Home / ಹುಬ್ಬಳ್ಳಿ / ಧಾರವಾಡದಲ್ಲಿ ಅಬ್ಬರದ ಮಳೆಗೆ ಜನ ತತ್ತರ: ಹಳ್ಳ – ಕೊಳ್ಳ, ಕೆರೆ ಕೋಡಿ ಒಡೆದು ಆತಂಕ ಸೃಷ್ಟಿ

ಧಾರವಾಡದಲ್ಲಿ ಅಬ್ಬರದ ಮಳೆಗೆ ಜನ ತತ್ತರ: ಹಳ್ಳ – ಕೊಳ್ಳ, ಕೆರೆ ಕೋಡಿ ಒಡೆದು ಆತಂಕ ಸೃಷ್ಟಿ

Spread the love

ಹುಬ್ಬಳ್ಳಿ (ಜು. 23): ಕೆಲ ದಿನಗಳಿಂದ ತಣ್ಣಗೆ ಸುರಿಯುತ್ತಿದ್ದ ಮಳೆ ಇಂದು ಏಕಾಏಕಿ ಅಬ್ಬರಿಸಿದೆ. ರಾತ್ರಿಯಿಂದಲೂ ಧಾರವಾಡ ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹುಬ್ಬಳ್ಳಿ ಸಮೀಪದ ಬೆಣ್ಣೆ ಹಳ್ಳ, ಕಲಘಟಗಿ ತಾಲೂಕಿನ ಬೇಡ್ತಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಹಲವು ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಕೆಲವೆಡೆ ಕೆರೆಗಳು ಒಡೆದು, ಜಮೀನಿಗೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯ ಭೀತಿ ಸೃಷ್ಟಿಯಾಗಿದೆ. ಹುಬ್ಬಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆ ಸತತವಾಗಿ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಯಿಂದಾಗಿ ಹಳ್ಳ – ಕೊಳ್ಳಗಳು ತುಂಬಿ ಹರಿಯುತ್ತಿವೆ. ಬೆಣ್ಣೆ ಹಳ್ಳ ಉಕ್ಕಿ ಹರಿಯಲಾರಂಭಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳು ಜಲಾವೃತ್ತಗೊಂಡಿವೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುರುವಿನಹಳ್ಳಿ, ದ್ಯಾವನೂರ, ಶಿರೂರ, ಮುಳ್ಳೋಳ್ಳಿ ಗ್ರಾಮದಲ್ಲಿ ಅಪಾರ ಪ್ರಮಾಣದ ಬೆಳೆ ಜಲಾವೃತಗೊಂಡಿದೆ.

ಶಿರೂರ-ಕಮಡೋಳ್ಳಿ ರಸ್ತೆಯ ಸೇತುವೆ ಜಲಾವೃತ್ತಗೊಂಡಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಜಮೀನಿಗೂ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯ ಭೀತಿ ಸೃಷ್ಟಿಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ವಿವಿಧೆಡೆ ವರುಣನ ಅಬ್ಬರ ನಿಂತಿಲ್ಲ. ಕಳೆದ ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು, ಮಳೆಯ ಅಬ್ಬರಕ್ಕೆ ಹಳ್ಳ – ಕೊಳ್ಳ ತುಂಬಿ ಹರಿಯುತ್ತಿವೆ. ಧಾರವಾಡ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಕೆರೆ ಒಡ್ಡು ಒಡೆದು, ಜಮೀನುಗಳಿಗೆ ನೀರು ನುಗ್ಗಿರೋ ಘಟನೆ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿ ನಡೆದಿದೆ. ಕೆರೆಯ ಒಡ್ಡು ಒಡೆದು ನೀರು ಹೊರ ಬರುತ್ತಿದ್ದು, ಅಕ್ಕ ಪಕ್ಕದ ಜಮೀನು ಜಲಾವೃತ್ತಗೊಳ್ಳುವಂತಾಗಿದೆ. ಕೆರೆ ಒಡೆದು ಅವಾಂತರ ಸೃಷ್ಟಿಯಾಗಿದ್ದು, ಗ್ರಾಮದ ಮಲ್ಲಿಕಾರ್ಜುನ ತೊಳಲಿ ಎಂಬುವರಿಗೆ ಸೇರಿದ ಜಮೀನು ಸಂಪೂರ್ಣ ಜಲಾವೃತಗೊಂಡಿದೆ. ಇತರೆ ರೈತರ ಜಮೀನುಗಳಿಗೂ ನೀರು ನುಗ್ಗುತ್ತಿದ್ದು, ಅನ್ನದಾತರ ಆತಂಕದಲ್ಲಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕೆರೆ ದುರಸ್ತಿ ಮಾಡಿಸೋ ಜೊತೆಗೆ, ಹಾನಿಯ ಸಮೀಕ್ಷೆ ಮಾಡುವಂತೆ ರೈತರು ಸಣ್ಣ ನೀರಾವರಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಮತ್ತೊಂದೆಡೆ ಮಳೆಯ ಆರ್ಭಟಕ್ಕೆ ಹೊಲಗಳಿಗೆ ನೀರು ನುಗ್ಗಿ ಬಾಳೆ ತೋಟ ಹಾನಿಗೀಡಾದ ಘಟನೆ ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮದಲ್ಲಿ ನಡೆದಿದೆ. ಎರಡ ಎಕರೆ ಬಾಳೆ ತೋಟ ಮಳೆಯಿಂದ ಹಾನಿಗೀಡಾಗಿದೆ. ತಾವರಗೇರಿ ಗ್ರಾಮದ ಗ್ರಾಮದ ಕಲ್ಲಪ್ಪ ಪುಟ್ಟಪ್ಪನವರ ಎಂಬ ರೈತನಿಗೆ ಸೇರಿದ ತೋಟ ಹಾನಿಗೆ ತುತ್ತಾಗಿದೆ. ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ತೋಟಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದೆ.
ಇನ್ನೂ ಧಾರವಾಡ ತಾಲೂಕಿನ ಕಲ್ಲಾಪುರ ಕೆರೆ ತುಂಬಿದ ಹಿನ್ನೆಲೆಯಲ್ಲಿ ಕೆರೆ ಕೋಡಿ ಹರಿದು ಜಮೀನುಗಳಿಗೆ ನೀರು ನುಗ್ಗಿದೆ. ಮಳೆಯ ಆರ್ಭಟಕ್ಕೆ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ನೀರಿನಿಂದ ಜಲಾವೃತಗೊಂಡಿದೆ. ಇದೇ ವೇಳೆ ಹುಬ್ಬಳ್ಳಿಯ ಉಣಕಲ್ ಕೆರೆಯೂ ಭರ್ತಿಯಾಗಿ ಕೆರೆ ಕೋಡಿ ಹರಿಯುತ್ತಿದೆ. ಕೆರೆ ಕೋಡಿ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಬೇಡ್ತಿ ಹಳ್ಳದಲ್ಲಿ ಮುಳುಗಡೆಯಾದ ಕೃಷ್ಣ ಮಂದಿರ…

ಮಳೆಯ ಆರ್ಭಟದಿಂದಾಗಿ ಧಾರವಾಡ ಜಿಲ್ಲೆಯ ಬೇಡ್ತಿ ಹಳ್ಳ ತುಂಬಿ ಹರಿಯುತ್ತಿದೆ. ಬೇಡ್ತಿ ಹಳ್ಳದ ದಡದಲ್ಲಿರುವ ಕೃಷ್ಣನ ದೇವಸ್ಥಾನ ಮುಳುಗಡೆಯಾಗಿದೆ. ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದ ಬಳಿ ಬೇಡ್ತಿ ಹಳ್ಳಕ್ಕೆ ಹೊಂದಿಕೊಂಡು ಕೃಷ್ಣನ ದೇವಸ್ಥಾನ ದೇವಸ್ಥಾನವಿದೆ. ಬೇಡ್ತಿ ಹಳ್ಳ ಉಕ್ಕಿ ಹರಿಯುತ್ತಿರುವುದರಿಂದಾಗಿ ಅಕ್ಕ – ಪಕ್ಕದ ಗ್ರಾಮದ ಜನರಲ್ಲಿ ಆತಂಕ ಹೆಚ್ಚಾಗಿದೆ. ಬೇಡ್ತಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗೋ ಆತಂಕವೂ ಎದುರಾಗಿದೆ.ಹುಬ್ಬಳ್ಳಿ ನಗರದಲ್ಲಿಯೂ ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿವೆ. ಹುಬ್ಬಳ್ಳಿಯ ಚೇತಲ್ ಕಾಲೋನಿ ಮತ್ತಿತರ ಕಡೆ ಮನೆಗಳಿಗೆ ನೀರು ನುಗ್ಗಿದ್ದು, ದವಸ – ಧಾನ್ಯ ಮಳೆ ನೀರಿಗೆ ಆಹುತಿಯಾಗಿವೆ. ಮಳೆ ನೀರು ಹೆಚ್ಚಾಗಿ, ಒಳಚರಂಡಿಗಳು ಬ್ಲಾಕ್ ಆಗಿ ಮನೆಗಳಿಗೆ ಹಿಮ್ಮುಖವಾಗಿ ನೀರು ನುಗ್ಗಿದ್ದರಿಂದ ಅವಾಂತರ ಸೃಷ್ಟಿಯಾಗಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹುಬ್ಬಳ್ಳಿಯ ಉಣಕಲ್ ಕೆರೆ ಕೋಡಿ ರೂಪದಲ್ಲಿ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.


Spread the love

About Laxminews 24x7

Check Also

ನೇಹಾ ಹತ್ಯೆ ಖಂಡಿಸಿ ಮುಸ್ಲಿಂ ಸಮುದಾಯದ ಅಂಗಡಿ-ಮುಂಗಟ್ಟು ಬಂದ್‌: ಮೌನ ಮೆರವಣಿಗೆ

Spread the loveಧಾರವಾಡ : ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆಯ ಆರೋಪಿ ಫಯಾಜ್‌ಗೆ ಶೀಘ್ರ ಕಠಿನ ಶಿಕ್ಷೆ ಕೊಡಿಸಿ ಅವರ ಕುಟುಂಬಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ