Breaking News

ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್: ಅಗತ್ಯ ವಸ್ತು, ಸೇವೆಗಳಿಗೆ ಮಾತ್ರ ಅವಕಾಶ

Spread the love

ಬೆಂಗಳೂರು: ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್ ಜಾರಿ ಮಾಡಲಾಗಿದೆ. ಮೇ 4 ರವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದ ಸರ್ಕಾರ ಜನತೆಗೆ ದಿಢೀರ್ ಶಾಕ್ ನೀಡಿದೆ. ಅಗತ್ಯ ವಸ್ತು, ಸೇವೆಗಳಿಗೆ ಮಾತ್ರ ಅವಕಾಶ ನೀಡಿದೆ. ಮೇ 4 ರ ವರೆಗೆ ವಾಣಿಜ್ಯ ಮಳಿಗೆ, ಅಂಗಡಿ ಮುಂಗಟ್ಟು ಬಂದ್ ಆಗಲಿವೆ.

ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮಾತ್ರ ಅಂಗಡಿ ಬಂದ್ ಮಾಡಬೇಕು ಎಂದುಕೊಂಡಿದ್ದವರಿಗೆ ಶಾಕ್ ನೀಡಿದೆ. ಅಗತ್ಯ ವಸ್ತುಗಳ ಹೊರತಾಗಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ತಿಳಿಸಿ ಅಘೋಷಿತ ಲಾಕ್ಡೌನ್ ಜಾರಿ ಮಾಡಲಾಗಿದೆ.

ಸೆಕ್ಷನ್ 144 ನಿರ್ಬಂಧ ಇದ್ದರೂ ಜನ ಗುಂಪು ಸೇರುವುದನ್ನು ನಿಯಂತ್ರಿಸಲು ಕ್ರಮಕೈಗೊಳ್ಳಲಾಗಿದೆ. ಅಗತ್ಯ ವಸ್ತು, ಸೇವೆ ಹೊರತಾದ ಅಂಗಡಿ ಬಂದ್ ಮಾಡಲು ತಿಳಿಸಿದ್ದು ನೈಟ್ ಕರ್ಫ್ಯೂ, ವೀಕೆಂಡ್ ಲಾಕ್ ಡೌನ್ ಜೊತೆಯಲ್ಲೇ ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಹೃದಯಾಘಾತ ಪ್ರಕರಣಗಳಿಗೂ ಕೋವಿಡ್ ಲಸಿಕೆಗೂ ಯಾವುದೇ ಸಂಬಂಧವಿಲ್ಲ: ರಾಜ್ಯ ಸರ್ಕಾರಕ್ಕೆ ತಜ್ಞರ ಸಮಿತಿಯ ವರದಿ ಸಲ್ಲಿಕೆ

Spread the loveಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಯುವಕರು ಸೇರಿದಂತೆ ವಿವಿಧ ವಯೋಮಾನದವರ ಹಠಾತ್ ಹೃದಯಾಘಾತ ಸಾವಿನ ಪ್ರಕರಣಗಳಿಗೂ ಮತ್ತು ಕೋವಿಡ್ ಲಸಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ