Breaking News

ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ :ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Spread the love

ಕಲಬುರಗಿ : ಸಿಡಿ ಪ್ರಕರಣದ ಬಗ್ಗೆ ಏನು ಮಾತಾಡಬೇಕೋ ಅದನ್ನು ವಿಧಾನಸಭೆಯಲ್ಲೇ ಮಾತನಾಡಿದ್ದೇನೆ. ನಾನು ಈಗ ಚುನಾವಣೆ‌ಗೋಸ್ಕರ ಬಂದಿದ್ದೇನೆ. ಅದರ ಬಗ್ಗೆ ಮಾತನಾಡಲ್ಲ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಬಿಜೆಪಿ ಸಂಸ್ಕೃತಿ ಸೇರಿದಂತೆ ಎಲ್ಲರ ಸಂಸ್ಕೃತಿಯನ್ನ ಜನ ಗಮನಿಸುತ್ತಿದ್ದಾರೆ. ಯುವತಿ ಪೋಷಕರಿಂದ ನನ್ನ ವಿರುದ್ಧ ಆರೋಪ ಮಾಡಿಸಲಾಗುತ್ತಿದೆ.

ಅವರ ಸರ್ಕಾರ ಅವರ ಅನುಕೂಲಕ್ಕೆ ತಕ್ಕಂತೆ ಹೇಳಿಕೆ‌ ನೀಡಿಸುತ್ತಿರಬಹುದು. ಅವರು ಏನಾದರೂ ಹೇಳಿಕೆ ಕೊಡಲಿ, ನಾನು ತಲೆ ಕೆಡಿಸಿಕೊಳ್ಳಲ್ಲ. ದಯವಿಟ್ಟು ಸಿಡಿ ಬಗ್ಗೆ ಮಾತನಾಡಬೇಡಿ ಎಂದು ಮನವಿ ಮಾಡಿದರು. ಸದನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಪ್ರಸ್ತಾಪ ಮಾಡಿದ್ದೆವು. ಈ ಭಾಗಕ್ಕೆ ಸಿಗಬೇಕಾದ ಹಣ, ಅನುದಾನ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾತಾನಾಡಿದ್ದೆವು. ಆದರೆ, ಸರ್ಕಾರ ಅದಕ್ಕೆ ಸೊಪ್ಪು ಹಾಕಲಿಲ್ಲ ಎಂದರು.

ಬೆಳಗಾವಿಯಲ್ಲಿ ನಡೆದ ದಾಳಿ ಬಗ್ಗೆ ಮಾತನಾಡಿದ ಅವರು, ನಾವು ರಾಜಕೀಯದಲ್ಲಿರೋರು. ಇದೆಲ್ಲ ಸಾಮಾನ್ಯ ವಿಷಯ. ಯಾರು ಆತಂಕ ಪಡುವ ಅಗತ್ಯವಿಲ್ಲ. ಜನರು ಶಾಂತಿಯಿಂದ ಇರಬೇಕು. ರಾಜಕೀಯದಲ್ಲಿ ಎಲ್ಲವನ್ನು ಸ್ವೀಕರಿಸಬೇಕು ಎಂದರು. ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು‌ ಸಾಧಿಸಲಿದೆ. ಬಿಜೆಪಿ ವೈಫಲ್ಯಗಳಿಂದ ಗೆಲವು ಸುಲಭವಾಗಲಿದೆ. ರಾಜ್ಯ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ವಿಫಲವಾಗಿದೆ. ಜನರೇ ಬೀದಿಗಿಳಿದು ಹೋರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.


Spread the love

About Laxminews 24x7

Check Also

ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Spread the love ಕಲಬುರಗಿ: ರಾಜ್ಯ ಸರಕಾರ ಪೆಟ್ರೋಲ್, ಡಿಸೆಲ್ ದರ ಏರಿಕೆ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ