Breaking News

ನಿರಾಶ್ರಿತರಿಗೆ ನೆರವಿನ ಹಸ್ತ ಚಾಚಿದ ನಟ ಸೋನುಸೂದ್

Spread the love

ಮುಂಬೈ, ಜೂ.5- ತೆರೆಯ ಮೇಲೆ ವಿಲನ್ ಆಗಿರುವ ಸೋನುಸೂದ್ ನಿಜ ಜೀವನದಲ್ಲಿ ಹೀರೋ ಆಗುವ ಮೂಲಕ ಗಮನ ಸೆಳೆಯುತ್ತಿದ್ದಾರೆ.ಇತ್ತೀಚೆಗೆ ಕೊರೊನಾ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ 177 ಯುವತಿಯರನ್ನು ರಕ್ಷಿಸಿ ಅವರ ತವರಿಗೆ ತೆರಳಲು ಸಹಾಯ ಮಾಡಿದ್ದ ಸೋನುಸೂದ್ ಈಗ ಚಂಡಮಾರುತಕ್ಕೆ ಸಿಲುಕಿದ್ದ ಕುಟುಂಬದವರ ನೆರವಿಗೆ ಧಾವಿಸಿದ್ದಾರೆ.

ಚಂಡಮಾರುತದ ಆರ್ಭಟಕ್ಕೆ ಸಿಲುಕಿ ಕಂಗಲಾಗಿದ್ದ 28 ಸಾವಿರ ನಿರಾಶ್ರಿತರಿಗೆ ಆಹಾರ, ಆಶ್ರಯದ ವ್ಯವಸ್ಥೆಯನ್ನು ಮಾಡುವ ಮೂಲಕ ಅವರಿಗೆ ನೆರವು ನೀಡಿದ್ದಾರೆ.ಇಂದು ನಾವು ಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ, ಸೆಲಬ್ರಿಟಿಗಳು ಹಾಗೂ ಜನಸಾಮಾನ್ಯರು ತಮ್ಮ ಕೈಲಾದ ಸಹಾಯವನ್ನು ಮಾಡುವುದು ಎಲ್ಲರ ಧರ್ಮ, ನಾನು ಕೂಡ ಸಹಾಯದ ಹಸ್ತ ಚಾಚಿದ್ದು ಮುಂಬೈ ಕರಾವಳಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 28 ಸಾವಿರ ಜನರಿಗೆ ಆಹಾರವನ್ನು ಒದಗಿಸಿರುವುದರೊಂದಿಗೆ ಶಾಲಾ, ಕಾಲೇಜಿನಲ್ಲಿ ಉಳಿದುಕೊಳ್ಳಲು ನೆರವು ನೀಡಿದ್ದೇನೆ, ಚಂಡಮಾರುತದಲ್ಲಿ 200 ಮಂದಿ ಅಸ್ಸಾಂನ ವಲಸಿಗರು ಸಿಲುಕಿದ್ದರು ಅವರನ್ನು ಅವರ ಊರುಗಳಿಗೆ ಕಳಿಸಿಕೊಟ್ಟಿದ್ದೇನೆ ಎಂದು ಹೇಳಿದರು.


Spread the love

About Laxminews 24x7

Check Also

‘ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯ: ಸತೀಶ ಜಾರಕಿಹೊಳಿ

Spread the loveಬೆಳಗಾವಿ: ”ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯವಾಗುತ್ತದೆ” ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ