Breaking News

ಸಿಡಿ ಪ್ರಕರಣ ಸಿಬಿಐ ತನಿಖೆ ಆಗಬೇಕಿತ್ತು : ಯತ್ನಾಳ್

Spread the love

ವಿಜಯಪುರ : ಜಾರಕಿಹೊಳಿ ಸಿಡಿ ಹಗರಣವನ್ನು ಎಸ್ ಐ ಟಿ ಬದಲಾಗಿ ಸಿಬಿಐ ತನಿಖೆಗೆ ವಹಿಸಬೇಕತ್ತು. ಸಿಬಿಐ ಸಂಸ್ಥೆ ಮೂಲಕ ತನಿಖೆ ನಡೆಸಿದ್ದರೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಲಾಗುತ್ತಿರಲಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂತ್ರಿಗಳಾಗಲು ಕೆಲವರು ಸಿನಿಮಾ ತಾರೆಯರನ್ನು ದೆಹಲಿಗೆ ಕರೆದೊಯ್ದಿದ್ದರು. ಅಂಥವರೆಲ್ಲ ಈಗ ಸಚಿವರಾಗಿದ್ದಾರೆ‌. ಹೀಗಾಗಿ ಇಡೀ ಸಿಡಿ ಹಗರಣದ ಸಮಗ್ರ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರು.

ಅಧಿಕಾರಕ್ಕಾಗಿ ಇಂಥ ಸಿಡಿ ತಯಾರಿಸಿ ಬ್ಲ್ಯಾಕ್ ಮೇಲ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ. ಬಿಜೆಪಿ ಪಕ್ಷದಲ್ಲೂ ಅದೀಗ ಮುಂದುವರೆದಿದೆ. ಜೈಲು ಸೇರಿರುವ ಯುವರಾಜ ಕೂಡ ಇಂಥದ್ದೇ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಆತ ಸದಾ ಮುಖ್ಯಮಂತ್ರಿ ಮನೆಯಲ್ಲಿ ಇರುತ್ತಿದ್ದ ಎಂದು ಕುಟುಕಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ