Breaking News

ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ

Spread the love

ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಚಾಲನೆ
ಗೋಕಾಕ :- ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಇಲಾಖೆಯಿಂದ ಗೋಕಾಕ ತಾಲ್ಲೂಕಿನ ರೈತರಿಗೆ ಸಹಾಯ
ಧನದಡಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ವಿತರಣೆ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ರಮೇಶ.ಲ.ಜಾರಕಿಹೊಳಿ ಶಾಸಕರು-
ಗೋಕಾಕ ಇವರು ಚಾಲನೆ ನೀಡಿದರು.May be an image of dais and text
ಮಂಗಳವಾರದಂದು ತಮ್ಮ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಣೆ
ಮಾಡಲಾಗುವ ಬಿತ್ತನೆ ಬೀಜ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರೈತರು ಬೀಜೋಪಚಾರ ಮಾಡಿ
ಹದವಾದ ಮಳೆಯಾದ ಮೇಲೆ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದು ಹೇಳಿದರು. ಅಲ್ಲದೇ ಗೋಕಾಕ
ತಾಲ್ಲೂಕಗಳ ರೈತರಿಗೆ ಸಾಕಾಗುವ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಲಾಗಿದ್ದು, ರೈತರು
ಗುಣಮ
ಟ್ಟದ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ಪಡೆದು ಹೆಚ್ಚಿನ ಇಳುವರಿ ತೆಗೆಯುವಂತೆ ಹೇಳಿದರು.
ಸದರಿ ಕಾರ್ಯಕ್ರಮದಲ್ಲಿ ಹಾಜರಿದ್ದ ಶ್ರೀ ಎಂ.ಎಂ.ನದಾಫ್ ಸಹಾಯಕ ಕೃಷಿ ನಿರ್ದೇಶಕರುMay be an image of one or more people and text
ಗೋಕಾಕರವರು ಮಾತನಾಡಿ 2026-273 ಸಾಲಿನ ಮುಂಗಾರು ಹಂಗಾಮಿಗೆ ರೈತರಿಗೆ ಅನುಕೂಲವಾಗುವ
ದೃಷ್ಠಿಯಿಂದ ರೈತ ಸಂಪರ್ಕ ಕೇಂದ್ರ ಗೋಕಾಕ, ಕೌಜಲಗಿ ಬೀಜ ಮಾರಾಟ ಕೇಂದ್ರಗಳ ಜೊತೆಗೆ ಅಂಕಲಗಿ,
ಉರುಬಿನಹಟ್ಟಿ, ಖನಗಾಂವ, ಬಳೋಬಾಳ, ಅಡಿಬಿಟ್ಟಿ ಉಪ ಮಾರಾಟ ಕೇಂದ್ರಗಳಲ್ಲಿಯೂ ಬೀಜಗಳನ್ನು
ವಿತರಿಸಲಾಗುತ್ತಿದ್ದು. ರೈತರಿಗೆ ಬೇಕಾಗುವ ಸಾಕಷ್ಟು ಪ್ರಮಾಣದಲ್ಲಿ ಸೋಯಾಬಿನ್, ಗೋವಿನಜೋಳ, ಹೆಸರು,
ಸೂರ್ಯಕಾಂತಿ, ಹೈಬ್ರಿಡ್ ಜೋಳ ಇತ್ಯಾದಿ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಿ ವಿತರಿಸಲಾಗುತ್ತಿದ್ದು.
ರೈತರು ಬಿತ್ತನೆ ಬೀಜಗಳನ್ನು ಪಡೆಯಲು ಆಧಾರ ಕಾರ್ಡ್, ಉತಾರ,ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ತೆಗೆದುಕೊಂಡು
ಸಹಾಯಧನದಲ್ಲಿ ಬಿತ್ತನೆ ಬೀಜಗಳನ್ನು ಪಡೆಯಬೇಕು. ಅಲ್ಲದೇ ಸೋಯಾಬಿನ್ ಬಿತ್ತನೆ ಮಾಡಲು ಜೂನ್ 1 ರಿಂದ
ಜುಲೈ 15ರ ವರೆಗೆ ಸಮಯಾವಕಾಶ ಇದ್ದು ಹದವಾದ ಮಳೆಯಾದ ಮೇಲೆ ಬಿತ್ತನೆ ಮಾಡಬೇಕು ನೀರಾವರಿ ಸೌಲಭ್ಯ
ಇರುವವರು ಮೊದಲು ನೀರು ಹಾಯಿಸಿ ನಂತರ ಬಿತ್ತನೆ ಮಾಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಗೂ ರೈತರು

ಹಾಜರಿದ್ದರು.

See less

Spread the love

About Laxminews 24x7

Check Also

ದೇಶದಲ್ಲಿ ಮುಂಗಾರು ಮಳೆ ಜೋರು – ಅಲ್ಲಲ್ಲಿ ಅವಾಂತರ ಸೃಷ್ಟಿ, ಜನಜೀವನ ಅಸ್ತವ್ಯಸ್ತ

Spread the loveನವದೆಹಲಿ: ದೇಶದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಜೋರಾಗಿದ್ದು, ಅಲ್ಲಲ್ಲಿ ಅವಾಂತರ ಸೃಷ್ಟಿಯಾಗಿವೆ. ಮಹಾರಾಷ್ಟ್ರದ ನಾಸಿಕ್, ಪಾಲ್‌ಗಡಗಳಲ್ಲಿ ಭಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ