Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ವೃತ್ತಿಪರ ಕುಲಕಸುಬನ್ನು ಅವಲಂಬಿಸಿರುವ ವಿವಿಧ ಸಮುದಾಯಗಳನ್ನೊಳಗಂಡ ಎಲ್ಲ ರೀತಿಯ ದುಡಿಯುವ ವರ್ಗಕ್ಕೆ 10 ಸಾವಿರ ರೂಗಳ ಆರ್ಥಿಕ ನೆರವು ನೀಡಬೇಕು: ವಿಷ್ಣು ಲಾತೂರ

ವೃತ್ತಿಪರ ಕುಲಕಸುಬನ್ನು ಅವಲಂಬಿಸಿರುವ ವಿವಿಧ ಸಮುದಾಯಗಳನ್ನೊಳಗಂಡ ಎಲ್ಲ ರೀತಿಯ ದುಡಿಯುವ ವರ್ಗಕ್ಕೆ 10 ಸಾವಿರ ರೂಗಳ ಆರ್ಥಿಕ ನೆರವು ನೀಡಬೇಕು: ವಿಷ್ಣು ಲಾತೂರ

Spread the love

ಗೋಕಾಕ: ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ತೀವೃ ಸಂಕಷ್ಟದಲ್ಲಿರುವ ಹಿಂದುಳಿದ ವರ್ಗಗಳ ಸಂಘಟಿತ ಹಾಗೂ ಅಸಂಘಟಿತ ಸಂಪ್ರದಾಯಿಕ ವೃತ್ತಿಪರ ಕುಲಕಸುಬನ್ನು ಅವಲಂಬಿಸಿರುವ ವಿವಿಧ ಸಮುದಾಯಗಳನ್ನೊಳಗಂಡ ಎಲ್ಲ ರೀತಿಯ ದುಡಿಯುವ ವರ್ಗಕ್ಕೆ 10 ಸಾವಿರ ರೂಗಳ ಆರ್ಥಿಕ ನೆರವು ನೀಡಬೇಕೆಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದುಡಿಯುವ ವರ್ಗಕ್ಕೆ ಮೂಗಿಗೆ ತುಪ್ಪ ಸವರಿದಂತೆ ಕೇವಲ 2 ಸಾವಿರ ರೂಗಳನ್ನು ವಿಶೇಷ ಪ್ಯಾಕೇಜನಡಿ ಘೋಷಣೆ ಮಾಡಿರುವುದು ಕುಟುಂಬದ ಒಂದು ದಿನದ ಖರ್ಚಿಗೂ ಸಾಕಾಗುವದಿಲ್ಲ ಮುಖ್ಯಮಂತ್ರಿಗಳು ಕೂಡಲೇ ಎಚ್ಚೆತ್ತುಕೊಂಡು ಮರುಪರಿಶೀಲನೆ ನಡೆಸಿ 10 ಸಾವಿರ ರೂಗಳನ್ನು ನೀಡಬೇಕು ಅಲ್ಲದೇ ರಾಜ್ಯದ ಜನತೆ ಉಚಿತವಾಗಿ ವಿದ್ಯುತ ಹಾಗೂ ನೀರು ಸರಬುರಾಜ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಲಾಕ್‍ಡೌನ್‍ನಿಂದ ತೀವೃ ಸಂಕಷ್ಟದಲ್ಲಿರುವ ಹಿಂದುಳಿದ ವರ್ಗಗಳ ಸಂಘಟಿತ ಹಾಗೂ ಅಸಂಘಟಿತ ಸಂಪ್ರದಾಯಿಕ ವೃತ್ತಿಪರ ಕುಲಕಸುಬನ್ನು ಅವಲಂಬಿಸಿರುವ ದುಡಿಯುವ ವರ್ಗಕ್ಕೆ ಕಳೆದ ವರ್ಷದಲ್ಲಿ ಮಾಡಿದಂತೆ ಒಬ್ಬರಿಗೂ ಕೋಡುವುದು ಇನ್ನೂಬ್ಬರಿಗೆ ಬೀಡುವ ಹಾಗೇಯೆ ಮಾಡದೇ ಪ್ರತಿಯೊಬ್ಬರಿಗೆ ಆರ್ಥಿಕ ನೆರವು ಸಿಗುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.

ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ನಮ್ಮ ಸಂಘಟನೆ ಸೇರಿದಂತೆ ವಿವಿಧ ಸಮುದಾಯಗಳ ಸಂಘಟನೆ ಒಕ್ಕೂಟದಿಂದ ಈಗಾಗಲೇ ಮುಖ್ಯಮಂತ್ರಿಗಳ ಗಮನ ಸೆಳೆಯಲು ಪತ್ರ ಚಳುವಳಿಯನ್ನು ಮೂಲಕ ಮನವಿ ಮಾಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಷ್ಣು ಲಾತೂರ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೋಟೋ 01 ಜಿಕೆಕೆ-1
ವಿಷ್ಣು ಲಾತೂರ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷರು.


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ