ಬೆಳಗಾವಿ ಪಂಚಭಾಷಾ ಪರಿಸರ ಹೊಂದಿದೆ.ಗೋವಾ ಹಾಗೂ ಮಹಾರಾಷ್ಟ್ರರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮವಲ್ಲ. ಅದು ಬದುಕಿನ ಧ್ವನಿ. ಗಡಿ ವಿವಾದಗಳ ನಡುವೆ ಕನ್ನಡ ಅಸ್ಮಿತೆ ಇಲ್ಲಿ ಬಲವಾಗಿ ಬೆಳಗಿದೆ. ಈ ಬೆಳವಣಿಗೆಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ನೈತಿಕ ಶಕ್ತಿಗಳಾಗಿ ಕೆಎಲ್‌ಇ ಸಂಸ್ಥೆ ನಾಗನೂರು ರುದ್ರಾಕ್ಷಿಮಠ ಕನ್ನಡ ಕಟ್ಟುವಲ್ಲಿ ಅನನ್ಯ ಕೊಡುಗೆ ನೀಡಿವೆ. ಚನ್ನಮ್ಮ ವೃತ್ತ ಕನ್ನಡ ನಾಡಿನ ಹೋರಾಟ ಹಾಗೂ ಸಂಭ್ರಮಕ್ಕೆ ಸಾಕ್ಷಿಯಾಗಿ ಕನ್ನಡ ಅಸ್ಥಿತೆಯಾಗಿದೆ. ಕೆಎಲ್ ಇ ಸಂಸ್ಥೆ ಕನ್ನಡ ಡಿಂಡಿಮ ಕನ್ನಡಾಭಿಮಾನವನ್ನು ಮೌಲ್ಯಾಧಾರಿತಗೊಳಿಸಿದರೆ,
ನಾಗನೂರು ರುದ್ರಾಕ್ಷಿಮಠದ ಆಶ್ರಯದಲ್ಲಿ ಶಿಕ್ಷಣ ಹಾಗೂ ಸಾಹಿತ್ಯದ ಶರಣ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಲೆಯನ್ನು ಎತ್ತಿ ಹಿಡಿದು ಕರ್ನಾಟಕ ಹಿರಿಮೆ ಸಾರಿದೆ. ಕೆಎಲ್‌ಇ ಸಂಸ್ಥೆ ಮತ್ತು ನಾಗನೂರು ಮಠದ ವಿಶೇಷ ಕಾಳಜಿಯಿಂದಾಗಿ ಬೆಳಗಾವಿ ಇಂದು ಕೇವಲ ಗಡಿ ನಗರವಾಗಿ ಉಳಿದಿಲ್ಲ. ಕನ್ನಡ ಅಸ್ಮಿತೆಯಾಗಿ ಕನ್ನಡಿಗರ ಭಾವನೆಯಲ್ಲಿ ಬೇರೂರಿದೆ. ಕೆಎಲ್‌ಇ ಸಂಸ್ಥೆ ಕನ್ನಡದ ಶೈಕ್ಷಣಿಕ ಹಾಗೂ ಸಾಹಿತ್ಯಕ ಶಕ್ತಿ, ನಾಗನೂರು ಮಠ ಧಾರ್ಮಿಕ ಹಾಗೂ ಸಾಂಸ್ಕೃತಿಕ ಶಕ್ತಿ ಮತ್ತು ಚನ್ನಮ್ಮ ವೃತ್ತ ಹೋರಾಟದ ಶಕ್ತಿಗಳ ಸಂಗಮ.ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಪ್ರತಿವರ್ಷ ಹೊಸ ಪೀಳಿಗೆಯ ಕನ್ನಡಿಗರು ಧ್ವಜ ಹಿಡಿದು ಸಂಭ್ರಮಿಸುತ್ತಾರೆ. ಶಿಕ್ಷಣ, ಧರ್ಮ ಮತ್ತು ಹೋರಾಟಗಳಿಗೆ ವೇದಿಕೆಯಾಗಿ ಚೆನ್ನಮ್ಮ ವೃತ್ತವು ಬೆಳಗಾವಿಯ ಹೃದಯವೇ ಆಗಿದೆ. ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ ಕನ್ನಡಿಗರ ಧೈರ್ಯ, ಶೌರ್ಯ ಹಾಗೂ ಸ್ವಾಭಿಮಾನ, ಹೋರಾಟದ ಪ್ರತೀಕವಾಗಿ ನಿಂತಿದೆ. ವರ್ಷವಿಡೀ ಹಲವು ಸಂಘಟನಾ ಕಾರ್ಯಕ್ಕೆ ಸಾಕ್ಷಿಯಾಗುವ ಈ ವೃತ್ತದಲ್ಲಿ ಪ್ರತಿ ಬಾರಿ ನ.1ರ ರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿರುವ ಚನ್ನಮ್ಮ ವೃತ್ತ ಇಂದಿಗೂ ಜೀವಂತ ಸಾಕ್ಷಿ .ಒಂದು ಕಾಲದಲ್ಲಿ ಮರಾಠಿಯೇ ಹೆಚ್ಚು ಬಳಕೆಯಲ್ಲಿದ್ದ ಸಂದರ್ಭದಲ್ಲಿ ಕನ್ನಡ ಅಸ್ಮಿತೆಗೆ ಶಕ್ತಿ ತುಂಬುವ ಕಾರ್ಯ ಆರಂಭಿಸಿದ್ದೇ ಕೆಎಲ್‌ಇ ಸಂಸ್ಥೆ. ಸಂಸ್ಥೆಯು ಕೇವಲ ಶಿಕ್ಷಣ ಸಾರುವ ಶಾಲೆ-ಕಾಲೇಜುಗಳನ್ನು ಮಾತ್ರವೇ ಕಟ್ಟಿಲ್ಲ. ಅದೆಲ್ಲದಕ್ಕೂ ಮುಖ್ಯವಾಗಿ ಗಡಿನಾಡಿನಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದೆ ಎನ್ನುವುದು ಅಭಿಮಾನದ ಸಂಗತಿ.
“ನಮ್ಮ ಕಾಲದಲ್ಲಿ ಈ ಚಳುವಳಿ ಕುರಿತಾಗಿ ಮಾಹಿತಿಗಳು ಕೇವಲ ತ ಪುಸ್ತಕಗಳಲ್ಲಿ ಮಾತ್ರ ಸಿಗುತ್ತಿತ್ತು. ಈಗ ಎಐ ಏನೇ ಕೇಳಿದರೂ ಹೇಳುತ್ತದೆ. ಆದರೆ ಪುಸ್ತಕ ಓದುವ ಅಭಿರುಚಿಯೇ ವಿಶಿಷ್ಟವಾದ ಪ್ರತ್ಯೇಕ ಅನುಭವ ನೀಡುತ್ತದೆ. ಇತ್ತೀಚೆಗೆ ನಾವು ಸೊಸಿಯಲ್ ಮಿಡಿಯಾದಲ್ಲಿ ಕನ್ನಡ ರಾಜ್ಯೋತ್ಸವ ಅಂತ ಪೊಸ್ಟ್ ರ್ ನೋಡುತ್ತೇವೆ.ಅದು ತಪ್ಪು ಮಾಹಿತಿಯಾಗಿದೆ.ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷಗಳ ಇತಿಹಾಸವಿದೆ.
ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯ ಮಾಡಿದಾಗ ಕನ್ನಡ ಭಾಷಿಕರಿಗಾಗಿ ಗಡಿ ಗುರುತಿಸಿ ಘೋಷಿಸಿದ ರಾಜ್ಯ ಮೈಸೂರು ರಾಜ್ಯ ನಂತರ ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಲಾಯಿತು
ಕರ್ನಾಟಕ ರಾಜ್ಯೋತ್ಸವವನ್ನು ನಾವು ಪ್ರತಿವರ್ಷ ಅತೀ ಸಂಭ್ರಮದಿಂದ ಆಚರಿಸುತ್ತೇವೆ, ಆದರೆ ಅದು ಕೇವಲ ಕನ್ನಡದ ಹಬ್ಬವಲ್ಲ ಅದು ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ಈ ರಾಜ್ಯವನ್ನು ಕಟ್ಟಲು ನಡೆದ ಹೋರಾಟವೇ ಏಕೀಕರಣ ಚಳುವಳಿ,” ಎಂದು ಅವರು ಹೇಳಿದರು.
ನಾಡಿನ ಇತಿಹಾಸದ ಅರಿವು ಇಂದಿಗೂ ಅಗತ್ಯವಿದೆ ಎಂದು ಹೇಳಿದರು. “ಭಾಷಿಕ ಸಮುದಾಯ ರಾಜ್ಯವನ್ನು ಏಕೀಕರಿಸಿ ಹಿಡಿದಿಟ್ಟುಕೊಳ್ಳಬಲ್ಲದು ಎಂಬುದನ್ನು ಕರ್ನಾಟಕ ತೋರಿಸಿದೆ. ಬೆಳಗಾವಿಯ ಗಡಿ ಭಾಗದಲ್ಲಿ ಅನೇಕ ಹೋರಾಟಗಾರರು, ಸಂಘ-ಸಂಸ್ಥೆಗಳು, ಮಹನೀಯರು ತ್ಯಾಗ ಮಾಡಿದ್ದರಿಂದಲೇ ಏಕೀಕರಣ ಸಾಧ್ಯವಾಯಿತು,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ರಾಜ್ಯೋತ್ಸವದಂದು ಕೆಂಪು- ಹಳದಿ ಧ್ವಜಗಳ ಹಾರಾಟ ಲಕ್ಷಾಂತರ ಜನರನ್ನು ಆಹ್ವಾನಿಸುತ್ತಲೇ,ಕನ್ನಡ ನೆಲ, ಜಲ, ಭಾಷೆ, ಗಡಿ ರಕ್ಷಣೆಯೊಂದಿಗೆ ಕನ್ನಡದ ಕಟ್ಟಾಳುವೆನಿಸಿ ಜನಜನಿತರಾಗಿದ್ದ ಚಿಂಚಣಿ ಸಿದ್ಧ ಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಸ್ವಾಮಿಗಳ ನೆನಪು ಈ ಭಾಗದ ಕನ್ನಡಿಗರಿಗೆ ರಾಜ್ಯೋತ್ಸವದ ಹೊಸ್ತಿಲಲ್ಲಿ ಮತ್ತೆ ಕಾಡುತ್ತಿದೆ.ಶ್ರೀಗಳ ಮಠ ಧಾರ್ಮಿಕ ಕಾರ್ಯಗಳೊಂದಿಗೆ ಕನ್ನಡದ ಕಾರ್ಯಕ್ರಮಗಳಿಂದ ‘ಕನ್ನಡ ಮಠ’ ಎಂದೇ ಖ್ಯಾತಿ ಪಡೆದಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗ್ರಾಮಗಳಾದ ಕಾರದಗಾ, ಗಡಿ ಭೋಜ, ಚಾಂದಶಿರದವಾಡ ಸೇರಿ ಹಲವು ಗ್ರಾಮಗಳಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬಹಿರಂಗ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ಪಡೆದು ಆರಂಭಿಸಿದ ಕನ್ನಡ ರಾಜ್ಯೋತ್ಸವ ಗಡಿ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ, ಬೆಳಗಾವಿಯ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಲ್. ಪಾಟೀಲರು ವಹಿಸಿ ಮಾತನಾಡುತ್ತ
ಪ್ರತಿ ವರ್ಷ ಡಿ.5ರಿಂದ 8ರವರೆಗೆ ನಡೆಯುವ ಶಿವಬಸವ ಜಯಂತಿ ಮಹೋತ್ಸವ ಕೇವಲ ಧಾರ್ಮಿಕ ಉತ್ಸವವಲ್ಲ; ಅದು ಕನ್ನಡದ ನಾಡು ನುಡಿಗೆ ನಮನ ಮಹೋತ್ಸವ ಎಂಬಂತಾಗಿದೆ. ಪ್ರತಿ ವರ್ಷವೂ ಮೊದಲ ದಿನ ರಾಜ್ಯೋತ್ಸವವನ್ನು ಆಚರಿಸಿ, ‘ನುಡಿಶ್ರೀ’ ಪ್ರಶಸ್ತಿ ನೀಡಿ, ಕನ್ನಡ ಸೇವೆಯಲ್ಲಿ ತೊಡಗಿರುವ ಕಾರ್ಯಕರ್ತರನ್ನು ಗೌರವಿಸುವ ಪರಂಪರೆಯನ್ನು ಸ್ವಾಮೀಜಿಯವರು ರೂಪಿಸಿದ್ದಾರೆ. ಮಠವು ಧರ್ಮ, ಸಂಸ್ಕೃತಿ ಮತ್ತು ಭಾವನೆಗಳ ಸಮ್ಮಿಲನವಾಗಿ ಕನ್ನಡ ಹೋರಾಟಕ್ಕೂ ಕೈ ಜೋಡಿಸಿದ್ದು ಸ್ಮರಣೀಯ. ಕರ್ನಾಟಕ ಮತ್ತು ಕನ್ನಡ ಹಿರಿಮೆ ಎತ್ತಿ ಹಿಡಿದ ನಾಗನೂರು ರುದ್ರಾಕ್ಷಿ ಮಠದ ಸೇವೆ ಅನುಪಮವಾಗಿದೆ ಎಂದರು
ಕಾರ್ಯಕ್ರಮದ ಆರಂಭದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶಿವರಾಜ ಅರಳಿ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿ ಮಾತಾಡಿದರು. ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು .
ಕಾರ್ಯಕ್ರಮದಲ್ಲಿ ನಾಗನೂರ ಶ್ರೀ ರುದ್ರಾಕ್ಷಿ ಮಠದ ಶಿಕ್ಷಣ ಪ್ಮಹಾವಿದ್ಯಾಲಯದ ಬೋಧಕ ಹಾಗೂ ಆಡಳಿತ ವರ್ಗದ ಸದಸ್ಯರು ಭಾಗವಹಿಸಿದ್ದರು . ಕಾರ್ಯಕ್ರಮಕ್ಕೆ ಸ್ಥಳಿಯ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
Laxmi News 24×7