Home / ಜಿಲ್ಲೆ / ಬೆಳಗಾವಿ / ಶೇ. 50 ಖಾಸಗಿ ಆಸ್ಪತ್ರೆಯ ಬೆಡ್ ಗಳು ಕೊರೊನಾ ಸೋಂಕಿತರಿಗೆ ಮೀಸಲಿಡಬೇಕು: ಸತೀಶ ಜಾರಕಿಹೊಳಿ

ಶೇ. 50 ಖಾಸಗಿ ಆಸ್ಪತ್ರೆಯ ಬೆಡ್ ಗಳು ಕೊರೊನಾ ಸೋಂಕಿತರಿಗೆ ಮೀಸಲಿಡಬೇಕು: ಸತೀಶ ಜಾರಕಿಹೊಳಿ

Spread the love

ಗೋಕಾಕ:  ಶೇ. 50 ಖಾಸಗಿ ಆಸ್ಪತ್ರೆಯ ಬೆಡ್ ಗಳು ಕೊರೊನಾ ಸೋಂಕಿತರಿಗೆ ಮೀಸಲಿಡಬೇಕು ಎಂಬ ಸರ್ಕಾರದ  ನಿಯಮದಿಂದ ಹಿಂದೆ  ಸರಿಯಬೇಕು.  ಬೇಕಿದ್ದರೆ  ಸರ್ಕಾರಿ ಆಸ್ಪತ್ರೆಗಳಿಗೆ   ಖಾಸಗಿ ವೈದ್ಯರನ್ನು ಕರೆಸಿಕೊಂಡು ಸೇವೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಲಹೆ ನೀಡಿದ್ದಾರೆ.

ನಿನ್ನೆಯಷ್ಟೇ ಕೋವಿಡ್ ನಿರ್ವಹಣೆ ವಿಚಾರವಾಗಿ  ಸತೀಶ ಜಾರಕಿಹೊಳಿ ಅವರು  ಸರ್ಕಾರಕ್ಕೆ  ಕೆಲವು ಸಲಹೆಗಳನ್ನು ನೀಡಿದ್ದರು. ಅದೇ ವಿಚಾರವಾಗಿ ಸೋಮವಾರ ಗೋಕಾಕ ನಗರದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದರು. 

ಒಬ್ಬ ವ್ಯಕ್ತಿಗೆ ಕೊರೊನಾ ಸೋಂಕು ಬಂದ್ರೆ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡಲಾಗುತ್ತಿದೆ. ಅಂತಹದರಲ್ಲಿ ಒಂದೇ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಹಾಗೂ ಜನರಲ್ ಪೆಸೆಂಟ್ ಗಳನ್ನು ಹೇಗೆ ಇರುಸುತ್ತಿರಿ ಎಂದು ಪ್ರಶ್ನಿಸಿದರು. ಇದು ವೈಜ್ಞಾನಿಕವಾಗಿ ಸರಿಯಾದ ಕ್ರಮವಲ್ಲ.

ಕೋವಿಡ್ ಸೋಂಕಿತ ಎಂದ್ರೆ ಆತ ಬಹಳ ದೊಡ್ಡ ರೋಗಿ ಎಂಬ ಭಯದ ವಾತಾವರಣವನ್ನು ಜನರಲ್ಲಿ ಮೂಡಿಸಲಾಗಿದೆ. ಹೀಗಾಗಿ ಒಂದೇ ಆಸ್ಪತ್ರೆಯಲ್ಲಿ ಜನರಲ್ ರೋಗಿಗಳ ಇರಲು ಹೆದರುತ್ತಾರೆ.   ತಾಲೂಕು ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿಯೂ ಕೋವಿಡ್ ಸೆಂಟರ್ ಆರಂಭಿಸಿ ಬೇಕಿದ್ದರೆ ಖಾಸಗಿ ವೈದ್ಯರು ಅಲ್ಲಿಗೆ ಬಂದು ಕರ್ತವ್ಯ ನಿರ್ವಹಿಸಲು ಸಿದ್ದರಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರವೂ ಖಾಸಗಿ ಆಸ್ಪತ್ರೆಗಳಿಗೆ ನೀಡಿರುವ ಆದೇಶವೂ ಸರಿಯಾಗಿ ಇಲ್ಲಾ ಎಂದು ಕೆ ಪಿ ಸಿ ಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ಹೇಳಿಕೆ ನೀಡಿದರು.

Laxmi News 24×7 यांनी वर पोस्ट केले सोमवार, २० जुलै, २०२०

ರಾಜ್ಯದ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಮಾತ್ರ ಕೋವಿಡ್ ಸೆಂಟರ್ ಇದೆ. ಇಡೀ ಜಿಲ್ಲೆಯ ಜವಾಬ್ದಾರಿಯನ್ನು ಒಂದು ಆಸ್ಪತ್ರೆ ಮೇಲೆ ಹೇರಲು ಆಗದು.  ಸರ್ಕಾರಿ ವೈದ್ಯರೇ ಕರ್ತವ್ಯ ನಿರ್ವಹಿಸುವುದು ಕಷ್ಟ. ಇದರಿಂದ ಸಾವಿನ ಸಂಖ್ಯೆ ಹೆಚ್ಚುತಲಿದೆ. ಆ ಯಾ ತಾಲೂಕು, ಗ್ರಾಮೀಣ ಭಾಗದ  ಅಧಿಕಾರಿಗಳಿಗೂ ಅದರ ಜವಾಬ್ದಾರಿ ಹೊರಿಸಲಿ ಎಂದು ಸರ್ಕಾರಕ್ಕೆ  ಸಲಹೆ ನೀಡಿದರು.

ಇನ್ನಷ್ಟು ಕಿಟ್ ವಿತರಿಸಿ:

 ಎಲ್ಲರಿಗೂ ವೆಂಟಿಲೆಟರ್ ಅವಶ್ಯಕತೆ ಇಲ್ಲ.  ಉಸಿರಾಟ ತೊಂದರೆ ಆದಾಗ ಮಾತ್ರ ವೆಂಟಿಲೆಟರ್ ಬೇಕಾಗುತ್ತದೆ.   ಸರ್ಕಾರ ಸಿಕ್ಕಾಪಟ್ಟೆ ವೆಂಟಿಲೆಟರ್ ಖರೀದಿಸಿದೆ. ಅದರ ಬದಲು ಕಿಟ್ ತುಂಬ ಅವಶ್ಯವಿದೆ. ಪ್ರತಿ ಆಸ್ಪತ್ರೆಗಳಿಗೂ ಬೇಕಾಗುಷ್ಟು ಕಿಟ್ ವಿತರಿಸಲಿ ಮತ್ತು ಆ್ಯಂಬುಲೆನ್ಸ್ ಗಳ ಕೊರತೆ ಇದ್ದು, ಹೊಸ ಆ್ಯಂಬುಲೆನ್ಸ್ ಗಳ ಖರೀದಿಸಲಿ ಅಥವಾ ಖಾಸಗಿ ವಾಹನಗಳನ್ನು ಬಾಡಿಗೆ ರೂಪದಲ್ಲಿ  ಪಡೆಯಲಿ ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ