Breaking News

ಚೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು

Spread the love

ಹುಬ್ಬಳ್ಳಿ: ಚೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು ಜೋರಾಗಿದೆ. ಮೂವರು ಯುವಕರು ಬುಲೆಟ್ ಬೈಕಿನಲ್ಲಿ ಆಗಮಿಸಿ ಮಗನ ಮದುವೆ ಸಂಭ್ರಮದಲ್ಲಿದ್ದ ರೌಡಿ ಶೀಟರ್ ಮೇಲೆ ನಾಲ್ಕು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡಿನ ದಾಳಿಯಲ್ಲಿ ಮೂರು ಗುಂಡು ರೌಡಿ ಶೀಟರ್ ಫ್ರೋಟ್ ಇರ್ಫಾನ್‍ಗೆ ತಗುಲಿದ ಪರಿಣಾಮ ರೌಡಿ ಶೀಟರ್ ಸ್ಥಿತಿ ಗಂಭೀರವಾಗಿದೆ. ಧಾರವಾಡದ ರೌಡಿಶೀಟರ್ ಇರ್ಫಾನ್ ಮೇಲೆಯೇ ಅಪರಿಚಿತರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಹಳೇ ಹುಬ್ಬಳ್ಳಿಯ ವಿಶಾಲ ನಗರದ ಕಲ್ಯಾಣ ಮಂಟಪದ ಬಳಿ ಘಟನೆ ನಡೆದಿದ್ದು, ಫೈರಿಂಗ್ ಮಾಡುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಧಾರವಾಡದ ಫ್ರೋಟ್ ಇರ್ಫಾನ್ ನಾಲ್ಕು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪರಿಣಾಮ ಇರ್ಪಾನ್ ಮೇಲೆ ರೌಡಿ ಶೀಟರ್ ಕೇಸ್ ದಾಖಲಾಗಿತ್ತು. ಇರ್ಫಾನ್ ಮೇಲೆ ಗುಂಡಿನ ದಾಳಿಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗುತಿತ್ತು, ಇರ್ಫಾನ್ ಇಂದು ತನ್ನ ಮಗನ ಮದುವೆ ನಂತರ ಕಲ್ಯಾಣ ಮಂಟಪದ ಹೊರಗೆ ಬೀಗರಿಗೆ ಬೀಳ್ಕೊಡುಗೆ ನೀಡುತ್ತಿದ್ದ. ಈ ವೇಳೆ ಗುಂಡಿನ ದಾಳಿ ನಡೆದಿದೆ. ಮೂರು ಗುಂಡು ಇರ್ಫಾನ್‍ಗೆ ತಗುಲಿದ್ದು ಇರ್ಫಾನ್ ಸದ್ಯ ಸುಚಿರಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

 

ಘಟನೆಯ ನಂತರ ಹಳೇ ಹುಬ್ಬಳ್ಳಿಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದೀಗ ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

Spread the loveಹುಬ್ಬಳ್ಳಿ: ಕಾಲೇಜಿನ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಾಲ್ಕನೇ ಮಹಡಿಯಿಂದ ಬಿದ್ದು ಅನುಮಾನಸ್ಫದವಾದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಭೈರಿದೇರಕೊಪ್ಪದಲ್ಲಿರುವ ಸನಾ ಕಾಲೇಜಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ