Breaking News
Home / Uncategorized / ಟೂಲ್‌ಕಿಟ್‌ ಹಗರಣ ಬಯಲಾಗುತ್ತಿದ್ದಂತೆಯೇ ಹೆಚ್ಚಾಯ್ತು ‘ಮೋದಿಗೋಬ್ಯಾಕ್‌’ ಟ್ರೆಂಡ್‌- ಸಂಕಷ್ಟದಲ್ಲಿ ನಟಿ

ಟೂಲ್‌ಕಿಟ್‌ ಹಗರಣ ಬಯಲಾಗುತ್ತಿದ್ದಂತೆಯೇ ಹೆಚ್ಚಾಯ್ತು ‘ಮೋದಿಗೋಬ್ಯಾಕ್‌’ ಟ್ರೆಂಡ್‌- ಸಂಕಷ್ಟದಲ್ಲಿ ನಟಿ

Spread the love

ಚೆನ್ನೈ: ಭಾರತದ ವಿರುದ್ಧ ಮಹಾ ಷಡ್ಯಂತ್ರ ರಚಿಸಿರುವ ‘ಟೂಲ್‌ಕಿಟ್‌’ ಹಗರಣ ಬಯಲಾಗುತ್ತಿದ್ದಂತೆಯೇ, ಇತ್ತ ಮೋದಿಗೋಬ್ಯಾಕ್‌ ಟ್ರೆಂಡ್‌ ಮತ್ತೆ ಶುರುವಾಗಿದೆ. ರೈತರ ಪ್ರತಿಭಟನೆಯನ್ನು ನೆಪ ಮಾಡಿಕೊಂಡು ಭಾರತದ ವಿರುದ್ಧ ಮಹಾ ಸಮರ ಸಾರಿರುವ ಕೆಲವು ಕಿಡಿಗೇಡಿಗಳ ಕೃತ್ಯ ಒಂದೊಂದಾಗಿ ಹೊರಕ್ಕೆ ಬರುತ್ತಿದ್ದಂತೆಯೇ ಇತ್ತ ಮೋದಿಗೋಬ್ಯಾಕ್‌ ಎಂದು ಹಲವರು ಟ್ವೀಟ್‌ ಶುರು ಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮಿಳುನಾಡಿಗೆ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಹ್ಯಾಷ್‌ಟ್ಯಾಗ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನಟಿ ಓವಿಯ್ಯಾ ಇದೇ ಹ್ಯಾಷ್‌ಟ್ಯಾಗ್‌ ಟ್ವೀಟ್‌ ಮಾಡಿ ಈಗ ಹಲವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

#GOBackModi ಎಂದು ಈ ಬಹುಭಾಷಾ ನಟಿ ಟ್ವೀಟ್‌ ಮಾಡಿದ್ದಾರೆ. ಕನ್ನಡ, ತಮಿಳು, ಮಲಯಾಳ ಚಿತ್ರಗಳಲ್ಲಿ ನಟಿಸುತ್ತಿರುವ ಓವಿಯ್ಯಾ, ಇಂಥದ್ದೊಂದು ಟ್ವೀಟ್‌ ಮಾಡಿದ್ದು ಮೋದಿ ಅಭಿಮಾನಿಗಳನ್ನು ಹಾಗೂ ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ.

ಇದಕ್ಕೆ ಕಾರಣ, ಇವರು ಟ್ವೀಟ್‌ ಮಾಡುತ್ತಿದ್ದಂತೆಯೇ, ಈಕೆಯ ಅಭಿಮಾನಿಗಳು ಸೇರಿದಂತೆ ಬಿಜೆಪಿ ವಿರೋಧಿಗಳು ಇದೇ ಹ್ಯಾಷ್‌ಟ್ಯಾಗ್‌ನೊಂದಿಗೆ ಗುಂಪುಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಕಲಹ ಉಂಟಾಗಿದೆ ಎನ್ನುವುದು ಬಿಜೆಪಿಯ ಆರೋಪ.

ಈ ಸಂಬಂಧ ತಮಿಳುನಾಡಿನ ಬಿಜೆಪಿ ಕಾನೂನು ವಿಭಾಗದ ಸದಸ್ಯ ಅಲೆಕ್ಸೆಸ್ ಸುಧಾಕರ್ ನಟಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಎಸ್‍ಪಿ, ಸಿಬಿ-ಸಿಐಡಿಗೆ ದೂರು ನೀಡಿದ್ದು, ಸಾರ್ವಜನಿಕವಾಗಿ ಅಗೌರವ ತೋರಿದ್ದಕ್ಕಾಗಿ ಓವಿಯಾ ವಿರುದ್ಧ ಕ್ರಮ ಕೈಗೊಳ್ಳಿ ಮತ್ತು ಓವಿಯ್ಯಾ ಈ ಹಿಂದಿನ ಉದ್ದೇಶದ ಕುರಿತು ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ನಡುವೆಯೇ, ನಟಿಯು ಕ್ಷಮೆ ಕೇಳುವಂತೆ ಚೆನ್ನೈ ಬಿಜೆಪಿ ಘಟಕ ಒತ್ತಾಯಿಸಿದೆ.


Spread the love

About Laxminews 24x7

Check Also

ಗಂಡನ ಕಡತ ತುಡಿತ! ಗದಗ ನಗರಸಭೆಯಲ್ಲಿ ಅಧ್ಯಕ್ಷೆಯ ಗಂಡನದ್ದೇ ದರ್ಬಾರ್; ಪತಿ ನೋಡಿದ ಬಳಿಕವಷ್ಟೇ ಫೈಲ್ ಗೆ ಸಹಿ ಹಾಕ್ತಾರೆ ಮೇಡಂ

Spread the loveಗದಗ: ಮಹಿಳೆಯರಿಗೆ ಸಮಾನತೆ ಸಿಗಲಿ ಅಂತ ಸರ್ಕಾರ ಮಹಿಳಾ ಮೀಸಲಾತಿ ಜಾರಿ ಮಾಡಿದೆ. ಅದರಂತೆ ಈ ನಗರಸಭೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ