Breaking News
Home / ಜಿಲ್ಲೆ / ಬೆಂಗಳೂರು / ವೈದ್ಯೆಯಿಂದ ವ್ಯಾಕ್ಸಿನ್ ಕಳ್ಳ ದಂಧೆ – ಪೊಲೀಸರ ಬಲೆಗೆ ಗ್ಯಾಂಗ್

ವೈದ್ಯೆಯಿಂದ ವ್ಯಾಕ್ಸಿನ್ ಕಳ್ಳ ದಂಧೆ – ಪೊಲೀಸರ ಬಲೆಗೆ ಗ್ಯಾಂಗ್

Spread the love

ಬೆಂಗಳೂರು: ಹಲವರು ವ್ಯಾಕ್ಸಿನ್‍ಗಾಗಿ ದಿನಗಟ್ಟಲೇ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇನ್ನೂ ಹಲವರು ಮೂರ್ನಾಲ್ಕು ದಿನ ಆಸ್ಪತ್ರೆಗೆ ಅಲೆದರೂ ವ್ಯಾಕ್ಸಿನ್ ಖಾಲಿ ಆಗಿದೆ 3 ದಿನ ಬಿಟ್ಟು ಬನ್ನಿ ಎಂದೇ ಹೇಳುತ್ತಿದ್ದಾರೆ. ಆದರೆ ಬೆಂಗಳೂರಿನ ವೈದ್ಯೆಯೊಬ್ಬಳು ಕಳ್ಳ ಮಾರ್ಗದಲ್ಲಿ ವ್ಯಾಕ್ಸಿನ್ ನೀಡಿದ್ದಾರೆ. ಈ ಕುರಿತು ಭಯಾನಕ ಸತ್ಯ ಇದೀಗ ಹೊರ ಬಿದ್ದಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸರು ವೈದ್ಯೆ ಡಾ.ಪುಷ್ಪಿತಾ(25) ಮತ್ತು ಸಿಬ್ಬಂದಿ ಪ್ರೇಮಾ (34) ಅವರನ್ನು ಬಂಧಿಸಿದ್ದಾರೆ.

ಡಾ. ಪುಷ್ಪಿತಾ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು. ಬಳಿಕ ಮನೆಯಲ್ಲಿಯೇ ಅಕ್ರಮವಾಗಿ ಲಸಿಕೆ ನೀಡುವ ದಂಧೆ ಆರಂಭಿಸಿದ್ದಳು. ಏ.23 ರಿಂದಲೂ ತಲಾ 500 ರೂ. ಪಡೆದು ಇವರು ಲಸಿಕೆಯನ್ನು ವಿತರಿಸುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಆಧಾರಿಸಿ ಲಸಿಕೆ ಪಡೆಯುವ ನೆಪದಲ್ಲಿ ಮನೆಗೆ ತೆರಳಿದ್ದ ಪೊಲೀಸರು, ರೆಡ್ ಹ್ಯಾಂಡಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರೀಂಜ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ವ್ಯಾಕ್ಸಿನ್ ಗಾಗಿ ಮೊದಲೇ ಬುಕ್ಕಿಂಗ್ ನಡೆಯುತ್ತಿತ್ತು, ಶ್ರೀಮಂತರು ಫೋನ್ ಮೂಲಕ ವ್ಯಾಕ್ಸಿನ್ ಬುಕ್ ಮಾಡಿ ಅವರ ಹೆಸರನ್ನು ಹೇಳುತ್ತಿದ್ದರು. ವೈದ್ಯೆ ನೋಟ್ ಬುಕ್ ಅಲ್ಲಿ ಅವರ ಹೆಸರು ಬರೆದುಕೊಳ್ಳುತ್ತಿದ್ದಳು. ಬಳಿಕ ವ್ಯಾಕ್ಸಿನ್‍ಗಾಗಿ ಸಾಲು ನಿಂತವರಲ್ಲಿ ಇವರ ಹೆಸರು ಕೇಳಿ, ನೋಟ್ ಬುಕ್ ನಲ್ಲಿ ರಿಜಿಸ್ಟರ್ ಆಗಿದ್ದರೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿತ್ತು. ಹೀಗಾಗಿ ಒಂದು ವಾರ ಮುಂಚೆಯೇ ವ್ಯಾಕ್ಸಿನ್ ಗೆ ಮುಂಗಡ ಬುಕ್ಕಿಂಗ್ ಮಾಡಬೇಕಿತ್ತು. ಕದ್ದು ಮುಚ್ಚಿ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿದ್ದವರೆಲ್ಲ ಶ್ರೀಮಂತರೇ ಆಗಿದ್ದರು. ವ್ಯಾಕ್ಸಿನ್ ಗೆ ಹಾಹಾಕಾರ ಇದ್ದ ಹಿನ್ನೆಲೆ ಕಾಳ ಸಂತೆಯಲ್ಲಿ ವ್ಯಾಕ್ಸಿನ್ ಸಿಗುತ್ತಿತ್ತು. ವಾರದ ಹಿಂದೆ ಬುಕಿಂಗ್ ಮಾಡಿದವರೆಲ್ಲ ಕಾರಿನಲ್ಲಿ ಗುಂಪಾಗಿ ಬಂದು ವ್ಯಾಕ್ಸಿನ್ ಪಡೆದುಕೊಳ್ಳುತ್ತಿದ್ದರು.

ಹೆಸರು, ಆಧಾರ್ ನಂಬರ್ ಇಟ್ಟುಕೊಂಡು ಹೋಗಿ ಮನೆಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದರು. ಬಳಿಕ ಮರು ದಿನ ಆಸ್ಪತ್ರೆಗೆ ಹೋಗಿ ಕೋವಿನ್ ಆಯಪ್ ನಲ್ಲಿ ಎಂಟ್ರಿ ಆಗುತ್ತಿತ್ತು. ಕೋವಿನ್ ಅಪ್ ನಲ್ಲಿ ಸಹ ವಯಸ್ಸಿನ ಲೆಕ್ಕ ತಪ್ಪು ಹಾಕಿದ್ದು, 23 ವರ್ಷದವರಿಗೆ ವ್ಯಾಕ್ಸಿನೇಷನ್ ಮಾಡಿದರೂ ವಯಸ್ಸು ಎಂಟ್ರಿ ಮಾಡುವಾಗ ಮೋಸ ಮಾಡುತ್ತಿದ್ದರು.
ಇವತ್ತು ಒಂದೇ ದಿನ 53 ಜನರಿಗೆ ವ್ಯಾಕ್ಸಿನೇಷನ್ ಮಾಡಿದ್ದು, ಕೇವಲ ಒಂದು ಗಂಟೆಯಲ್ಲಿ 53 ಜನರಿಗೆ ವ್ಯಾಕ್ಸಿನೇಷನ್ ಮಾಡಿದ್ದಾರೆ. ಪೊಲೀಸರು ದಾಳಿ ಮಾಡುವ ಮುನ್ನ 53 ಜನರಿಗೆ ವ್ಯಾಕ್ಸಿನೇಷನ್ ನಡೆದಿತ್ತು. ಇಂದು ಒಟ್ಟು 80 ಜನರಿಗೆ ವ್ಯಾಕ್ಸಿನೇಷನ್ ಮಾಡುವ ನಿರೀಕ್ಷೆಯನ್ನು ಪುಷ್ಪಲತಾ ಹೊಂದಿದ್ದಳು.ಡಾಕ್ಟರ್ ಪುಷ್ಪಿತಾ ಸ್ನೇಹಿತರೂ ಕೂಡ ಇದೇ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಇನ್ನುಳಿದ ಸ್ನೇಹಿತ ಡಾಕ್ಟರ್ ಗಳು ಕೂಡ ಇದೇ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹ ಇದೇ ರೀತಿ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸರಿಯಾಗಿ ಫ್ರೀಜ್ ಮಾಡುತ್ತಿರಲಿಲ್ಲ, ಖದ್ದು ತಂದು ವ್ಯಾಕ್ಸಿನೇಷನ್ ಮಾಡುತ್ತಿದ್ದ ವ್ಯಾಕ್ಸಿನ್ ಪರಿಣಾಕಾರಿಯಲ್ಲ. ಆದರೆ ವೈದ್ಯರು ಸರಿಯಾಗಿ ಫ್ರೀಜ್ ಮಾಡುತ್ತಿರಲಿಲ್ಲ. ಟೇಬಲ್ ಮೇಲೆ ಇಟ್ಟು ವ್ಯಾಕ್ಸಿನೇಷನ್ ಮಾಡುತ್ತಿದ್ದರು. ಡಾಕ್ಟರ್ ಅರೆಸ್ಟ್ ಆದ ಬಳಿಕ ಬಿಬಿಎಂಪಿ ವೈದ್ಯರು ಪರಿಶೀಲಿಸಿದ್ದು, ಈ ಸಂದರ್ಭದಲ್ಲಿ ವ್ಯಾಕ್ಸಿನೇಷನ್ ಸರಿಯಾಗಿ ಮಾಡದಿರುವುದು ಪತ್ತೆಯಾಗಿದೆ. ಅಲ್ಲದೆ ಸಿರೀಂಜ್ ಕೂಡ ಬೇರೆಯದ್ದು ಬಳಸಿದ್ದಾರೆ. ಈ ವ್ಯಾಕ್ಸಿನೇಷನ್ ಬಗ್ಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕಳವಳ ವ್ಯಕ್ತಪಡಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ಇನ್‍ಸ್ಪೆಕ್ಟರ್ ಲೋಹಿತ್ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿದ್ದು, ಐಟಿಐ ಲೇಔಟ್ ನ ಮನೆಯೊಂದರಲ್ಲಿ ವ್ಯಾಕ್ಸಿನ್ ಹಾಕುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸರ್ ಈ ಮನೆಯಿಂದ ಜನರು ಎಡಗೈ ತೋಳು ಹಿಡ್ಕೊಂಡು ಬರುತ್ತಿದ್ದಾರೆ. ಬಹುಶಃ ವ್ಯಾಕ್ಸಿನ್ ಹಾಕುತ್ತಿರಬಹುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ವ್ಯಾಕ್ಸಿನ್ ಕ್ಯೂ ನಲ್ಲಿ ಇನ್‍ಸ್ಪೆಕ್ಟರ್ ಲೋಹಿತ್ ನಿಂತುಕೊಂಡಿದ್ದಾರೆ. ಇವರ ಸರದಿ ಬಂದಾಗ ಹೆಸರು ಹೇಳಿ ಎಂದು ಕೇಳಿದ್ದಾಳೆ. ಈ ವೇಳೆ ರಮೇಶ್ ಎಂದು ಇನ್ಸ್ ಪೆಕ್ಟರ್ ಲೋಹಿತ್ ಉತ್ತರಿಸಿದ್ದಾರೆ. ರಮೇಶ್ ಎಂಬ ಹೆಸರು ಇಲ್ಲಿ ಇಲ್ಲವಲ್ಲ ಎಂದು ವೈದ್ಯೆ ಹೇಳಿದ್ದಾಳೆ.

ಈ ವೇಳೆ ಇಲ್ಲೇ ಮೇಲಿನ ಮನೆಯಲ್ಲಿ ಇದ್ದಾರಲ್ಲ ಅವರು ಕಳುಹಿಸಿದರು ಎಂದು ಲೋಹಿತ್ ಹೇಳಿದ್ದಾರೆ. ಆಗ ಸರಿ ಆಧಾರ್ ಕಾರ್ಡ್ ಕೊಡಿ ಎಂದು ವೈದ್ಯೆ ಪುಷ್ಪಿತಾ ಕೇಳಿದ್ದಾಳೆ. ಆಧಾರ್ ತಂದಿಲ್ಲ ಇಂಜೆಕ್ಷನ್ ಗೆ ಎಷ್ಟಾಗುತ್ತೆ, ನಮ್ಮ ಮನೆಯವರಿಗೆಲ್ಲ ಹಾಕಿಸಬೇಕು ಎಂದು ಇನ್‍ಸ್ಪೆಕ್ಟರ್ ಕೇಳಿದ್ದಾರೆ. ಈ ವೇಳೆ 500 ರೂ. ಆಗುತ್ತದೆ ಎಂದು ವೈದ್ಯೆ ತಿಳಿಸಿದ್ದಾಳೆ. ಬಳಿಕ ಸಿಬ್ಬಂದಿ ಕರೆಸಿ ಡಾಕ್ಟರ್ ಮತ್ತು ಅಸಿಸ್ಟೆಂಟ್ ಇಬ್ಬರನ್ನೂ ಇನ್‍ಸ್ಪೆಕ್ಟರ್ ಅರೆಸ್ಟ್ ಮಾಡಿದ್ದಾರೆ.
ಒಬ್ಬರಿಂದ 500 ರೂ. ಪಡೆದು ವ್ಯಾಕ್ಸಿನ್ ನೀಡುತ್ತಿದ್ದರು. ಏ.23ರಿಂದ ಪ್ರತಿ ದಿನ ಸರ್ಕಾರದ ವ್ಯಾಕ್ಸಿನ್ ನಲ್ಲಿ ವೈದ್ಯೆ ಮತ್ತು ಸಿಬ್ಬಂದಿ 30 ಸಾವಿರ ಜೇಬಿಗಿಳಿಸಿಕೊಳ್ಳುತ್ತಿದ್ದರು. 25 ದಿನಗಳಿಂದ ಸರ್ಕಾರಿ ವ್ಯಾಕ್ಸಿನ್ ನ್ನು ಕದ್ದು ಡಾ.ಪುಷ್ಪಿತಾ ಮತ್ತು ಪ್ರೇಮಾ ಹಣ ಸಂಪಾದನೆ ಮಾಡಿದ್ದಾರೆ. ಈ ಮೂಲಕ ರೆಮ್‍ಡಿಸಿವಿರ್ ಕಳ್ಳದಂಧೆ ಹಾಗೂ ಬೆಡ್ ಬ್ಲಾಕಿಂಗ್ ದಂಧೆ ಬಳಿಕ ಇದೀಗ ವ್ಯಾಕ್ಸಿನ್ ದಂಧೆ ಸಹ ತಲೆ ಎತ್ತಿರುವುದು ಪತ್ತೆಯಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ