Breaking News
Home / ಜಿಲ್ಲೆ / ಬೆಂಗಳೂರು / ಕ್ಯಾನ್ಸರ್ ಪೀಡಿತ ಮಕ್ಕಳ ಸೇವೆಯಲ್ಲಿ ಲಯನ್ಸ್ ಕ್ಲಬ್.

ಕ್ಯಾನ್ಸರ್ ಪೀಡಿತ ಮಕ್ಕಳ ಸೇವೆಯಲ್ಲಿ ಲಯನ್ಸ್ ಕ್ಲಬ್.

Spread the love

ಅಂತರರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾದ ಲಯನ್ಸ್ ಕ್ಲಬ್ ಸದಾ ಸಮಾಜದ ಪಿಡುಗುಗಳ ವಿರುದ್ಧ ಹೋರಾಡುತ್ತಾ ಸ್ವಸ್ಥ ಸಮಾಜಕ್ಕಾಗಿ ಪರಿಶ್ರಮಿಸುತ್ತಿರುವ ಸಂಸ್ಥೆ.
ಲಯನ್ಸ್ ಸಂಸ್ಥೆ ಜಿಲ್ಲೆ 317F ವತಿಯಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ, ಕ್ಯಾನ್ಸರ್ ಪೀಡಿತರಾಗಿ ತಮ್ಮ ಜೀವನದ ಕೊನೆಯ ಕ್ಷಣಗಳನ್ನು ಕಳೆಯುತ್ತಿರುವಂತಹ ಮಕ್ಕಳ ಮನೋರಂಜನೆಗಾಗಿ ಪ್ರತಿವರ್ಷದಂತೆ ಈ ವರ್ಷವೂ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಶ್ರೀಮತಿ ಶೋಭಾ ಶ್ರೀನಿವಾಸ್ ರವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಲಯನ್ಸ್ ಕ್ಲಬ್ ನ ಗೌರ್ನರ್ ದೀಪಕ್ ಸುಮನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಯನ್ಸ್ ಕ್ಲಬ್ ರಾಯಲ್ ಪ್ಯಾಲೇಸ್ ನ ಅಧ್ಯಕ್ಷರಾದ ಶಿವಕುಮಾರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ಸಿಂಧು ಸುಮನ್, ರವೀಂದ್ರ ಸಿಂಗ್, ಆಕಾಶ್, ಶ್ರೀನಿವಾಸ್, ಸಿಂಹ ಶಾಸ್ತ್ರಿ ವರಲಕ್ಷ್ಮಿಕುಮಾರ್, ಶ್ರೀನಿವಾಸ್ ಅಡ್ವೋಕೇಟ್ , ವೆಂಕಟಶಿವಾರೆಡ್ಡಿ, ಪೂಜಿತ ಮತ್ತು ಅನೇಕ ಪುಟಾಣಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಇಷ್ಟವಾದ ಆಟಿಕೆಗಳು, ಉಡುಗೊರೆಗಳನ್ನು ಕೊಟ್ಟು, ಅವರಿಗೆ ಪ್ರಿಯವಾದ ತಿಂಡಿ ತಿನಿಸುಗಳನ್ನು ನೀಡಿ, ಒಂದಿಡೀ ದಿನ ಅವರ ಜೊತೆ ಆಟವಾಡಿ, ಅವರನ್ನು ನಕ್ಕು ನಲಿಸಿ, ಅವರ ನೋವನ್ನು ಮರೆಸಲಾಯಿತು. ತಲೆಗೂದಲು ಉದುರಿರುವ ಕೆಲವು ಮಕ್ಕಳಿಗೆ ಕೀಳಿರಿಮೆ ಕಾಡಬಾರದೆಂದು ಪೂಜಿತ ಎಂಬ ಬಾಲಕಿಯೊಬ್ಬಳು ತನ್ನ ಕೇಶಮುಂಡನ ಮಾಡಿಕೊಂಡು, ಅಂತಹ ಮಕ್ಕಳಿಗೆ ವಿಗ್ ರೀತಿ ಉಪಯೋಗಿಸಲು ದಾನಮಾಡಿದ್ದಂತೂ ನೆರೆದವರ ಕಣ್ಣಾಲಿಗಳಲ್ಲಿ ನೀರು ತರಿಸಿತು. ಸಮಾಜದಲ್ಲಿ ನಾವು ಒಬ್ಬಂಟಿಗಳಲ್ಲ. ನಮ್ಮ ಜೊತೆ ಇಡೀ ಸಮಾಜ ಇದೆ ಎಂಬ ಭಾವನೆ ಅವರಲ್ಲಿ ಮೂಡಿಸುವಲ್ಲಿ ಲಯನ್ಸ್ ಕ್ಲಬ್ ಯಶಸ್ವಿಯಾಯಿತು.

_✍️ ಮಣ್ಣೆ ಮೋಹನ್
ಬೆಂಗಳೂರು ನಗರ ಜಿಲ್ಲಾ ಸಂಚಾಲಕರು,
ಕನ್ನಡ ಸಾಹಿತ್ಯ ಪರಿಷತ್.
ಬೆಂಗಳೂರು ನಗರ ಜಿಲ್ಲಾಧ್ಯಕ್ಷರು,
ಬೆಂಗಳೂರು ಪ್ರೆಸ್ ಕ್ಲಬ್ ಕೌನ್ಸಿಲ್
ಫೋನ್: 6360507617
email: [email protected]


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ