್ ಗೆ ನಿಷ್ಠಾವಂತ ಕಾರ್ಯಕರ್ತರಾಗಿದ್ದೆವು. ಆದರೆ ನಾವು ಪಕ್ಷ ತೊರೆಯಲು ಕಾರಣ ಯಾರೆಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಗೆ ಕಾರ್ಯಕರ್ತರಿಲ್ಲ. ಎಲ್ಲರೂ ಮುನಿರತ್ನ ಹಿಂದೆ ಬಂದಿದ್ದಾರೆ. ಕಾಂಗ್ರೆಸ್ ನವರು ಹೊರಗಿನಿಂದ ಜನರನ್ನು ಕರೆತಂದು ಬಿತ್ತಿ ಪತ್ರ ಹಂಚುತ್ತಿದ್ದಾರೆ.ಮುನಿರತ್ನ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಾವು ಅಭಿವೃದ್ಧಿ ಮುಂದಿಟ್ಟು ವೋಟ್ ಕೇಳುತ್ತಿದ್ದೇವೆ. ಇವರ ರೀತಿ ಭಯದ ವಾತಾವರಣ ಸೃಷ್ಟಿಸಿ ಮತ ಕೇಳುತಿಲ್ಲ ಎಂದು ಹೇಳಿದರು.


Spread the love

About Laxminews 24x7

Check Also

ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ. ಲೋಳಸೂರ, ಅರಭಾವಿ, ದುರದುಂಡಿ, ಬಡಿಗವಾಡ ಮಾರ್ಗವಾಗಿ ನಾಗನೂರುವರೆಗೆ ರ್ಯಾಲಿ.

Spread the love          ಗೋಕಾಕ: ನಾಳೆ ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಅರಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ