Breaking News

ವಲಸೆ ಕಾಮಿರ್ಕರಿಗೆ ನೆರವಾದ ಸೋನ್ ಸೂದ ಬಿಜೆಪಿಯ ಕೈಗೊಂಬೆ – ಶಿವಸೇನೆ

Spread the love

ಮುಂಬೈ: ಮಹಾರಾಷ್ಟ್ರದಲ್ಲಿ ವಲಸೆ ಕಾಮಿರ್ಕರಿಗೆ ನೆರವಾದ ಸೋನ್ ಸೂದ್ ಅವರನ್ನು ಶಿವಸೇನೆ ವ್ಯಂಗ್ಯವಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ.

ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಕೊರೊನಾ ವೈರಸ್ ಲಾಕ್‍ಡೌನ್ ಸಮಯದಲ್ಲಿ ಹೊಸ ಮಹಾತ್ಮನ ಜನ್ಮವಾಗಿದೆ ಎಂದು ಬರೆದುಕೊಂಡಿದ್ದಾರೆ.

ಸೋನ್ ಸೂದ್ ಲಕ್ಷಾಂತರ ವಲಸಿಗರನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಯಾಗುತ್ತಿದೆ. ಮಹಾರಾಷ್ಟ್ರ ರಾಜ್ಯಪಾಲರು ಸೋನ್ ಸೂದ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಇದನ್ನು ಗಮನಿಸಿದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಯಾವುದೇ ಕೆಲಸ ಮಾಡಲಿಲ್ಲ ಎಂಬ ಭಾವನೆ ಬರುತ್ತದೆ. ಲಾಕ್‍ಡೌನ್ ಸಮಯದಲ್ಲಿ ಇಷ್ಟೊಂದು ಬಸ್‍ಗಳು ಸೋನ್ ಸೂದ್ ಅವರಿಗೆ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಕ್ರಾಂತಿಯಲ್ಲಿ ಮಹಾರಾಷ್ಟ್ರ ಜ್ಯೋತಿರಾವ್ ಪುಲೆ, ಬಾಬಾ ಆಮ್ಟೆ ಅವರನ್ನು ನೋಡಿದೆ ಲಾಕ್ಡೌನ್ ಅವಧಿಯಲ್ಲಿ ಸಾಮಾಜಿಕ ಕ್ರಾಂತಿಯ ಹೊಸ ಪಟ್ಟಿಯಲ್ಲಿ ಸೂನುಸೂದ್ ನೋಡುತ್ತಿದ್ದೇವೆ ಎಂದು ವಿಡಂಬನೆ ಮಾಡಿದ್ದಾರೆ.

ರಾಜ್ಯಗಳು ವಲಸೆ ಕಾರ್ಮಿಕರನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವಾಗ ಈ ಕಾರ್ಮಿಕರು ಎಲ್ಲಿಗೆ ಹೋಗುತ್ತಿದ್ದಾರೆ. ಶಿವಸೇನೆ ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಟೀಕಿಸಲು ಬಿಜೆಪಿ ಸೋನುಸೂದ್ ಅವರನ್ನು ಬಳಸಿಕೊಂಡಿದೆ ದೂರಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ರಾವತ್, ಸೋನ್ ಸೂದ್ ಉತ್ತಮ ನಟ. ಚಲನ ಚಿತ್ರದಲ್ಲಿ ನಿರ್ದೇಶಕರು ಹೇಳಿದಂತೆ ಸೋನ್ ಸೂದ್ ನಟಿಸುತ್ತಾರೆ. ಈಗ ಈ ವಿಚಾರದಲ್ಲೂ ಸೋನ ಸೂದ್ ಹಿಂದೆ ರಾಜಕೀಯ ನಿರ್ದೇಶಕರು ಇದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸೋನ್ ಸೋದ್ ಸಹಾಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದ ಬಗ್ಗೆ ನನಗೆ ಆಸಕ್ತಿ ಇಲ್ಲ. ಯಾರದರೂ ಆಹ್ವಾನ ನೀಡಿದರೂ ನಾನು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರು ಸೋನ್ ಸೂದ್ ಅವರನ್ನು ರಾಜಭವನಕ್ಕೆ ಆಹ್ವಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಭೆಯ ಚಿತ್ರಗಳನ್ನು ಹಂಚಿಕೊಂಡ ಭಗತ್ ಸಿಂಗ್ ಕೊಶಿಯಾರಿ, ಲಾಕ್ ಡೌನ್ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ವಾಪಸ್ ಕಳುಹಿಸುವಲ್ಲಿ ಸೋನು ಸೂದ್ ಮಾಡಿದ ಪ್ರಯತ್ನವನ್ನು ಶ್ಲಾಘಿಸಿದರು.


Spread the love

About Laxminews 24x7

Check Also

ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ ಕಾನ್ಸ್ಟೇಬಲ್’ನನ್ನು ಸಸ್ಪೆಂಡ್ ಮಾಡಿದ ಕಮಿಷನರ್ ಶಶಿಕುಮಾರ್

Spread the loveಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷನ ಮೇಲೆ ಹಲ್ಲೆ ಮಾಡಿದ ಕಾನ್ಸ್ಟೇಬಲ್’ನನ್ನು ಸಸ್ಪೆಂಡ್ ಮಾಡಿದ ಕಮಿಷನರ್ ಶಶಿಕುಮಾರ್ ಗ್ರಾಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ