Breaking News

ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ವಾಪಸ ಆದ ಸುನಿತಾ ಮತ್ತು ಬುಚ್

Spread the love

ಅಂತರಿಕ್ಷ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಲೋರ್ ಕೊನೆಗೂ ತಮ್ಮ ಸುಧೀರ್ಘ ಅಂತರಿಕ್ಷ ಪಯಣ ಮುಗಿಸಿ ಭೂಮಿಗೆ ಮರಳಿದ್ದಾರೆ. 

ಕೇವಲ 9 ದಿನಗಳ ಬಾಹ್ಯಾಕಾಶ ಪಯಣಕ್ಕಾಗಿ ಹೊರಟಿದ್ದ ಸುನಿತಾ ಮತ್ತು ಬುಚ್ ತಾಂತ್ರಿಕ ತೊಂದರೆಯಿಂದಾಗಿ 9 ತಿಂಗಳ ಕಾಲ ಅಂತರಿಕ್ಷದಲ್ಲೇ ಉಳಿಯುವಂತಾಗಿತ್ತು.

ಕೃಶ ಶರೀರವಾಗಿರುವ ಬುಚ್ ಮತ್ತು ಸುನೀತಾ ಭೂಮಿಗೆ ಬಂದೊಡನೆ ಎಲ್ಲರತ್ತಾ ಕೈಬೀಸಿ ನಗುಬೀರಿದರು. ಇನ್ನು ಮುಂದಿನ 45 ದಿನ ಅವರಿಗೆ ಆರೈಕೆ ನೀಡಲಾಗುತ್ತಿದ್ದು ಬೆಚ್ಚಗಿನ ಉಡುಗೆ ಮತ್ತು ಪೋಷಕಾಂಶ ಉಳ್ಳ ಆಹಾರ ನೀಡುವುದಾಗಿ ನಾಸಾ ತಿಳಿಸಿದೆ.

ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದು, ನಾವು ಜನರಿಗೆ ನೀಡಿದ್ದ ವಚನವನ್ನು ಉಳಿಸಿಕೊಂಡಿದ್ದೇವೆ. ಸುನಿತಾ ಮತ್ತು ಬುಚ್ ತಂಡವನ್ನು ಯಶಸ್ವಿಯಾಗಿ ಭೂಮಿಗೆ ತರಲು ಇಂದು ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ