Breaking News
Home / ಜಿಲ್ಲೆ / ಬೆಳಗಾವಿ / ನಿಪ್ಪಾಣಿ / ಜನತೆಯ ಆರೋಗ್ಯದ ಕುರಿತು ಮುನ್ನಚ್ಚರಿಕೆ ವಹಿಸುವುದು ನನ್ನ ಆದ್ಯ ಕರ್ತವ್ಯ ಎಂದ ಸಚಿವೆ

ಜನತೆಯ ಆರೋಗ್ಯದ ಕುರಿತು ಮುನ್ನಚ್ಚರಿಕೆ ವಹಿಸುವುದು ನನ್ನ ಆದ್ಯ ಕರ್ತವ್ಯ ಎಂದ ಸಚಿವೆ

Spread the love

ನಿಪ್ಪಾಣಿ –  ಪಟ್ಟಣದ ಹೊರವಲಯದಲ್ಲಿ ಗವಾನ ಗ್ರಾಮಕ್ಕೆ ಕೊವಿಡ್-೧೯ ಮುನ್ನಚ್ಚರಿಕೆ ಕ್ರಮವಾಗಿ ನಿರ್ಮಿಸಲಾದ ೫೦ ಹಾಸಿಗೆಗಳ ಕೊವಿಡ್ ಸೆಂಟರ್ ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆಯ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಭೇಟಿ ನೀಡಿ ಪರಿಶೀಲಿಸಿದರು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ಜನತೆಯ ಆರೋಗ್ಯದ ಕುರಿತು ಮುನ್ನಚ್ಚರಿಕೆ ವಹಿಸುವುದು ನನ್ನ ಆದ್ಯ ಕರ್ತವ್ಯ.  ಭಯಂಕರ ರೋಗವೊಂದು ಇಡೀ ಸಮಾಜವನ್ನು ಅಲ್ಲೋಲ ಕಲ್ಲೋಲವಾಗಿಸುತ್ತಿರುವ ಈ ಸಮಯದಲ್ಲಿ ಪ್ರಜೆಗಳ ಹಿತಾಸಕ್ತಿ ಕಾಯುವ ಮಹತ್ತರ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸುತ್ತೆನೆಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಗಾಯಕವಾಡ, ಪೌರಾಯುಕ್ತ ಮಹಾವೀರ ಬೋರಣ್ಣವರ, ತಾಲೂಕ ವೈಧ್ಯಾಧಿಕಾರಿ ಡಾ ವಿಠ್ಠಲ ಶಿಂಧೆ, ಡಾ ಸೀಮಾ ಗುಂಜ್ಯಾಳೆ, ಸಿಪಿಐ ಸಂತೋಷ ಸತ್ಯನಾಯಿಕ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.


Spread the love

About Laxminews 24x7

Check Also

ಶಿಸ್ತು, ಪರಿಶ್ರಮ, ತಾಳ್ಮೆಯಿಂದ ಸಾಧನೆ ಸಾಧ್ಯ

Spread the love ನಿಪ್ಪಾಣಿ: ‘ಶಿಸ್ತು, ಪರಿಶ್ರಮ, ಸೌಮ್ಯತೆ, ತಾಳ್ಮೆ ಇದ್ದಲ್ಲಿ ವಿದ್ಯಾರ್ಥಿಗಳು ಮುಂದೆ ಹೋಗಿ ಬಯಸಿದ್ದನ್ನೆಲ್ಲ ಸಾಧಿಸುತ್ತಾರೆ. ಅದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ