Home / Uncategorized / ಒಂದೇ ಸಮುದಾಯದ ಇಬ್ಬರು ಮುಖಂಡರು ವಾಕ್ಸಮರ ನಡೆಸಿಕೊಂಡಿದ್ದು, ಅದೇ ಕಾರ್ಯಕ್ರಮದ ವೇದಿಕೆ ಮೇಲಿದ್ದರೂ ಸಂಸದ ಉಮೇಶ್ ಜಾಧವ್ ಮಾತ್ರ ಮೂಕ ಪ್ರೇಕ್ಷಕ

ಒಂದೇ ಸಮುದಾಯದ ಇಬ್ಬರು ಮುಖಂಡರು ವಾಕ್ಸಮರ ನಡೆಸಿಕೊಂಡಿದ್ದು, ಅದೇ ಕಾರ್ಯಕ್ರಮದ ವೇದಿಕೆ ಮೇಲಿದ್ದರೂ ಸಂಸದ ಉಮೇಶ್ ಜಾಧವ್ ಮಾತ್ರ ಮೂಕ ಪ್ರೇಕ್ಷಕ

Spread the love

ಕಲಬುರ್ಗಿ (ಜ. 7):   ಶಿಸ್ತಿನ ಪಕ್ಷ ಎಂದೆನಿಸಿಕೊಳ್ಳೋ ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆದಿದೆ. ಅದೂ ಸಹ ಒಂದೇ ಸಮುದಾಯದ ಇಬ್ಬರು ಮುಖಂಡರು ವಾಕ್ಸಮರ ನಡೆಸಿಕೊಂಡಿದ್ದು, ಅದೇ ಕಾರ್ಯಕ್ರಮದ ವೇದಿಕೆ ಮೇಲಿದ್ದರೂ ಸಂಸದ ಉಮೇಶ್ ಜಾಧವ್ ಮಾತ್ರ ಮೂಕ ಪ್ರೇಕ್ಷಕರ ರೀತಿಯಲ್ಲಿ ನೋಡಿ ಸುಮ್ಮನಾಗಿದ್ದಾರೆ. ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ  ಮಾಜಿ ಶಾಸಕ ವಾಲ್ಮೀಕಿ ನಾಯಕ್ ಹಾಗೂ ಜಿ.ಪಂ. ಸದಸ್ಯ ಅರವಿಂದ ಚವ್ಹಾಣ ನಡುವೆ ವಾಗ್ವಾದ ನಡೆದಿದೆ. ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಚಿತ್ತಾಪುರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಸನ್ಮಾನಕ್ಕೆ ಬಿಜೆಪಿ ಬೆಂಬಲಿತ ವಿಜೇತ ಗ್ರಾಮ ಪಂಚಾಯ್ತಿ ಸದಸ್ಯರನ್ನು ಆಹ್ವಾನಿಸಲಾಗಿತ್ತು. ನೂತನ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕೆಂದುಕೊಂಡಿದ್ದ ವಾಲ್ಮೀಕಿ ನಾಯಕ್, ಕಾರ್ಯಕ್ರಮಕ್ಕೆ ಸಂಸದ ಉಮೇಶ್ ಜಾಧವ್ ರನ್ನೂ ಆಹ್ವಾನಿಸಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ಕರೆಯದೇ ಬಂದ ತಮ್ಮ ಪಕ್ಷದ ಒಬ್ಬ ಮುಖಂಡನನ್ನು ಕಂಡು ವಾಲ್ಮೀಕಿ ನಾಯಕ್ ಕೆಂಡಾಮಂಡಲರಾಗಿದ್ದಾರೆ.

ಬಿಜೆಪಿ ಬೆಂಬಲಿತ ಸದಸ್ಯರಿಗೆ ಸನ್ಮಾನ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯ ಅರವಿಂದ ಚವ್ಹಾಣ ಆಗಮಿಸಿರೋದನ್ನು ಕಂಡು ಕುಪಿತಗೊಂಡ ವಾಲ್ಮೀಕಿ ನಾಯಕ್, ನಾನು ಸೋಲಲು ಅರವಿಂದ ಚವ್ಹಾಣ ನೇರ ಹೊಣೆ. ಯಾರೂ ಕರೆಯದಿದ್ದರೂ ಈ ಕಾರ್ಯಕ್ರಮಕ್ಕೆ ಬಂದಿದ್ದಾನೆಂದು ಎಂದು ಅರವಿಂದ ಚವ್ಹಾಣ ವಿರುದ್ಧ ವಾಲ್ಮೀಕಿ ನಾಯಕ್ ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ

Spread the loveಲೋಕಸಭಾ ಚುನಾವಣೆ ಮತದಾನಕ್ಕೆ ಮೂರೇ ದಿನ ಬಾಕಿ: ಬೆಂಗಳೂರಿನಲ್ಲಿ ನಾಳೆ ಸಂಜೆಯಿಂದ ನಿಷೇಧಾಜ್ಞೆ ಜಾರಿ ಬೆಂಗಳೂರು: ಲೋಕಸಭಾ ಚುನಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ