Breaking News
Home / ಜಿಲ್ಲೆ / ಬೆಂಗಳೂರು / ಆನ್‍ಲೈನ್ ಮೂಲಕ ಮಾವು ಮಾರಾಟ

ಆನ್‍ಲೈನ್ ಮೂಲಕ ಮಾವು ಮಾರಾಟ

Spread the love

ಬೆಂಗಳೂರು, – ಮಾವು ಬೆಳೆಗಾರರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಗ್ರಾಹಕರಿಗೆ ಬೆಳೆಗಾರರಿಂದ ನೇರವಾಗಿ ತಾಜ ಮತ್ತು ಸ್ವಾದಿಷ್ಟ ಮಾವಿನ ಹಣ್ಣುಗಳನ್ನು ಆನ್‍ಲೈನ್‍ನಲ್ಲಿ ಖರೀದಿಸುವ ವ್ಯವಸ್ಥೆ ಕಲ್ಪಿಸಿದೆ ಎಂದು ಮಾವು ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ರ 2ನೆ ಅಲೆ ಹೆಚ್ಚುತ್ತಿರುವುದರಿಂದ ಹಿಂದಿನಂತೆ ಕಾರ್ಸಿರಿ ಮ್ಯಾಂಗೋಸ್ ಎಂಬ ಆನ್‍ಲೈನ್ ಪೋರ್ಟಲ್ (https://karsirimangoes.karnataka.gov.in) ಮೂಲಕ ಮಾವು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಾವು ಪ್ರಿಯರು ಇನ್ನು ಮುಂದೆ ಮನೆಯಲ್ಲೇ ಕುಳಿತು ಆನ್‍ಲೈನ್‍ನಿಂದ ತಮಗೆ ಬೇಕಾದ ಗುಣಮಟ್ಟದ ಮಾವಿನ ಹಣ್ಣನ್ನು ಖರೀದಿಸಬಹುದು ಎಂದರು.

ಕಳೆದ ವರ್ಷದಿಂದ ರೈತರಿಗೆ ತರಬೇತಿ ನೀಡಲಾಗುತ್ತಿದ್ದು, ಉತ್ತಮ ಮಾರುಕಟ್ಟೆ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಬಾರಿ 17 ಜಿಲ್ಲಾಗಳಿಂದ 14 ಲಕ್ಷ ಟನ್ ಮಾವು ನಿರೀಕ್ಷೆಯಿತ್ತು. ಫೆಬ್ರವರಿ ತಿಂಗಳಿನ ಅಕಾಲಿಕ ಮಳೆಯಿಂದ ಕೇವಲ 9 ರಿಂದ 10 ಟನ್ ಮಾವು ಬೆಳೆದಿದ್ದೇವೆ ಎಂದು ಮಾಹಿತಿ ನೀಡಿದರು. ಕಳೆದ ಬಾರಿ ಪೋರ್ಟಲ್ ಮೂಲಕ 100 ಟನ್ ಮಾವನ್ನು ಮಾರಾಟ ಮಾಡಲಾಗಿತ್ತು. ಪೋರ್ಟಲ್ ಮೂಲಕ ಪಡೆದ ಆಡರ್ರ್‍ಗಳನ್ನು ಅಂಚೆ ಕಚೇರಿ ಮುಖಾಂತರ ವಿತರಿಸಲಾಗಿದೆ.

https://forms.gle/FAdsZwhKm nQbUWiE7 ಇ ಲಿಂಕ್ ಮೂಲಕ ಹೆಚ್ಚಾಗಿ ಅಪಾರ್ಟ್‍ಮೆಂಟ್ ವಾಸಿಗಳು ಮಾವಿನ ಹಣ್ಣಿನ ಬೇಡಿಕೆ ಸಲ್ಲಿಸುತ್ತಿದ್ದರು. ಬೇಡಿಕೆಯನ್ನು ರೈತರಿಗೆ ವರ್ಗಾಯಿಸಿ ರೈತರು ಮತ್ತು ಅಪಾರ್ಟ್‍ಮೆಂಟ್‍ರವರಿಗೆ ಸಂಪರ್ಕ ಕಲ್ಪಿಸಲಾಗುತ್ತಿತ್ತು. ಕಳೆದ ಬಾರಿ 600 ಟನ್ ಮಾವಿನ ಹಣ್ಣನ್ನು ಮಾರಾಟ ಮಾಡಲಾಗಿದೆ. ಈ ಬಾರಿ 1 ಸಾವಿರ ಟನ್ ಮಾವಿನ ಹಣ್ಣಿನ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ.

ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ. ಫೌಜಿಯಾ ತರನುಮ್ ಮಾತನಾಡಿ, ಈಗಾಗಲೇ ಪೋರ್ಟಲ್ ನಲ್ಲಿ 12ಲಕ್ಷ ಮಂದಿ ವೀಕ್ಷಣೆ ಮಾಡಿ ಆರ್ಡರ್ ಮಾಡಿದ್ದಾರೆ. ಮಂಗಳವಾರ ಮತ್ತು ಶುಕ್ರವಾರ ವಿತರಣೆ ಮಾಡಲಾಗುವುದು. ಇಲಾಖೆ ವತಿಯಿಂದ ಉತ್ತಮ ಗುಣಮಟ್ಟದ ಮಾವನ್ನು ಕೋವಿಡ್ ನಿಯಮದೊಂದಿಗೆ ಒದಗಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 6366783 105ಗೆ ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಉಪ ನಿರ್ದೇಶಕ ಗುಣವಂತ, ಅಪರ ನಿರ್ದೇಶಕರು(ನಿವೃತ್ತ) ಹಾಗೂ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಎಸ್.ವಿ. ಹಿತ್ತಲಮನಿ ಮತ್ತಿತರರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ