Breaking News
Home / ಜಿಲ್ಲೆ / ಬೆಂಗಳೂರು / ಉಸ್ತುವಾರಿ ಸಚಿವರನ್ನು ಬದಲಿಸಿ ಸಿಎಂ ಆದೇಶ, ಇಲ್ಲಿದೆ ಡೀಟೇಲ್ಸ್

ಉಸ್ತುವಾರಿ ಸಚಿವರನ್ನು ಬದಲಿಸಿ ಸಿಎಂ ಆದೇಶ, ಇಲ್ಲಿದೆ ಡೀಟೇಲ್ಸ್

Spread the love

ಬೆಂಗಳೂರು,ಮಾ.30-ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಉಸ್ತುವಾರಿ ಸಚಿವರ ಜಿಲ್ಲೆಗಳನ್ನು ಬದಲಾಯಿಸಿ ಅಸೂಚನೆ ಹೊರಡಿಸಲಿದ್ದಾರೆ. ಇದೇ ಮೊದಲ ಬಾರಿಗೆ ತವರು ಜಿಲ್ಲೆಯನ್ನು ಹೊರತುಪಡಿಸಿ ಜಿಲ್ಲೆಗಳಿಗೆ ಬೇರೊಬ್ಬ ಸಚಿವರಿಗೆ ಉಸ್ತುವಾರಿ ವಹಿಸಲು ಚಿಂತನೆ ನಡೆದಿದೆ.

ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಸಚಿವರು ಹಳೇಮೈಸೂರು ಭಾಗದ ಉಸ್ತುವಾರಿಯಾಗಿ ನೇಮಕ ಮಾಡಲಿದ್ದಾರೆ.ಹಳೆ ಮೈಸೂರು ಭಾಗದ ಸಚಿವರನ್ನು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಭಾಗಕ್ಕೆ, ಕರಾವಳಿ ಭಾಗದ ಸಚಿವರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಇದೇ ಭಾಗದ ಸಚಿವರನ್ನು ಮಧ್ಯ ಕರ್ನಾಟಕ ಜಿಲ್ಲೆಗಳಾದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರಿಗೆ ನೇಮಿಸಲಾಗುವುದು.ಸಚಿವರಾಗಿ ಅಕಾರ ಸ್ವೀಕರಿಸಿದ ಬಳಿಕ ಇಲಾಖೆಯಲ್ಲಿ ಕೆಲವು ಅಮೂಲಾಗ್ರ ಬದಲಾವಣೆ ಮಾಡುತ್ತಿರುವ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿಗೆ ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕವಾಗಲಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರು ಸೇರಿದಂತೆ ಯಾವುದೇ ಜಿಲ್ಲೆಯ ಹೊಣೆಗಾರಿಕೆ ನೀಡಿದರೂ ನಾನು ನಿರ್ವಹಿಸಲು ಸಿದ್ದನಿದ್ದೇನೆ. ನನಗೆ ಇಂತಹದ್ದೇ ಜಿಲ್ಲೆ ನೀಡಿ ಎಂದು ಕೇಳುವುದಿಲ್ಲ. ಸಂಪುಟಕ್ಕೆ ತೆಗೆದುಕೊಳ್ಳುವಾಗಲೂ ನಿಮ್ಮ ನಿರ್ಧಾರಕ್ಕೆ ಬದ್ದನಾಗಿದ್ದೆ. ನಂತರ ಯಾವುದೇ ಖಾತೆಯನ್ನೂ ಕೊಟ್ಟರೆ ಎಂದು ನಿಭಾಯಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಕೊಟ್ಟ ನಂತರ ನಾನು ಮರು ಮಾತನಾಡದೆ ವಹಿಸಿಕೊಂಡಿದ್ದೇನೆ. ಈ ಇಲಾಖೆಯನ್ನು ಜನಪರವಾಗಿ ಕೊಂಡೊಯ್ಯಲು ಅನೇಕ ಸುಧಾರಣೆಗಳನ್ನು ಜಾರಿ ಮಾಡಿದ್ದೇವೆ. ಯಾವುದೇ ಜಿಲ್ಲೆ ಉಸ್ತುವಾರಿ ನೀಡಿದರೂ ಕೆಲಸ ಮಾಡುವ ಭರವಸೆಯನ್ನು ನಿರಾಣಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

ನನ್ನ ಮೇಲೆ ವಿಶ್ವಾಸವಿಟ್ಟು ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಿದರೂ ನನ್ನದೇನೂ ಅಭ್ಯಂತರವಿಲ್ಲ. ಮುಖ್ಯಮಂತ್ರಿ ತೀರ್ಮಾನಕ್ಕೆ ನಾನು ಬದ್ದ ಎಂದು ನಿರಾಣಿ ಹೇಳಿರುವುದಾಗಿ ತಿಳಿದುಬಂದಿದೆ. ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜೆ.ಸಿ.ಮಾಧುಸ್ವಾಮಿ ಅವರಿಗೆ ಬೇರೊಂದು ಜಿಲ್ಲೆಯ ಹೊಣೆಗಾರಿಕೆ ನೀಡಿ ಈ ಜಿಲ್ಲೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ನೀಡಬಹುದು ಎಂದು ತಿಳಿದುಬಂದಿದೆ.

ನಗರಾಭಿವೃದ್ದಿ ಸಚಿವ ಭೈರತಿ ಬಸವರಾಜ್‍ಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಇದು ಕೂಡ ಬದಲಾಗುವ ಸಂಭವವಿದ್ದು, ಏಪ್ರಿಲ್ ತಿಂಗಳಲ್ಲಿ ಇನ್ನಷ್ಟು ಬದಲಾವಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಆಡಳಿತ ಸುಧಾರಣೆ ಹಾದಿಯಲ್ಲಿದ್ದು ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ. ಇನ್ನೂ ಒಂದೆರಡು ದಿನಗಳಲ್ಲಿ ಈ ಪಟ್ಟಿಯು ಹೊರಬರಲಿದೆ.

ಬೇರೆ ಜಿಲ್ಲೆಗಳಿಂದ ಬಂದ ಮಂತ್ರಿಗಳು ವಸ್ತುನಿಷ್ಠವಾಗಿ ಕೆಲಸ ಮಾಡಲು ಸಾಧ್ಯವಾಗಬಹುದು, ಸ್ಥಳೀಯ ಶಾಸಕರು, ಮಂತ್ರಿಗಳು ಸ್ಥಳೀಯ ಅಕಾರಿಗಳ ಪಡೆಗಳ ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರಲ್ಲಿರುವ ಆಲೋಚನೆಯಾಗಿದ್ದು ಇದು ಜಿಲ್ಲೆಯ ಅಭಿವೃದ್ಧಿಗೆ ಹಾನಿಕಾರಕವಾಗಿದೆ ಎಂದು ಅವರು ಭಾವಿಸಿದ್ದಾರೆ.

ಉಪಚುನಾವಣೆಯ ನಂತರ ಜಿಲ್ಲಾ ಉಸ್ತುವಾರಿಗಳ ಬದಲಾವಣೆ ಆಗಬಹುದು ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.ಜಿಲ್ಲೆಯ ಹೊರಗಿನ ಮಂತ್ರಿಗಳು ನ್ಯಾಯ ಒದಗಿಸಲು ಮತ್ತು ಎಲ್ಲಾ ಶಾಸಕರನ್ನು ಒಟ್ತಾಗಿ ಕರೆದೊಯ್ಯಲು , ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಾಗಬಹುದು,ತುಮಕೂರಿನಲ್ಲಿ ಲೋಕಸಭಾ ಸಂಸದ ಜಿ.ಎಸ್. ಬಸವರಾಜು ಅವರು ಪಕ್ಷದೊಳಗೆ ‘ಅಜತಾಶತ್ರು’ ಪಾತ್ರವನ್ನು ವಹಿಸಲು ಸಾಧ್ಯವಾಗಲಿಲ್ಲ ಮತ್ತು ಎಲ್ಲರನ್ನು ಒಟ್ತಾಗಿ ಸೇರಿಸಿಕೊಂಡು ಕೆಲಸ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಬಿಜೆಪಿ ಶಾಸಕರು ವಿಶ್ವಾಸ ತೋರಿದರೂ ವೈಫಲ್ಯವು ಪಕ್ಷಕ್ಕೆ ಹಾನಿಕಾರಕವಾಗಿದೆ ಎಂದು ಒಬ್ಬ ನಾಯಕ ಹೇಳೀದ್ದಾರೆ.

ಹಾಲಿ ಜಿಲ್ಲಾ ಸಚಿವ ಜೆ ಸಿ ಮಾಧುಸ್ವಾಮಿ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ವಿಫಲವಾಗಿದ್ದಾರೆ.ಅವರು ತಮ್ಮ ಕ್ಷೇತ್ರಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡಿದ್ದಾರೆ ಮತ್ತು ಕುತೂಹಲಕಾರಿಯಾಗಿ, ಕೇಂದ್ರದ ‘ಅಟಲ್ ಭುಜಲ್ ಯೋಜನೆ’ನೆಯನ್ನು ತಮ್ಮ ಚಿಕ್ಕನಾಯಕನಳ್ಳಿಯ ಜೆ.ಸಿ. ಪುರ ಗ್ರಾಮವ್ಯಾಪ್ತಿಗಷ್ಟೇ ಜಾರಿಗೆ ತಂದರು.ಇದು ಅವರ ಪಕ್ಷಪಾತವನ್ನು ತೋರಿಸುತ್ತದೆ. ಜಿಲ್ಲೆಯ ಹೊರಗಿನ ಸಚಿವರನ್ನು ನೇಮಿಸುವುದು ಪಕ್ಷಕ್ಕೆ ಮಾತ್ರವಲ್ಲದೆ ಜಿಲ್ಲೆಯ ಅಭಿವೃದ್ಧಿಯಲ್ಲಿ ಪಕ್ಷಪಾತವಿಲ್ಲದ ನಿರ್ಧಾರ ತೆಗೆದುಕೊಳ್ಲಲು ಅನುಕೂಲ ಎಂದು ಓರ್ವ ನಾಯಕರು ಹೇಲೀದ್ದಾರೆ.

ವಸತಿ ಸಚಿವ ವಿ ಸೋಮಣ್ಣ ಈ ಜವಾಬ್ದಾರಿಯುತ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ.ಆದರೆ ಬಿಜೆಪಿಯ ಜಿ ಎಸ್ ಬಸವರಾಜು ಬಣದೊಂದಿಗೆ ಗುರುತಿಸಿಕೊಂಡಿದ್ದರೂ ಅವರು ಉದ್ದೇಶವನ್ನು ಪೂರೈಸದಿರಬಹುದು. 2008-10ರಲ್ಲಿ ತುಮಕುರು ಜಿಲ್ಲಾ ಉಸ್ತುವಾರಿ ವಹಿಸಿದ್ದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಉತ್ತಮ ಕೆಲಸ ಮಾಡಿ ಜನಪ್ರಿಯವಾಗಿದ್ದರು.ಅವರನ್ನೇ ಮತ್ತೆ ಉಸ್ತುವಾರಿಯಾಗಿ ಮಾಡಬಹುದು.

ಅವರನ್ನು ಇದ್ದಕ್ಕಿದ್ದಂತೆ ತೆಗೆದುಹಾಕಿದಾಗ, ಅವರ ಉತ್ತರಾಧಿಕಾರಿ ಸೋಮಣ್ಣ, ಸುರೇಶ್ ಕುಮಾರ್ ಉತ್ತಮ ಕೆಲಸ ಮಾಡಿದ್ದರಿಂದ ಸೋಮಣ್ಣ ವಿರುದ್ಧ ಅಸಮಾಧಾನ ಹೊಂದಿದ್ದರು.ತುಮಕುರು ನಗರ ಪುರಸಭೆಯನ್ನು ಸಿಟಿ ಕಾರ್ಪೊರೇಷನ್ ಸ್ಥಾನಮಾನಕ್ಕೆ ಏರಿಸಲಾಯಿತು.

ಡಿ.ಸಿ.ಎಂ ಗೋವಿಂದ ಕಾರಜೋಳ ಮತ್ತು ಬಿಜೆಪಿ ನಾಯಕ ಸಿ ಟಿ ರವಿ ಅವರು ಸುರೇಶ್ ಕುಮಾರ್ ಅವರು ಬಾಗಲಕೋಟೆ ಅಥವಾ ಚಿಕ್ಕಮಗಳೂರು ಉಸ್ತುವಾರಿ ವಹಿಸಿಕೊಳ್ಳುತ್ತಾರೆಂದು ನಿರೀಕ್ಷಿಸುತ್ತಾರೆ, ಆದರೆ ಅವರು ಸ್ವತಃ ಹಿಂದುಳಿದ ಚಾಮರಾಜನಗರ ಜಿಲ್ಲೆಯ ಜವಾಬ್ದಾರಿಯೊಂದಿಗೆ ಇರಬಯಸಿದ್ದಾರೆ ಎನ್ನಲಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ