Breaking News

ಕಂಬಳ… ಇದು ಕರಾವಳಿಯ ನೆಲದ ಸೊಗಡು

Spread the love

ಕಂಬಳ… ಇದು ಕರಾವಳಿಯ ನೆಲದ ಸೊಗಡು
ಕರಾವಳಿಯ ಪರಂಪರೆ, ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ ಕಂಬಳ ಓಟ ಕಣ್ತುಂಬಿಕೊಳ್ಳುವುದೇ ಒಂದು ಭಾಗ್ಯ. ಇಂದು ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ನಡೆಯುತ್ತಿರುವ ನರಿಂಗಾನ ಲವ-ಕುಶ ಜೋಡುಕರೆ ಕಂಬಳ ಓಟ ಕಣ್ಣಾರೆ ನೋಡಿ ಆನಂದಿಸಿದೆ‌.
ವೆಂಕಪ್ಪ ಕಾಜವರ ನೇತೃತ್ವದಲ್ಲಿ ಸರ್ವರೂ ಒಗ್ಗೂಡಿ ಮಾಡುವ ಕಂಬಳವು‌ ನೋಡುಗರ ಕಣ್ಮನ ಸೆಳೆಯುತ್ತಿದೆ..ಕೆಸರು ಗದ್ದೆಯ ಅಬ್ಬರ, ಕೋಣಗಳ ಓಟದ ಸಂಭ್ರಮ!

ಇದು ಕೇವಲ ಕ್ರೀಡೆಯಲ್ಲ, ತುಳುನಾಡಿನ ಮಣ್ಣಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ. ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ನರಿಂಗಾನ ಗ್ರಾಮದ ಮೋರ್ಲ-ಬೋಳದಲ್ಲಿ ನಡೆಯುತ್ತಿರುವ ನರಿಂಗಾನ ಲವ-ಕುಶ ಜೋಡುಕರೆ ಕಂಬಳವು ಕಣ್ಮನ ಸೆಳೆಯಿತು. ವೆಂಕಪ್ಪ ಕಾಜವರ ಅವರ ನಾಯಕತ್ವದಲ್ಲಿ ಊರವರೆಲ್ಲರೂ ಸೇರಿ ಸಂಘಟಿಸಿರುವ ಈ ಕಂಬಳವು ಕರಾವಳಿ ಭಾಗದ ಸೊಗಡನ್ನು ಎತ್ತಿ ಹಿಡಿಯುತ್ತಿದೆ. ಕೆಸರ ರಾಶಿಯಲ್ಲಿ ಕೋಣಗಳ ಹೆಜ್ಜೆ ಸದ್ದು ಕಿವಿಗೆ ಸಂಗೀತದಂತೆ ಆಹ್ಲಾದ ನೀಡಿತು.

ಈ ವೇಳೆ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್, ಎಸ್‌ ಸಿಡಿಸಿಸಿ ಅಧ್ಯಕ್ಷರಾದ ಡಾ.ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

#ನರಿಂಗಾನ | #ಕಂಬಳ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ