Breaking News
Home / ಜಿಲ್ಲೆ / ಬೆಳಗಾವಿ / ಬೆಳಗಾವಿ ಲೋಕಸಭೆ ಚುನಾವಣೆ, ಕಾಂಗ್ರೇಸ್ ಹಾಗೂ ಬಿಜೆಪಿ ಅಭ್ಯರ್ಥಿ ಗಳು ಯಾರು… ?

ಬೆಳಗಾವಿ ಲೋಕಸಭೆ ಚುನಾವಣೆ, ಕಾಂಗ್ರೇಸ್ ಹಾಗೂ ಬಿಜೆಪಿ ಅಭ್ಯರ್ಥಿ ಗಳು ಯಾರು… ?

Spread the love

ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಇನ್ನು 2 ತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಚಟುವಟಿಕೆ ತೀವ್ರಗೊಂಡಿದೆ.

ಭಾರತೀಯ ಜನತಾ ಪಾರ್ಟಿಯಲ್ಲಿ ಮೂವರು ಮಾಜಿ ಸಂಸದರು ಸರಿದಂತೆ ಹಲವರು ಕಣಕ್ಕಿಳಿಯುವ ಆಸಕ್ತಿ ತೋರಿಸುತ್ತಿದ್ದಾರೆ. ನಿತ್ಯ ಆಕಾಂಕ್ಷಿಗಳಿಂದ ಬರುವ ಫೋನ್ ಕರೆಗೆ ಸಂಘಪರಿವಾರದ ಮುಖಂಡರು ಬೇಸತ್ತಿದ್ದಾರೆ. ಆಕಾಂಕ್ಷಿಗಳು ಸಂಘಪರಿವಾರದ ಮುಖಂಡರಲ್ಲದೆ, ಬೆಂಗಳೂರು, ದೆಹಲಿಯ ಬಿಜೆಪಿ ನಾಯಕರ ಮನೆಯ ಕದವನ್ನೂ ತಟ್ಟುತ್ತಿದ್ದಾರೆ.

ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕೇಂದ್ರ ರೈಲ್ವೆ ಖಾತೆ ಸಚಿವರಾಗಿದ್ದ ಸುರೇಶ ಅಂಗಡಿ ಅವರ ಕುಟುಂಬಸ್ಥರೂ ಕಣಕ್ಕಿಳಿಯಲು ಆಸಕ್ತರಾಗಿದ್ದು, ಸುರೇಶ ಅಂಗಡಿ ಅವರ ದ್ವಿತೀಯ ಪುತ್ರಿ, ಸಚಿವ ಜಗದೀಶ ಶೆಟ್ಟರ್ ಸೊಸೆ ಶೃದ್ಧಾ ತಯಾರಿ ನಡೆಸುತ್ತಿದ್ದಾರೆ.

ಈ ಮಧ್ಯೆ ಭಾರತೀಯ ಜನತಾ ಪಾರ್ಟಿಯ ಪಾರ್ಲಿಮೆಂಟರಿ ಕಮಿಟಿ ತನ್ನದೇ ಆದ ವಿವಿಧ ಮೂಲಗಳಿಂದ ವರದಿ ತರಿಸಿಕೊಂಡಿದೆ.  ಸಂಘಪರಿವಾರದಿಂದ ಒಂದು ವರದಿ ತರಿಸಿಕೊಂಡಿರುವ ಬಿಜೆಪಿ ಹೈಕಮಾಂಡ್, ತನ್ನದೇ ಒಂದು ತಂಡವನ್ನು ಕಳಿಸಿ ಅದರಿಂದಲೂ ವರದಿ ಪಡೆದುಕೊಂಡಿದೆ. ಜೊತೆಗೆ ಕ್ಷೇತ್ರದ ಶಾಸಕರಿಂದಲೂ ಅಭಿಪ್ರಾಯ ಸಂಗ್ರಹಿಸಿದೆ. ಈ ಮೂರೂ ವರದಿಯನ್ನು ತಾಳೆ ಹಾಕಿ ಅಭ್ಯರ್ಥಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ.

ಜನೆವರಿ ಮಧ್ಯಭಾಗದಲ್ಲಿ ಚುನಾವಣೆ ದಿನಾಂಕ ಘೋಷಿಸುವ ಸಾಧ್ಯತೆ ಇದ್ದು, ಚುನಾವಣೆ ಫೆಬ್ರವರಿಯಲ್ಲಿ ನಡೆಯಬಹುದು. ಹಾಗಾಗಿ ಎರಡೂ ಪಕ್ಷಗಳು ಅಭ್ಯರ್ಥಿ ಆಯ್ಕೆಗೆ ತೀವ್ರ ಕಸರತ್ತು ನಡೆಸಿವೆ.


Spread the love

About Laxminews 24x7

Check Also

ಪಕ್ಷದಿಂದ ಟಿಕೆಟ್‌ ಘೋಷಣೆಯ ಮರುದಿನವೇ ಪ್ರಚಾರ’- ಶೆಟ್ಟರ್‌

Spread the loveಹುಬ್ಬಳ್ಳಿ:ಪಕ್ಷದಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಮರು ದಿನದಿಂದಲೇ ಬೆಳಗಾವಿಯಲ್ಲಿ ಪ್ರಚಾರ ಮಾಡಲಾಗುವುದು. ಒಂದೆರಡು ದಿನಗಳಲ್ಲಿಯೇ ಘೋಷಣೆ ಮಾಡುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ