Breaking News
Home / Uncategorized / ಕೋವಿಡ್ ಲಸಿಕೆ ಉಚಿತವಾಗಿ ವಿತರಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

ಕೋವಿಡ್ ಲಸಿಕೆ ಉಚಿತವಾಗಿ ವಿತರಿಸಿ: ಪ್ರಧಾನಿಗೆ ಸಿದ್ದರಾಮಯ್ಯ ಪತ್ರ

Spread the love

ಬೆಂಗಳೂರು: ‘ಕೋವಿಡ್ ಲಸಿಕೆ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಬೇಕು’ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ದೇಶದಾದ್ಯಂತ ಕೋವಿಡ್‌ ಲಸಿಕೆ ಅಭಿಯಾನ ಆರಂಭವಾಗಿದೆ. ಆದರೆ ಜನಸಾಮಾನ್ಯರಿಗೆ ವಾಕ್ಸಿನ್ ದರ ನಿಗದಿ ಮಾಡಲಾಗಿದೆ. ವ್ಯಾಕ್ಸಿನ್‌ಗೆ ಹಣ ಪಡೆಯದೆ ಉಚಿತವಾಗಿ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

‘ಕೋವಿಡ್‌ನಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಲಸಿಕೆ ನಿರೀಕ್ಷೆ ಹುಟ್ಟಿಸಿದೆ. ಆದರೆ, ಲಸಿಕೆ ವಿತರಣೆ ಅಭಿಯಾನ ನಿಧಾನಗತಿಯಲ್ಲಿ ಸಾಗುತ್ತಿದೆ. ಈವರೆಗೆ ದೇಶದ ಜನಸಂಖ್ಯೆಯ ಒಟ್ಟು ಶೇ.0.5 ರಷ್ಟು ಮಂದಿಗೆ ಮಾತ್ರ ಲಿಸಿಕೆ ಸಿಕ್ಕಿದೆ’ ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಇಸ್ರೇಲ್ ಶೇ 36, ಅಮೆರಿಕ ಶೇ 6, ಇಂಗ್ಲೆಂಡ್‌ ಶೇ 4ರಷ್ಟು ಜನಸಂಖ್ಯೆಗೆ ಕೋವಿಡ್ ಲಸಿಕೆ ವಿತರಿಸಿದೆ. ಬ್ರೆಜಿಲ್, ಕೆನಡಾ, ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ದೇಶಗಳು ಉಚಿತವಾಗಿ ಲಸಿಕೆಯನ್ನು ಜನರಿಗೆ ನೀಡಿವೆ. ಆದರೆ, ಭಾರತದಲ್ಲಿ ಜನಸಾಮಾನ್ಯರಿಗೆ ₹ 250 ದರ ವಸೂಲಿ ಮಾಡಲು ಅನುಮತಿ ನೀಡಿದೆ. ಈ ಬಗ್ಗೆ ಪ್ರಧಾನಿ ಸೂಕ್ತ ಕ್ರಮ ಕೈಗೊಂಡು ಲಸಿಕೆ ಉಚಿತವಾಗಿ ಜನಸಾಮಾನ್ಯರಿಗೆ ದೊರಕುವಂತೆ ಮಾಡಬೇಕು. ಪಿಎಂ ಕೇರ್ಸ್‌ ನಿಧಿಯನ್ನು ಲಸಿಕೆಗೆ ಬಳಕೆ ಮಾಡಿ’ ಎಂದೂ ಅವರು ಹೇಳಿದ್ದಾರೆ.


Spread the love

About Laxminews 24x7

Check Also

ನೀರಿಲ್ಲದಿದ್ದರೇನು..? ಬಿಯರ್ ಇದೆಯಲ್ಲ.. : ಬೆಂಗಳೂರಲ್ಲಿ ಬಿಯರ್‌ಗೆ ಫುಲ್ ಡಿಮ್ಯಾಂಡ್!

Spread the loveಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ಹೆಚ್ಚಾಗುತ್ತಿದ್ದು, ಬಿಯರ್‌ಗೂ ಬೇಡಿಕೆ ಹೆಚ್ಚಾಗಿದೆ. ಮದ್ಯಪ್ರಿಯರು ಹಾಟ್​ ಡ್ರಿಂಕ್ಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ