Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲಿಸ್ಟ್ ಕೊಡಲಿ ಅದರ ಪ್ರಕಾರ ಬಂಧಿಸುತ್ತೇವೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲಿಸ್ಟ್ ಕೊಡಲಿ ಅದರ ಪ್ರಕಾರ ಬಂಧಿಸುತ್ತೇವೆ

Spread the love

ಗೋಕಾಕ :ಗೋಕಾಕ ನ ಖಾಸಗಿ ವೈದ್ಯ ಡಾ. ಹೊಸಮನಿ ಅವರು ಎರಡು ಲಕ್ಷ ಬಿಲ್ ಮಾಡಿದ್ದಕ್ಕೆ ಗಲಾಟೆಯಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲಿಸ್ಟ್ ಕೊಡಲಿ ಅದರ ಪ್ರಕಾರ ಬಂಧಿಸುತ್ತೇವೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಭಾನುವಾರ ಗೋಕಾಕನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಗೋಕಾಕನಲ್ಲಿ ಖಾಸಗಿ ವೈದ್ಯ ಡಾ. ಹೊಸಮನಿ ಮೃತಪಟ್ಟ ವ್ಯಕ್ತಿಗೆ ಎರಡು ಲಕ್ಷ ರು. ಬಿಲ್ ಮಾಡಿರುವ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದೇನೆ. ಗೋಕಾಕ ನಲ್ಲಿ ಕೆಲ ಖಾಸಗಿ ವೈದ್ಯರು ಅಸೋಸಿಯೇಷನ್ ಮಾಡಿಕೊಂಡು ಜನರನ್ನು ಬ್ಲಾಕ್ ಮಾಡುತ್ತಿದ್ದಾರೆ. ಜನರಿಂದ ಸಾಕಷ್ಟು ದೂರುಗಳು ಬಂದಿದ್ದವು. ಬ್ಲಾಕ್ ಮೇಲ್ ಮಾಡಿದ ಖಾಸಗಿ ವೈದ್ಯರ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು.
ಮೃತಪಟ್ಟ ವ್ಯಕ್ತಿಯ ಪ್ರಕರಣಕ್ಕೆ ಸಂಬoಧಿಸಿದoತೆ ಅಲ್ಲಿ ಭೀಮಶಿ ಬರಮಣ್ಣವರ ಇರಲಿಲ್ಲ. ದುರ್ಗಣ್ಣವರ ಇದ್ದ. ರಾಜಕೀಯ ಒತ್ತಡದಿಂದ ಭರಮಣ್ಣವರ ಹೆಸರು ಹೇಳಿದ್ದಾರೆ. ಅಲ್ಲಿ ಭೀಮಶಿ ಇರಲಿಲ್ಲ. ಇದರಲ್ಲಿ ಅಧಿಕಾರಿಗಳು ಮಾಡಿದ್ದು ತಪ್ಪು ಖಾಸಗಿ ವೈದ್ಯ ಹೊಸಮನಿ ಮಾಡಿದ್ದು ತಪ್ಪು. ಮೃತಪಟ್ಟ ವ್ಯಕ್ತಿಗೆ ಎರಡು ಲಕ್ಷ ಬಿಲ್ ಮಾಡಿದ್ದಕ್ಕೆ ಗಲಾಟೆಯಾಗಿದೆ. ಡಾ. ಅಸೋಸಿಯೇಷನ್‌ಗೆ ಮನವಿ ಮಾಡಿಕೊಳ್ಳುತ್ತೇನೆ ಬಡವರ ಬಗ್ಗೆ ಕಾಳಜಿ ತೆಗೆದುಕೊಳ್ಳಿ ಬೇಕಾಬಿಟ್ಟಿ ಹಣ ಸುಲಿಗೆ ಮಾಡುವುದು ಸರಿಯಲ್ಲ ಎಂದರು.
ಕೊರೋನಾ ವೈರಸ್ ಹರಡುವಿಕೆಯ ಚೈನ್ ಬ್ಲಾಕ್ ಮಾಡಲು ಬೆಂಗಳೂರಿನ ಸುತ್ತಮುತ್ತ ಬರುವ ಏಳು ಅಥವಾ ಹತ್ತು ದಿನ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಣಯ ತೆಗೆದುಕೊಂಡಿದ್ದಾರೆ. ಸಂಬoಧಪಟ್ಟ ಆಯಾ ತಾಲೂಕಿನ ಅಧಿಕಾರಿಗಳು ಹಾಗೂ ಶಾಸಕರು ನಿರ್ಣಯ ತೆಗೆದುಕೊಂಡು ಲಾಕ್‌ಡೌನ್ ಮಾಡಲು ನಿರ್ಧರಿಸಲಾಗುವುದು ಎಂದರು.
ಕೊರೋನಾ ವೈರಸ್ ಸೋಂಕಿನಿoದ ರಾಜ್ಯದ ಜನರ ಜೀವ ಉಳಿಸುವುದು ಮುಖ್ಯವಾಗಿದೆ. ಗೋಕಾಕ ಜನರು ಕೊರೋನಾ ಮಹಾಮಾರಿಯ ತಡೆಗೆ ಸಲಹೆ ನೀಡಿದ್ದಕ್ಕೆ ಅಭಿನಂದನೆ ತಿಳಿಸಿದರು. ಕಳೆದ ಕೆಲ ತಿಂಗಳಿನಿoದ ಘೋಷಣೆ ಮಾಡಲಾದ ಪೂರ್ಣ ಪ್ರಮಾಣದ ಲಾಕ್‌ಡೌನ್ ಸಂದರ್ಭದಲ್ಲಿ ವಾರ್ಡ್ಗಳಿಗೆ ತರಕಾರಿ ಮಾರಾಟ, ಹಾಲು, ಪತ್ರಿಕೆ ಸರಬರಾಜು ಮಾಡಲು ಸರಕಾರ ಜವಾಬ್ದಾರಿ ತೆಗೆದುಕೊಳ್ಳತ್ತದೆ ಜನರು ರಸ್ತೆಗೆ ಬರದಂತೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ