Breaking News

ಹಿಂಡಲಗಾ ಜೈಲಿಗೆ ಮುತ್ತಿಗೆ ಹಾಕಿದ ರೈತರು

Spread the love

ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಿಂಡಲಗಾ ಬಳಿ ಬಿಗುವುನ ವಾತಾವಾರಣ ನಿರ್ಮಾಣವಾಗಿದೆ.

ಕಬ್ಬು ಬೆಳೆಗೆ ಸೂಕ್ತ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಹಾಗೂ ಕಾರ್ಖಾನೆಗಳಿಗೆ ನೀಡಿದ್ದ ಗಡುವು ಮುಗಿದಿದೆ. ಇದರಿಂದ ಆಕ್ರೋಶಗೊಂಡಿರುವ ರೈತರು, ಗುರ್ಲಾಪುರಿಂದ ಹಿಂಡಲಗಾ ಜೈಲು ಬಾರೋ ಚಳವಳಿ ಆರಂಭಿಸಿದ್ದಾರೆ.

ಇದರ ಮಧ್ಯೆ ಸಮೀಪ ಗ್ರಾಮದ ರೈತರು ಹಿಂಡಲಗಾ ಜೈಲಿಗೆ ಮುತ್ತಿಗೆ ಹಾಕಿದ್ದಾರೆ. ರೈತರನ್ನ ತಡೆಯಲು ಪೊಲೀಸರು ಯತ್ನಿಸಿದ್ದು, ಈ ವೇಳೆ ರೈತರು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಹಿಂಡಲಗಾ ಜೈಲಿನ ಬಳಿ ಹೈಡ್ರಾಮಾ ನಡೆದಿದೆ. ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.


Spread the love

About Laxminews 24x7

Check Also

ವಾಟರ್ ಹೀಟರ್ ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ದುರ್ಮರಣ

Spread the loveಚಿಕ್ಕಮಗಳೂರು: ವಾಟರ್ ಹೀಟರ್  ಹಾಕಿದ್ದ ಬಕೆಟ್ ಮುಟ್ಟಿ ಬಾಲಕ ಸಾವನ್ನಪ್ಪಿದ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ  ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ