Breaking News

ಮತ್ತೆ ಶುರು ಸಖತ್; ಸದ್ಯದಲ್ಲೇ ಯುರೋಪ್​ಗೆ ಪ್ರಯಾಣ..

Spread the love

ಬೆಂಗಳೂರು: ಲಾಕ್​ಡೌನ್ ನಂತರ ‘ಥ್ರಿಬ್ಬಲ್ ರೈಡಿಂಗ್’ ಚಿತ್ರವನ್ನು ಮುಗಿಸಿರುವ ಗಣೇಶ್, ಇದೀಗ ‘ಸಖತ್’ ಚಿತ್ರೀಕರಣಕ್ಕೆ ವಾಪಸಾಗಿದ್ದಾರೆ. ಕಳೆದ ವರ್ಷದ ಆರಂಭದಲ್ಲಿಯೇ, ಸಿಂಪಲ್ ಸುನಿ ನಿರ್ದೇಶನದ ‘ಸಖತ್’ ಪ್ರಾರಂಭವಾಗಿ ಒಂದು ಹಂತದ ಚಿತ್ರೀಕರಣ ಮುಗಿದಿತ್ತು. ಆದರೆ, ಲಾಕ್​ಡೌನ್ ಹಿನ್ನೆಲೆಯಲ್ಲಿ ನಿಂತಿದ್ದ ಚಿತ್ರೀಕರಣ ಇದೀಗ ಪುನಃ ಶುರುವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಗಣೇಶ್, ‘ಪ್ರತಿ ಚಿತ್ರವೂ ನನಗೆ ಹೊಸತನ. ಮೊದಲ ಬಾರಿಗೆ ಮಾಡುತ್ತಿರುವ ಈ ರೀತಿಯ ಪಾತ್ರ ನಾ. ಚಿತ್ರಕಥೆ- ಸಂಭಾಷಣೆ ನಗು ತರುತ್ತಿದೆ. ಶೂಟಿಂಗ್ ಸಖತ್ತಾಗಿ ಹೋಗ್ತಿದೆ …’ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದ ಚಿತ್ರೀಕರಣ ಮುಗಿಸಿ, ಫೆಬ್ರವರಿಯಲ್ಲಿ ‘ಗಾಳಿಪಟ 2’ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಗಣೇಶ್. ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಯುರೋಪ್​ನಲ್ಲಿ ನಡೆಯಬೇಕಿತ್ತು. ಅದಕ್ಕೂ ಕರೊನಾ ಅಡ್ಡಿಯಾಯಿತು. ಇದೀಗ ಯುರೋಪ್​ನ ಒಂದೆರಡು ದೇಶಗಳಲ್ಲಿ ಅನುಮತಿ ಸಿಕ್ಕಿರುವುದರಿಂದ, ಮುಂದಿನ ತಿಂಗಳು ಚಿತ್ರತಂಡ ಅಲ್ಲಿಗೆ ಪ್ರಯಾಣ ಬೆಳೆಸಿ ಚಿತ್ರೀಕರಣ ಮುಗಿಸಲಿದೆ ಎಂದು ಹೇಳಲಾಗುತ್ತಿದೆ.


Spread the love

About Laxminews 24x7

Check Also

ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ

Spread the loveವಿಧಾನ ಪರಿಷತ್ (ವಿಧಾನಸೌಧ): ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂದು ಸುಮಾರು 52 ಸಾವಿರ ಮಹಿಳೆಯರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ