Home / ಜಿಲ್ಲೆ / ಬೆಂಗಳೂರು / ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಸಂಪ್ಲಿಮೆಂಟರಿ ಚಾರ್ಜಶೀಟ್ ನಲ್ಲಿ ಕೊಲೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿ

ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಸಂಪ್ಲಿಮೆಂಟರಿ ಚಾರ್ಜಶೀಟ್ ನಲ್ಲಿ ಕೊಲೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿ

Spread the love

ಧಾರವಾಡ(ಫೆ. 10):  ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಹತ್ಯೆ ಸಿಬಿಐ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಸಂಪ್ಲಿಮೆಂಟರಿ ಚಾರ್ಜಶೀಟ್ ಸಲ್ಲಿಸಿದ್ದಾರೆ. ಚಾರ್ಜಶೀಟ್ ನಲ್ಲಿರು ಏನಿದೆ ಎಂಬುದರ  ಪ್ರತಿ‌ ಇದೀಗ ಲಭ್ಯವಾಗಿದೆ‌‌. ಸಿಬಿಐ ತನಿಖೆ ಕೈಗೆತ್ತಿಕೊಂಡ ಬಳಿಕ‌ ನಡೆದ‌ ಎಲ್ಲ ಮಾಹಿತಿಯನ್ನು ಕಲೆಹಾಕಿದ್ದಾರೆ. ಯೋಗೇಶಗೌಡ ಕೊಲೆಗೆ ಸಂಬಂಧಿಸಿದಂತೆ ಹಲವರನ್ನು ಕರೆಸಿ ತನಿಖೆ ಆರಂಭ ಮಾಡಿದ್ದರು. ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಸಂಪ್ಲಿಮೆಂಟರಿ ಚಾರ್ಜಶೀಟ್ ನಲ್ಲಿ  ಕೊಲೆಗೆ ಸಂಬಂಧಿಸಿದಂತೆ ಇಂಚಿಂಚು ಮಾಹಿತಿ ಕಲೆ ಉಲ್ಲೇಖಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಓರ್ವನನ್ನು ಬಿಟ್ಟಿರುವುದು ಗಮನಕ್ಕೆ ಬಂದಿತ್ತು. ಸಿಬಿಐ ತನಿಖೆ ಆರಂಭದ ಬಳಿಕ ನಾವು ಮತ್ತಷ್ಟು ಜನರನ್ನು ಬಂದಿಸಿದ್ದೇವೆ. ವಿನಯ ಕುಲಕರ್ಣಿಯನ್ನು ನ. 5 ರ 2020 ರಂದು ಬಂಧಿಸಲಾಗಿದೆ. ವಿನಯ ಪ್ರಕರಣದ 15ನೇ ಆರೋಪಿಯಾಗಿದ್ದಾರೆ.

ಯೋಗೀಶಗೌಡ ಜೊತೆ ವಿನಯ್ ಅವರ ಸಂಬಂಧ ವೈಯಕ್ತಿಕ ದ್ವೇಷ, ರಾಜಕೀಯ ಪೈಪೋಟಿ ನಡೆದಿತ್ತು. ಯೋಗೀಶಗೌಡನನ್ನು ಜಿಪಂ ಚುನಾವಣೆಯಿಂದ ಹಿಂದೆ ಸರಿಯುವಂತೆ ವಿನಯ ಕುಲಕರ್ಣಿ ಯೋಗೀಶ ಸಹೋದರ ಗುರುನಾಥನಿಗೆ ಹೇಳಿದ್ದರು.ಆದರೂ ಚುನಾವಣೆಗೆ ಯೋಗೀಶಗೌಡ ನಿಂತಿದ್ದರು.

ಚುನಾವಣೆ ವೇಳೆ ಚುನಾವಣೆಗೆ ಸ್ಪರ್ಧಿಸಿದ್ದ ಯೋಗೀಶಗೌಡನನ್ನು ವಿನಯ ಅರೆಸ್ಟ್ ಮಾಡಿಸಿದ್ದರು. ತದನಂತರ ನಡೆದ ಜಿಪಂ ಸಭೆಯಲ್ಲಿ ಇಬ್ಬರ ಮಧ್ಯೆ ಜಟಾಪಟಿ ನಡೆದಿತ್ತು. 23 ಎಪ್ರಿಲ್ 2016 ರಂದು ಸಭೆ ನಡೆದಿತ್ತು.. ತನ್ನ ಕ್ಷೇತ್ರದ ಪ್ರತಿನಿಧಿಯಾಗಿ ಯೋಗೀಶಗೌಡ ಸಭೆಗೆ ಭಾಗಿಯಾಗಿದ್ದರು ಸಭೆಯಲ್ಲಿ ಇಬ್ಬರ ವಾದ ವಿವಾದ ನಡೆದಿತ್ತು. ಇದೇ ದ್ವೇಷ ಇಟ್ಟುಕೊಂಡು ಮುಂದೆ ಸಾಗಿದ ವಿನಯ ಕುಲಕರ್ಣಿ ಯೋಗೀಶಗೌಡ ಕೊಲೆ ಮಾಡಿಸಲು ಬಸವರಾಜ ಮುತ್ತಗಿ ಮತ್ತು ವಿನಯ ಸೋದರ ಮಾವ ಚಂದ್ರಶೇಖರ ಇಂಡಿ ಸೇರಿ ವಿನಯಗೆ ಭರವಸೆ ಕೊಡುತ್ತಾರೆ.

ಮುತ್ತಗಿ, ಮೊದಲಿನಿಂದಲೂ ವಿನಯಗೆ ಆಪ್ತನಾಗಿದ್ದ ವ್ಯಕ್ತಿಯಾಗಿರುತ್ತಾರೆ. ಪೊಲೀಸರಿಂದ ಜಮೀನು ವಿವಾದದ ಕೊಲೆ ಎಂದು ತನಿಖೆ ವಿಚಾರ ಕೊಲೆಗೂ ಮುಂಚೆಯೇ ಜಮೀನು ವಿವಾದ ಹರಿದ ಬಗ್ಗೆ ಸಿಬಿಐ ನಮೂದು ಮಾಡಿದೆ. 2016ರ ಮೇ 24ರಂದೇ ಜಮೀನು ವಿವಾದ ಮುಗಿದು ಹೋಗಿತ್ತು. ಮುತ್ತಗಿ ಮತ್ತು ನಾಗೇಂದ್ರ ತೋಡಕರ ಎಂಬುವವರ ಮಧ್ಯದ ವಿವಾದ ಇತ್ತು. ಆದರೆ ಉದ್ದೇಶಪೂರಕವಾಗಿಯೇ ಕೊಲೆ ಕೇಸ್‌ನಲ್ಲಿ ಜಮೀನು ವಿವಾದ ಪ್ರಸ್ತಾಪ ಮಾಡಲಾಗಿದ್ದು, ಕೊಲೆ ಕೇಸ್ ದಿಕ್ಕು ಬದಲಿಸುವುದಕ್ಕೆ ಜಮೀನು ವಿವಾದ ಸೃಷ್ಟಿಸಲಾಗಿದೆ.

ಸ್ಥಳೀಯ ಪೊಲೀಸ್‌ರಿಂದಲೇ ಜಮೀನು ವಿವಾದ ಕಥೆ ಸೃಷ್ಟಿಯಾಗಿದೆ. ಬಸವರಾಜ ಮುತ್ತಗಿ ಜೊತೆಗೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದ ವಿನಯ ಕುಲಕರ್ಣಿ ಅವರು ಮೊಬೈಲ್ 9663406677ನಿಂದ ಮುತ್ತಗಿ ನಂ. 9538659906 ಜೊತೆ ಸಂಪರ್ಕ ಹೊಂದಿದ್ದರು.

2016ರ ಜನೆವರಿಯಿಂದ ಜೂನ್.ವರೆಗೆ ನಿರಂತರ ಫೋನ್ ಸಂಪರ್ಕ ಮುತ್ತಗಿ ಜೊತೆ ಈ ಅವಧಿಯಲ್ಲಿ ಒಟ್ಟು 57 ಸಲ ಮಾತುಕತೆ ನಡೆಸಿದ್ದಾರೆ. ವಿನಯ ಕುಲಕರ್ಣಿ ಪತ್ನಿ ಮೊಬೈಲ್‌ನಲ್ಲಿಯೂ ಮಾತುಕತೆ ನಡೆದಿದೆ. ವಿನಯ ಪತ್ನಿ ಮೊಬೈಲ್ ಸಂಖ್ಯೆ 9611683099ಗೆ ಫೋನ್ ಮೂಲಕ ಕೊಲೆ ಮಾಡುವ ಸಂಬಂಧ ವಿನಯ ಮತ್ತು ಮುತ್ತಗಿ ಮಧ್ಯೆ ಭೇಟಿ ನಡೆದಿತ್ತು.2016ರ ಏಪ್ರಿಲ್ 23ರಿಂದ ಅದೇ ವರ್ಷದ ಮೇ 31ರವರೆಗೆ ವಿನಯ ಮುತ್ತಗಿ ಅನೇಕ ಸಲ ಭೇಟಿಯಾಗಿರುತ್ತಾರೆ. ಬೇರೆ ಬೇರೆ ಮೊಬೈಲ್ ಬಳಸಿ ಮುತ್ತಗಿ ಮತ್ತು ವಿನಯ ಮಧ್ಯೆ‌ ಮಾತುಕತೆ ನಡೆದಿರುತ್ತದೆ. ಹತ್ಯೆ ಸ್ಕೇಚ್ ಗೆ ಸಂಬಂಧಿಸಿದಂತೆ ಮಾತುಕತೆ ನಡೆದಿರುತ್ತದೆ.

ಯೋಗೀಶಗೌಡ ಕೊಲೆಗೆ 3 ಕಂಟ್ರಿ ಪಿಸ್ತೂಲ್ ವ್ಯವಸ್ಥೆಯನ್ನು ವಿನಯ ಸೋದರ ಮಾವ ಚಂದ್ರಶೇಖರ ಇಂಡಿ ಮಾಡಿದ್ದರು.ಬಸವರಾಜ ಮುತ್ತಗಿಗೆ ಕಂಟ್ರಿ ಪಿಸ್ತೂಲ್ ಹಸ್ತಾಂತರ ಮಾಡಿ ಕೊಲೆಗೆ ಮಾರಕಾಸ್ತ್ರಗಳನ್ನೂ ಸಹ ಇಂಡಿ ನೀಡಿದ್ದರು.

ಶಿವಾನಂದ ಬಿರಾದಾರ ಮೂಲಕ ಕಂಟ್ರಿ ಪಿಸ್ತೂಲ್ ಪಡೆದುಕೊಂಡ ಹಂತಕರು ದಾಂಡೇಲಿ ಹಾರ್ನಬೆಲ್ ರೆಸಾರ್ಟ್‌ನಲ್ಲಿ ತಂಗಿದ್ದ ವಿಚಾರಕ್ಕೆ ಖುದ್ದು ವಿನಯ ಕುಲಕರ್ಣಿಯೇ ಅವರು ಉಳಿಯಲು ವ್ಯವಸ್ಥೆ ಮಾಡಿಸಿದ್ದರು. ಇದನ್ನು ರೆಸಾರ್ಟ್ ಮಾಲೀಕರು ಸಾಕ್ಷಿಕರಿಸಿದ್ದಾರೆ. ವಿನಯ ಕುಲಕರ್ಣಿಯೇ ವ್ಯವಸ್ಥೆ ಮಾಡಿಸಿದ್ದಾಗಿ ಸಿಬಿಐಗೆ ರೆಸಾರ್ಟ್ ಮಾಲೀಕ ಹೇಳಿಕೆ ನೀಡಿದ್ದಾರೆ. ಮೊದಲ ಸಲ ಹತ್ಯೆ ಯತ್ನಕ್ಕೆ ಬಂದಾಗ ರೆಸಾರ್ಟ್‌ ನಲ್ಲಿ ಹಂತಕರು ತಂಗಿದ್ದರು.

ಮೊದಲ ಹತ್ಯೆ ಯತ್ನದ ಬಳಿಕ ವಿನಯ ಕುಲಕರ್ಣಿ ಮುತ್ತಗಿಗೆ 6 ಲಕ್ಷ ರೂಪಾಯಿ ತನ್ನ ಡೈರಿಯಲ್ಲಿ ನೀಡಿದ್ದರು. ‌ಹಂತಕರಿಗೆ ಉಳಿದುಕೊಳ್ಳಲು ಧಾರವಾಡ ಎರಡು ಹೊಟೇಲ್‌ನಲ್ಲಿ ವ್ಯವಸ್ಥೆ ಸಹ ಮಾಡಲಾಗಿತ್ತು. ಹೋಟೆಲ್ ಅಂಕಿತಾ ಮತ್ತು ಸೆಂಟ್ರಲ್ ಪಾರ್ಕ್‌ನಲ್ಲಿ ವ್ಯವಸ್ಥೆ‌ ಮಾಡಲಾಗಿತ್ತು ಎಂದು ಸಿಬಿಐ ಪೂರಕ ಚಾರ್ಜ್ ಶೀಟ್ ನಲ್ಲಿ ನಮೂದಿಸಿದೆ.

 


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ