Breaking News
Home / ಜಿಲ್ಲೆ / ಬೆಳಗಾವಿ / ಸಾವಿರ ಕಷ್ಟಗಳು ಬಂದ್ರೂ ಎದುರಿಸುವ ಶಕ್ತಿ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಯುವಕ ಪ್ರತ್ಯಕ್ಷ ಸಾಕ್ಷಿ

ಸಾವಿರ ಕಷ್ಟಗಳು ಬಂದ್ರೂ ಎದುರಿಸುವ ಶಕ್ತಿ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಯುವಕ ಪ್ರತ್ಯಕ್ಷ ಸಾಕ್ಷಿ

Spread the love

ಬೆಳಗಾವಿ: ಸಾಧಿಸುವ ಗುರಿಯೊಂದಿದ್ದರೆ ಸಾಕು, ಸಾವಿರ ಕಷ್ಟಗಳು ಬಂದ್ರೂ ಎದುರಿಸುವ ಶಕ್ತಿ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಇಲ್ಲೊಬ್ಬ ಯುವಕ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಕುಟುಂಬದ ಕಷ್ಟಗಳನ್ನೇ ತನ್ನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಫಾಸ್ಟೆಸ್ಟ್ ಸ್ಕೇಟಿಂಗ್‌ನಲ್ಲಿ ಗಿನ್ನೆಸ್​ ದಾಖಲೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹೌದು, ನಗರದ ಮಾಳಮಾರುತಿ ನಿವಾಸಿ ಸಂಜಯ ಹಾಗೂ ಸುಜಾತಾ ನವಲೆ ದಂಪತಿ ಪುತ್ರ ಅಭಿಷೇಕ ನವಲೆ 12.85 ಸೆಕೆಂಡ್ಸ್​​​ನಲ್ಲಿ 100 ಮೀಟರ್ ಕ್ರಮಿಸುವ ಮೂಲಕ ಫಾಸ್ಟೆಸ್ಟ್ ಸ್ಕೇಟಿಂಗ್‌ನಲ್ಲಿ ಗಿನ್ನೆಸ್​ ದಾಖಲೆ ಮಾಡಿದ್ದಾರೆ. ಈ ಮೊದಲು ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು 13.20 ಸೆಕೆಂಡ್ಸ್​​ನಲ್ಲಿ 100 ಮೀಟರ್ ಕ್ರಮಿಸಿ ಗಿನ್ನೆಸ್​ ದಾಖಲೆ ಮಾಡಿ ಮೊದಲ ಸ್ಥಾನದಲ್ಲಿದ್ದರು. ಇದೀಗ ಆ ದಾಖಲೆಯನ್ನು ಅಭಿಷೇಕ ನವಲೆ ಮುರಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಮತ್ತು ರಾಜ್ಯದ ಹೆಸರನ್ನು ಮಿಂಚುವಂತೆ ಮಾಡಿದ್ದಾರೆ.
ಅಭಿಷೇಕನ ತಂದೆ ಸಂಜಯ ನವಲೆ ಸದ್ಯ ಜೀವನ ನಿರ್ವಹಣೆಗೆ ಕೆಎಸ್‌ಆರ್‌ಟಿಸಿಯಲ್ಲಿ ಬೆಳಗಾವಿ ವಿಭಾಗದ ಬಸ್ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಂದ ಆದಾಯದಲ್ಲಿ ಮಗನ ತರಬೇತಿ ಜೊತೆಗೆ ಕುಟುಂಬ ನಿರ್ವಹಣೆ ಮಾಡಿಕೊಂಡು ಹೋಗುತ್ತಿದ್ದಾರೆ. ಮಗ ಇನ್ನಷ್ಟು ಉನ್ನತ ಸ್ಥಾನಕ್ಕೆ ಹೋಗಬೇಕು, ಒಲಿಂಪಿಕ್ ಸೇರಿದಂತೆ ಭಾರತದ ಪರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಕ್ರೀಡಾಪಟು ಆಗಬೇಕು ಎಂದು ಆಸೆ ಇಟ್ಟುಕೊಂಡಿರುವ ಅವರು, ಮಗನಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಉತ್ತಮ ತರಬೇತಿ ಕೊಡಿಸುತ್ತಿದ್ದಾರೆ.

ಇನ್ನು ತಾಯಿ ಸುಜಾತ ನವಲೆ ಹೇಳುವಂತೆ, ಸೋರುವ ಮನೆಗೆ ತಾಡಪತ್ರೆ ಹೊಂದಿಸಿ ಮನೆಯಲ್ಲಿರುವ ಬಂಗಾರ ಮಾರಿ ಅಂದು ಮಗನ ಸಾಧನೆಗೆ ಅವಕಾಶ ಮಾಡಿಕೊಟ್ಟಿದ್ದೆವು. ಅದರ ಫಲವಾಗಿ ಮಗ ಅಭಿಷೇಕ್ ಗೆದ್ದಿರುವ ಪದಕಗಳನ್ನು ಇಂದು ಮನೆಯಲ್ಲಿ ಇಡಲು ಜಾಗ ಸಾಲುತ್ತಿಲ್ಲ. ಕೇವಲ ನಾಲ್ಕು ವರ್ಷದವನಿದ್ದಾಗಲೇ ತನ್ನ ಗುರಿ ಬೆನ್ನಟ್ಟಿ ಸ್ಕೇಟಿಂಗ್​​ನಲ್ಲಿ ತನ್ನದೇ ಆದ ಹೆಸರು ಮಾಡಬೇಕೆಂಬ ಹಂಬಲದಿಂದ ಪ್ರಯತ್ನಕ್ಕಿಳಿದಿದ್ದಾನೆ. ಅಭಿಷೇಕನಿಗೆ 12ನೇ ವರ್ಷದಲ್ಲಿ ಪೋರ್ಚುಗಲ್ ದೇಶಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಆದ್ರೆ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದ ಆತನನ್ನು ವಿದೇಶಕ್ಕೆ ಕಳಿಸಲು ಮನೆಯಲ್ಲಿ ಬಿಡಿಗಾಸು ಹಣವಿಲ್ಲದಿದ್ದಾಗ ಮನೆಯಲ್ಲಿದ್ದ ಬಂಗಾರ ಮಾರಿ ಬಂದ ಹಣದಿಂದಲೇ ಆತನನ್ನು ವಿದೇಶಕ್ಕೆ ಕಳುಹಿಸಲಾಗಿತ್ತು. ಇದೀಗ ಅದರ ಫಲವಾಗಿ ಮಗ ಉತ್ತಮ ಸಾಧನೆ ಮಾಡುತ್ತಿದ್ದಾನೆ. ಮುಂದೊಂದು ದಿನ ದೇಶದ ಪರವಾಗಿ ಭಾಗಿಯಾಗುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಲಿ ಎಂಬ ಆಶಯ ವ್ಯಕ್ತಪಡಿಸಿದರು.

ಸ್ಕೇಟಿಂಗ್‌ನ ಕ್ರೀಡಾ ಜಗತ್ತಿನಲ್ಲಿ ತಮ್ಮ ಪಯಣ ಪ್ರಾರಂಭಿಸಿದ ಅಭಿಷೇಕ ಅನೇಕ ಬಾರಿ ರಾಷ್ಟ್ರ ಹಾಗೂ ರಾಜ್ಯಮಟ್ಟದ ಬಹುಮಾನ ಪಡೆದುಕೊಂಡಿದ್ದಾರೆ. ಮೂರು ಬಾರಿ ವರ್ಡ್ ರೆಕಾರ್ಡ್ ಅಕಾಡೆಮಿ, ಮೂರು ಬಾರಿ ಲಿಮ್ಕಾ ಬುಕ್, ಮೂರು ಬಾರಿ ಇಂಡಿಯಾ ಬುಕ್ ರೆಕಾರ್ಡ್ ಹೊಂದಿದ್ದು, ಇದೀಗ 12.85 ಸೆಕೆಂಡ್ಸ್​​​ನಲ್ಲಿ 100 ಮೀಟರ್ ಕ್ರಮಿಸುವ ಮೂಲಕ ಸ್ಕೇಟಿಂಗ್‌ನಲ್ಲಿ ಗಿನ್ನೆಸ್​ ದಾಖಲೆ ಮಾಡಿ ಕ್ರೀಡಾಲೋಕದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇಂತಹ ಸಾಧಕನಿಗೆ ರಾಜ್ಯ ಸರ್ಕಾರ ಮತ್ತಷ್ಟು ಪ್ರೋತ್ಸಾಹ ನೀಡಬೇಕಿದೆ ಎಂಬುದು ಎಲ್ಲರ ಒತ್ತಾಸೆ


Spread the love

About Laxminews 24x7

Check Also

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಕ್ಕೆ ಚಾನ್ಸೇ ಇಲ್ಲ

Spread the love ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ