Home / ರಾಜಕೀಯ / ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಸಿಕ್ಕಾಪಟ್ಟೆ ಮಳೆ; ಎಲ್ಲೆಲ್ಲಿ ಏನೆಲ್ಲಾ ಆಯ್ತು..?

ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಸಿಕ್ಕಾಪಟ್ಟೆ ಮಳೆ; ಎಲ್ಲೆಲ್ಲಿ ಏನೆಲ್ಲಾ ಆಯ್ತು..?

Spread the love

ಬೆಂಗಳೂರು: ರಾಜ್ಯಾದ್ಯಂತ ವರುಣನ ಆಭರ್ಟ ಜೋರಾಗಿದ್ದು, ಈ ಮಳೆ ಕೆಲವು ಭಾಗಗಳ ಜನರಿಗೆ ಹರ್ಷ ಮೂಡಿಸಿದರೆ, ಹಲವೆಡೆ ಅವಾಂತರ ಸೃಷ್ಟಿಸಿ ಜನರ ಶಾಪಕ್ಕೆ ಗುರಿಯಾಗ್ತಿದೆ.

 

 

ಕೊಡಗಿನಲ್ಲಿ ಮುಂದುವರಿದ ಮಳೆ
ಇನ್ನು ಕೊಡಗು ಜಿಲ್ಲೆಯಲ್ಲೂ ಕೂಡ ವರಣನ ಅಬ್ಬರ ಮುಂದುರೆದಿದ್ದು, ಇಂದೂ ಕೂಡ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾತ್ರಿಯಿಂದ ಬಿಡುವು ನೀಡಿದ್ದ ಮಳೆ ಮುಂಜಾನೆ ಯಾಗುತ್ತಿದ್ದಂತೆ ಮತ್ತೆ ಆರ್ಭಟ ಮುಂದುವರಿದಿದೆ.

ಕಾವೇರಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ
ನಿರಂತರ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದ್ದು ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿ ನೀರಿನ ಮಟ್ಟದಲ್ಲಿ ಕೂಡ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ಹಾರಂಗಿ ಜಲಾಶಯ ಪಾತ್ರದಲ್ಲಿ ಧಾರಾಕಾರ ಮಳೆ ಹಿನ್ನಲೆ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್ ಒಳಹರಿವು ನದಿಗೆ 6,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನತೆ ಎಚ್ಚರಿಕೆಯಿಂದಿರಲು ಅಧಿಕಾರಿಗಳ ಸೂಚನೆ ನೀಡಿದ್ದಾರೆ.

 

ಮೀನು ಶಿಕಾರಿ
ಚಿಕ್ಕಮಗಳೂರಿನಲ್ಲಿ ಕೂಡ ಪುನರ್ವಸು ಮಳೆಯ ಅಬ್ಬರ ಜೋರಾಗಿಯೇ ಇದೆ. ಸಾಂಪ್ರದಾಯಿಕವಾಗಿ ಪುನರ್ವಸು ಮಳೆಯಲ್ಲಿ ಮಲೆನಾಡಿಗರು ಮೀನು ಶಿಕಾರಿಗಳಲ್ಲಿ ಮಿಂದೆಳುತ್ತಿದ್ದಾರೆ. ಹೇಮಾವತಿ ಹಾಗೂ ಉಪನದಿಗಳಲ್ಲಿ ಕೂಳಿ ಹಾಕಿ ರಾಶಿ ರಾಶಿ ಮೀನು ಹಿಡಿಯುತ್ತಿದ್ದಾರೆ.

 

 

ಉಡುಪಿಯಲ್ಲಿ ರೆಡ್​ ಅಲರ್ಟ್​
ಉಡುಪಿ ಜಿಲ್ಲೆಯಲ್ಲೂ ಕೂಡ ಧಾರಾಕಾರ ಮಳೆಯಾಗುತ್ತಿದ್ದು, ಜನ ಮನೆ ಬಿಟ್ಟು ಹೊರಗೆ ಬರಲಾಗದ ಪರಿಸ್ಥತಿ ನಿರ್ಮಾಣ ಮಾಡಿದೆ. ನಾಳೆ ಕೂಡ ಭಾರಿ ಮಳೆಯಾಗುವ, ಮುನ್ಸೂಚನೆ ಇದ್ದು, ನಾಳೆ ಜಿಲ್ಲೆಯಾದ್ಯಂತ ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

 

ಬೆಳಗಾವಿಯಲ್ಲಿ ಸತತ ಮೂರು ದಿನದಿಂದ ಮಳೆಯಾಗುತ್ತಿದ್ದು ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಹೊಸ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ ತಾತ್ಕಾಲಿಕ ಬಸ್​ ನಿಲ್ದಾಣ ಮಾಡಿದ್ದು, ಮಳೆ ನೀರು, ಚರಂಡಿ ನೀರಿನ ಸಮೇತ ನಿಲ್ದಾಣಕ್ಕೆ ನುಗ್ಗಿ ಅವಾಂತರ ಸೃಷ್ಟಿಸಿದ್ದು ಪ್ರಯಾಣಿಕರು ಓಡಾಡಲು ಪರದಾಡುವಂತಾಗಿದೆ.

ಇನ್ನು ಬೆಂಗಳೂರಿನಲ್ಲೂ ಮಳೆರಾಯನ ಆರ್ಭಟ ಮುಂದುವರಿದೆ. ನಿನ್ನೆ ರಾತ್ರಿ ಇಡೀ ಮಳೆ ಸುರಿದ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.


Spread the love

About Laxminews 24x7

Check Also

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

Spread the love ಬೆಂಗಳೂರು/ಹೊಸದಿಲ್ಲಿ: ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮತ್ತೆ ಜೈಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ