Breaking News
Home / ಜಿಲ್ಲೆ / ಬೆಂಗಳೂರು / ಖಾತೆ ಅದಲು ಬದಲು, ಯಾರಿಗೆ ಯಾವ ಖಾತೆ..? ಇಲ್ಲಿದೆ ಕಂಪ್ಲೀಟ್ ಲಿಸ್ಟ್

ಖಾತೆ ಅದಲು ಬದಲು, ಯಾರಿಗೆ ಯಾವ ಖಾತೆ..? ಇಲ್ಲಿದೆ ಕಂಪ್ಲೀಟ್ ಲಿಸ್ಟ್

Spread the love

ಬೆಂಗಳೂರು, ಜ.21- ಸಚಿವ ಸಂಪುಟ ವಿಸ್ತರಣೆಯಾಗಿ ಒಂದು ವಾರ ಕಳೆದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ. ನೂತನ ಸಚಿವರಿಗೆ ನೀಡಿರುವ ಖಾತೆಗಳಲ್ಲಿ ಕೆಲವರಿಗೆ ಬಂಪರ್ ಹೊಡೆದಿದ್ದರೆ, ಇನ್ನು ಕೆಲವರಿಗೆ ನಿರೀಕ್ಷೆಗೂ ಊಹೆ ಮಾಡದ ರೀತಿಯಲ್ಲಿ ಹಿನ್ನಡೆಯಾಗಿದೆ.

ಕಳೆದವಾರ ಪ್ರಮಾಣವಚನ ಸ್ವೀಕರಿಸಿದ 7 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ಹಾಲಿ 10 ಸಚಿವರ ಖಾತೆಗಳೂ ಕೂಡ ಅದಲು-ಬದಲಾಗಿವೆ. ತೀವ್ರ ಪೈಪೋಟಿ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಮತ್ತು ಇಂಧನ ಖಾತೆಯನ್ನು ತಮ್ಮ ಬಳಿಯೇ ಸಿಎಂ ಉಳಿಸಿಕೊಂಡಿದ್ದಾರೆ. ಹಿರಿತನ ಆಧಾರದ ಮೇಲೆ ಮಾಜಿ ಸಚಿವ ಹಾಗೂ ಹುಕ್ಕೇರಿ ಶಾಸಕ ಉಮೇಶ್‍ಕತ್ತಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಹೊಣೆಗಾರಿಕೆಯನ್ನು ನೀಡಲಾಗಿದೆ. ಬೀಳಗಿ ಶಾಸಕ ಮುರುಗೇಶ್ ನಿರಾಣಿಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ನೀಡಲಾಗಿದೆ.

ಮಹದೇವಪುರ ಶಾಸಕ ಅರವಿಂದ ಲಿಂಬಾವಳಿಗೆ ಅರಣ್ಯ, ವಿಧಾನಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್‍ಗೆ ಅಬಕಾರಿ, ಆರ್.ಶಂಕರ್‍ಗೆ ರೇಷ್ಮೆ, ಸಿ.ಪಿ.ಯೋಗೇಶ್ವರ್‍ಗೆ ಸಣ್ಣ ನೀರಾವರಿ, ಎಸ್.ಅಂಗಾರ ಅವರಿಗೆ ಮೀನುಗಾರಿಕೆ, ಬಂದರು, ಗೃಹ ಸಚಿವ ಬೊಮ್ಮಾಯಿಗೆ ಹೆಚ್ಚುವರಿಯಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಮಾಧುಸ್ವಾಮಿಗೆ ವೈದ್ಯಕೀಯ ಶಿಕ್ಷಣ ಖಾತೆ ಜತೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಖೋಟಾ ಶ್ರೀನಿವಾಸ ಪೂಜಾರಿಗೆ ಮುಜರಾಯಿ ಖಾತೆಯನ್ನು ನೀಡಲಾಗಿದೆ. ಗಣಿಗಾರಿಕೆ ಸಚಿವರಾಗಿದ್ದ ಸಿ.ಸಿ.ಪಾಟೀಲ್‍ಗೆ ಸಣ್ಣ ಕೈಗಾರಿಕೆ ಜತೆಗೆ ವಾರ್ತಾ ಇಲಾಖೆ ಜವಾಬ್ದಾರಿಯನ್ನು ನೀಡಲಾಗಿದೆ.

# ಸಚಿವರ ಖಾತೆ:
ಬಿ.ಎಸ್.ಯಡಿಯೂರಪ್ಪ: ಮುಖ್ಯಮಂತ್ರಿ, ಹಣಕಾಸು, ಗುಪ್ತಚರ, ಯೋಜನೆ, ಕಾರ್ಯಕ್ರಮ, ಅಂಕಿಸಂಖ್ಯೆ ಅನುಷ್ಠಾನ, ಮೂಲಭೂತ ಸೌಕರ್ಯ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಇಂಧನ ಹಾಗೂ ಬೆಂಗಳೂರು ಅಭಿವೃದ್ಧಿ.
1.ಲಕ್ಷ್ಮಣ ಸವದಿ: ಉಪಮುಖ್ಯಮಂತ್ರಿ, ಸಾರಿಗೆ
2.ಗೋವಿಂದ ಕಾರಜೋಳ: ಉಪಮುಖ್ಯಮಂತ್ರಿ, ಲೋಕೋಪಯೋಗಿ
3.ಡಾ.ಅಶ್ವತ್ಥನಾರಾಯಣ: ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ
4.ಬಸವರಾಜ ಬಮ್ಮಾಯಿ: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
5.ಆರ್.ಅಶೋಕ್: ಕಂದಾಯ
6.ಜೆ.ಸಿ.ಮಾಧುಸ್ವಾಮಿ: ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ
7.ಉಮೇಶ್‍ಕತ್ತಿ: ಆಹಾರ ಮತ್ತು ನಾಗರಿಕ ಪೂರೈಕೆ
8.ಎಸ್.ಅಂಗಾರ: ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ
9.ಸಿ.ಸಿ.ಪಾಟೀಲ್: ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ,
10.ಅರವಿಂದ ಲಿಂಬಾವಳಿ: ಅರಣ್ಯ

11.ಮುರುಗೇಶ ನಿರಾಣಿ: ಗಣಿಗಾರಿಕೆ ಮತ್ತು ಭೂ ವಿಜ್ಞಾನ
12.ಎಂ.ಟಿ.ಬಿ.ನಾಗರಾಜ್: ಅಬಕಾರಿ
13.ಕೋಟಾ ಶ್ರೀನಿವಾಸಪೂಜಾರಿ: ಮುಜರಾಯಿ
14.ಡಾ.ಕೆ.ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
15.ಆನಂದ್‍ಸಿಂಗ್: ಪ್ರವಾಸೋದ್ಯಮ, ಪರಿಸರ, ಜೈವಿಕ ಪರಿಸರ
16.ಸಿ.ಪಿ.ಯೋಗೇಶ್ವರ್: ಸಣ್ಣ ನೀರಾವರಿ
17.ಪ್ರಭು ಚವ್ಹಾಣ್: ಪಶುಸಂಗೋಪನೆ
18.ಶಿವರಾಂ ಹೆಬ್ಬಾರ್: ಕಾರ್ಮಿಕ
19.ಆರ್.ಶಂಕರ್: ಪೌರಾಡಳಿತ, ರೇಷ್ಮೆ
20.ಕೆ.ಗೋಪಾಲಯ್ಯ: ತೋಟಗಾರಿಕೆ, ಸಕ್ಕರೆ

21.ಕೆ.ಸಿ.ನಾರಾಯಣಗೌಡ: ಯುವ ಸಬಲೀಕರಣ ಮತ್ತು ಕ್ರೀಡೆ, ಹಜ್-ವಕ್ಫ್
22.ಕೆ.ಎಸ್.ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್
23.ಎಸ್.ಸುರೇಶ್‍ಕುಮಾರ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
24.ಜಗದೀಶ್ ಶೆಟ್ಟರ್: ಬೃಹತ್ ಕೈಗಾರಿಕೆ
25.ಶಶಿಕಲಾ ಜೊಲ್ಲೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
26.ಎಸ್.ಟಿ.ಸೋಮಶೇಖರ್: ಸಹಕಾರ
27.ಬಿ.ಸಿ.ಪಾಟೀಲ್: ಕೃಷಿ
28.ಬೈರತಿ ಬಸವರಾಜು: ನಗರಾಭಿವೃದ್ಧಿ
29.ಶ್ರೀರಾಮುಲು: ಸಮಾಜಕಲ್ಯಾಣ
30.ರಮೇಶ್ ಜಾರಕಿಹೊಳಿ: ಜಲಸಂಪನ್ಮೂಲ
31.ವಿ.ಸೋಮಣ್ಣ: ವಸತಿ
32.ಶ್ರೀಮಂತ ಪಾಟೀಲ್: ಜವಳಿ

17.ಪ್ರಭು ಚವ್ಹಾಣ್: ಪಶುಸಂಗೋಪನೆ
18.ಶಿವರಾಂ ಹೆಬ್ಬಾರ್: ಕಾರ್ಮಿಕ
19.ಆರ್.ಶಂಕರ್: ಪೌರಾಡಳಿತ, ರೇಷ್ಮೆ
20.ಕೆ.ಗೋಪಾಲಯ್ಯ: ತೋಟಗಾರಿಕೆ, ಸಕ್ಕರೆ

21.ಕೆ.ಸಿ.ನಾರಾಯಣಗೌಡ: ಯುವ ಸಬಲೀಕರಣ ಮತ್ತು ಕ್ರೀಡೆ, ಹಜ್-ವಕ್ಫ್
22.ಕೆ.ಎಸ್.ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್
23.ಎಸ್.ಸುರೇಶ್‍ಕುಮಾರ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
24.ಜಗದೀಶ್ ಶೆಟ್ಟರ್: ಬೃಹತ್ ಕೈಗಾರಿಕೆ
25.ಶಶಿಕಲಾ ಜೊಲ್ಲೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
26.ಎಸ್.ಟಿ.ಸೋಮಶೇಖರ್: ಸಹಕಾರ
27.ಬಿ.ಸಿ.ಪಾಟೀಲ್: ಕೃಷಿ
28.ಬೈರತಿ ಬಸವರಾಜು: ನಗರಾಭಿವೃದ್ಧಿ
29.ಶ್ರೀರಾಮುಲು: ಸಮಾಜಕಲ್ಯಾಣ
30.ರಮೇಶ್ ಜಾರಕಿಹೊಳಿ: ಜಲಸಂಪನ್ಮೂಲ
31.ವಿ.ಸೋಮಣ್ಣ: ವಸತಿ
32.ಶ್ರೀಮಂತ ಪಾಟೀಲ್: ಜವಳಿ


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ