ಬೀಜಿಂಗ್ : ಕಿಲ್ಲರ್ ಕೊರೊನಾ ವೈರಸ್ ಚಿಕಿತ್ಸೆಗಾಗಿ ಚೀನಾ ಸರ್ಕಾರವು ವುಹಾನ್ ಪ್ರಾಂತ್ಯದಲ್ಲಿ ಕೇವಲ 10 ದಿನಗಳಲ್ಲಿ ಕಟ್ಟಲಾಗಿದ್ದ ವಿಶ್ವದ ಅತ್ಯಂತ ದೊಡ್ಡ ಕೋವಿಡ್ 19 ಆಸ್ಪತ್ರೆಯನ್ನು ಚೀನಾ ಸರ್ಕಾರ ಇದೀಗ ಬಂದ್ ಮಾಡಿದೆ.
ಹೌದು, ವುಹಾನ್ ಪ್ರಾಂತ್ಯದಿಂದ ಕೊರೊನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಯಾವುದೇ ಹೊಸ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಆಸ್ಪತ್ರೆಯನ್ನು ಮುಚ್ಚಲಾಗಿದೆ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ
ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲೆಂದೇ 10 ದಿನಗಳಲ್ಲಿ ತಯಾರಿಸಲಾದ ಸಾವಿರಕ್ಕೂ ಹೆಚ್ಚು ಬೆಡ್ ಗಳ ಈ ಆಸ್ಪತ್ರೆ ವಿಶ್ವದ ಗಮನ ಸೆಳೆದಿತ್ತು. ಇದೀಗ ಯಾವುದೇ ಕೊರೊನಾ ವೈರಸ್ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಲೈಶೆನ್ಮಾನ್ ಆಸ್ಪತ್ರೆಯನ್ನು ಮುಚ್ಚಲಾಗಿದೆ.