Breaking News
Home / ಜಿಲ್ಲೆ / ಚಿಕ್ಕ ಮಂಗಳೂರು / ಪರಿಷತ್​ನಲ್ಲಿ ನಡೆದ ಗದ್ದಲದಲ್ಲಿ ಮೂರು ಪಕ್ಷದವರು ತಪ್ಪಿಸ್ಥರೇ, : ಮಾಜಿ ಸಭಾಪತಿ ಬಿ.ಎಲ್.ಶಂಕರ್

ಪರಿಷತ್​ನಲ್ಲಿ ನಡೆದ ಗದ್ದಲದಲ್ಲಿ ಮೂರು ಪಕ್ಷದವರು ತಪ್ಪಿಸ್ಥರೇ, : ಮಾಜಿ ಸಭಾಪತಿ ಬಿ.ಎಲ್.ಶಂಕರ್

Spread the love

ಚಿಕ್ಕಮಗಳೂರು: ಮೊನ್ನೆ ವಿಧಾನಪರಿಷತ್ ನಲ್ಲಿ ನಡೆದ ಗದ್ದಲದಲ್ಲಿ ಮೂರು ಪಕ್ಷದವರ ತಪ್ಪು ಎದ್ದು ಕಾಣಿಸುತ್ತಿದ್ದು, ಎಲ್ಲರೂ ತಪ್ಪಿಸ್ಥರೇ. ಸಭಾಪತಿ, ಉಪಸಭಾಪತಿ, ಆಡಳಿತ, ವಿರೋಧ ಪಕ್ಷದವರು ಇದರ ಹೊಣೆ ಹೊರಬೇಕು ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ನಲ್ಲಿ ನಡೆದ ಗದ್ದಲದಲ್ಲಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ದೊಡ್ಡ ತಪ್ಪು ಮಾಡಿದ್ದಾರೆ. ಅವರ ನೈತಿಕತೆಗೆ ಇದು ದೊಡ್ಡ ಸವಾಲಾಗಿದೆ. ಅವರಿಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿದೆ. ಆದರೂ ಸಭಾಪತಿ ಇದ್ದರೂ ಕೂಡ ಅವರ ಬಾಗಿಲು ಬಂದ್ ಮಾಡಿ ಆ ಸ್ಥಾನದಲ್ಲಿ ಧರ್ಮೆಗೌಡ ಕೂರಬಾರದಿತ್ತು. ಇನ್ನು ಅವರನ್ನು ಸಭಾಪತಿ ಚೇರ್​ನಿಂದಆಡಳಿತ ಪಕ್ಷದವರು ಸಭಾಪತಿಯನ್ನು ಇಳಿಸಬೇಕೆಂದಿದ್ದರೆ 14 ದಿನ ಕಾಯಬಹುದಿತ್ತು. ತಾಳ್ಮೆಯಿಂದ ಕಾಯಬೇಕಿತ್ತು. ಸಭಾಪತಿಗಳು ಕಚೇರಿಯಲ್ಲಿದ್ದರೂ ಸದನಕ್ಕೆ ಬಾರದಂತೆ ಮಾಡಿದ್ದು ದೊಡ್ಡ ತಪ್ಪು. ಅವರು ಸದನಕ್ಕೆ ಬರದಂತೆ ಬಾಗಿಲು ಹಾಕಿ ಉಪಾಸಭಾಪತಿಯನ್ನು ಬಲತ್ಕಾರವಾಗಿ ಕೂರಿಸಿರೋದು ಸರಿಯಲ್ಲ. ಪರಿಷತ್ ನಲ್ಲಿ ಈ ಹಂತಕ್ಕೆ ಹೋಗದಂತೆ ಆಡಳಿತ ಪಕ್ಷದವರು ನೋಡಿಕೊಳ್ಳಬಹುದಿತ್ತು. ಇದು ಎಲ್ಲಾ ಪಕ್ಷದವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರಿಂದ ಹೀಗೆ ಗದ್ದಲ ನಡೆದುಹೊಯ್ತು ಎಂದು ಮೂರು ಪಕ್ಷದ ಶಾಸಕರ ವಿರುದ್ಧ ಮಾಜಿ ಸಭಾಪತಿ ಅಸಮಾಧಾನ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

Spread the loveಚಿಕ್ಕಮಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಪಕ್ಷದ ವಿರುದ್ಧವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ