Breaking News

ರೌಡಿಶೀಟರ್​ವೊಬ್ಬ, ಬೋಂಡಾ ತಿಂದ ಹಣ ಕೇಳಿದ್ದಕ್ಕೆ ಮಹಿಳೆ ಮೇಲೆ ಕುದಿಯುವ ಎಣ್ಣೆ ಎರಚಿ ಪರಾರಿಯಾದ ಘಟನೆ

Spread the love

ಬೆಂಗಳೂರು: ರೌಡಿಶೀಟರ್​ವೊಬ್ಬ, ಬೋಂಡಾ ತಿಂದ ಹಣ ಕೇಳಿದ್ದಕ್ಕೆ ಮಹಿಳೆ ಮೇಲೆ ಕುದಿಯುವ ಎಣ್ಣೆ ಎರಚಿ ಪರಾರಿಯಾದ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇಘಲಾ ಅನ್ನೋರು ಸಂಪಿಗೆಹಳ್ಳಿ ಬಳಿ ಪಕೋಡ ಸ್ಟಾಲ್ ನಡೆಸುತ್ತಾರೆ. ನಿನ್ನೆ ಸಂಜೆ 7:30ರ ಸುಮಾರಿಗೆ ಆರೋಪಿ ಹನೀಫ್, ಮೇಘಲಾರ ಅಂಗಡಿಯಲ್ಲಿ ಬೋಂಡಾ ತಿಂದು ಸಿಗರೇಟ್ ಸೇದಿದ್ದಾನೆ. ನಂತರ ಹಣ ಕೇಳಿದ್ದಕ್ಕೆ ಬೋಂಡಾ ಕರಿಯುತ್ತಿದ್ದ ಕುದಿಯುವ ಎಣ್ಣೆಯನ್ನ ಮೇಘಲಾ ಅವರ ಮೇಲೆ ಎರಚಿದ್ದಾನೆ. ಇದರಿಂದ ಮೇಘಲಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಹನೀಫ್ ಸಂಪಿಗೆಹಳ್ಳಿ ಠಾಣೆ ರೌಡಿಶೀಟರ್ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹನೀಫ್​​​ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ